ಒಲಿದಾಗ ನಾರಿಯಾಗಿದ್ದ ಹೆಣ್ಣು, ಮುಣಿದಾಗ ಮಾರಿಯಾದಳೆ??

ಒಲಿದಾಗ ನಾರಿಯಾಗಿದ್ದ ಹೆಣ್ಣು, ಮುಣಿದಾಗ ಮಾರಿಯಾದಳೆ??

ಬಿಜೆಪಿ ನಾಯಕನಿಗೆ “ನೀನೇ ಸಾಕಿದಾ ಗಿಣಿ, ನಿನ್ನ ಹದ್ದಾಗಿ ಕುಕ್ಕಿತ್ತಲ್ಲೋ” ಎನ್ನುವ ಸ್ಥಿತಿಯೇ??

ಬೆಳಗಾವಿ : ಕೆಲ ದಿನಗಳ ಹಿಂದೆ ನಗರದ ಗಣೇಶಪುರದ ಒಬ್ಬ ನವವಿವಾಹಿತೆ ತನ್ನ ಪತಿ ಹಾಗೂ ಮನೆಯವರು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಜೊತೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು, ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿ, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು..

ಆದರೆ ಅದೇ ಯುವತಿ ನಿನ್ನೆ ರಾತ್ರಿ ನಗರದ ಪೊಲೀಸ್ ಕಮಿಷನರ್ ಕಚೇರಿಗೆ ಬಂದು ನನಗೆ ಕಿರುಕುಳ ಕೊಟ್ಟಿದ್ದು ನನ್ನ ಗಂಡನ ಮನೆಯವರು ಅಲ್ಲಾ ಬದಲಾಗಿ, ಬಿಜೆಪಿ ಮುಖಂಡ, ಆತನ ಮಗ ಹಾಗೂ ಸಂಗಡಿಗರು ಎಂದು ಆರೋಪ ಮಾಡಿ ದೂರು ನೀಡಿದ್ದಾಳೆ.

ಈ ಯುವತಿ ನೀಡಿದ ದೂರಿನ ಅನ್ವಯ ಬಿಜೆಪಿ ಮುಖಂಡ ಹಾಗೂ ಅವನ ಸಹಚರರ ಮೇಲೆ ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಜೆಪಿ ಮುಖಂಡ ತನಗೆ ಲೈಂಗಿಕ ಕಿರುಕುಳ ನೀಡಿದ್ದು, ಒತ್ತಾಯಪೂರ್ವಕವಾಗಿ ನನಗೆ ಮದುವೆ ಮಾಡಿಸಿದ್ದನು, ಇಷ್ಟೆಲ್ಲಾ ಆದರೂ ನಮ್ಮ ಸಂಸಾರ ಚೆನ್ನಾಗಿ ನಡೆದಿತ್ತು, ಆದರೆ ಅದನ್ನು ಹಾಳು ಮಾಡಿ, ನನಗೆ ಹೆದರಿಸಿ, ಬೆದರಿಸಿ ವಿಷ ಕುಡಿಯಲು ಒತ್ತಾಯಿಸಿ, ನನ್ನ ಗಂಡ ಹಾಗೂ ಆತನ ಮನೆಯವರ ಮೇಲೆ ವರದಕ್ಷಿಣೆ ಆರೋಪ ಮಾಡುವಂತೆ ಒತ್ತಾಯಿಸಿದ್ದ, ಅದಕ್ಕಾಗಿ ನಾನು ಅಂದು ಆ ರೀತಿಯ ಸುಳ್ಳು ದೂರು ನೀಡಿದ್ದೆ ಎಂದು ಮಾದ್ಯಮದ ಎದುರು ಹೇಳಿಕೊಂಡಿದ್ದಾಳೆ..

ಈ ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ ಮಾಡಿರುವ ಈ ಯುವತಿ, ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಎಲ್ಲವನ್ನೂ ವಿವರವಾಗಿ ಹೇಳಿದ್ದಾಳೆಂಬ ಮಾಹಿತಿಯಿದೆ..

ಇನ್ನು ಮೊದಮೊದಲು ಎಲ್ಲವೂ ಚೆನ್ನಾಗಿದ್ದು ಈಗ “ನೀನೇ ಸಾಕಿದ ಗಿಣಿ, ನಿನ್ನ ಹದ್ದಾಗಿ ಕುಕ್ಕಿತಲ್ಲ” ಎನ್ನುವ ಪರಿಸ್ಥಿತಿ ಬೆಳಗಾವಿ ಬಿಜೆಪಿ ಪ್ರಮುಖನಿಗೆ ಒದಗಿ ಬಂದಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..