ಕಂಟೆoಟ್ ಇದ್ದರೆ ಕನ್ನಡಿಗರು ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಕಂಪರ್ಮ್..
ಬಹಳ ವರ್ಷಗಳ ನಂತರ ಕನ್ನಡ ಚಿತ್ರವೊಂದು 3ನೇ ವಾರವೂ, ಅದೂ ರಾತ್ರಿ ಶೋ ಹೌಸ್ ಫುಲ್..
ಕಡಿಮೆ ಬಜೆಟ್ಟಿನ, ಹೊಸಬರ “ಸು ಫ್ರಮ್ ಸೋ” ಕನ್ನಡ ಹಾಸ್ಯಮಯ ಚಿತ್ರ ಮೋಡಿ ಮಾಡುತ್ತಿದೆ..
ಬೆಳಗಾವಿ : ಬಹಳ ವರ್ಷಗಳ ನಂತರ ಕನ್ನಡ ಚಿತ್ರವೊಂದು ಮೂರನೇ ವಾರವೂ ತುಂಬಿದ ಗೃಹ ಪ್ರದರ್ಶನ ಕಾಣುತ್ತಿದೆ ಎಂದರು ಸಾಹಸವೇ ಸರಿ, ಈಗಿನ ಯೂಟ್ಯೂಬ್, ವಾಟ್ಸಪ್, ಗೂಗಲ್, ಮೊಬೈಲ್ ಗೇಮ್ ಗುಂಗಿನಲ್ಲಿ, “ಸು ಫ್ರಮ್ ಸೋ” ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸಾಗರದಂತೆ ಕರೆತರುವದನ್ನು ನೋಡಿದರೆ ಒಳ್ಳೆಯ ಕಥೆಯ ಚಿತ್ರಗಳು ಎಂದಿಗೂ ಗೆಲ್ಲುತ್ತವೆ ಮತ್ತು ಗಳಿಸುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ..

ಬೆಳಗಾವಿಯಲ್ಲಿ ಈಗಾಗಲೇ ಮಲ್ಟಿಪ್ಲೆಸ್ ಹಾಗೂ ಸಿಂಗಲ್ ಸ್ಕ್ರೀನ್ ಗಳಲ್ಲಿ ನಾಲ್ಕು ಥಿಯೇಟರ್ ಗಳಲ್ಲಿ “ಸು ಫ್ರಮ್ ಸೋ” ಅಂದರೆ “ಸುಲೋಚನಾ ಫ್ರಮ್ ಸೋಮೇಶ್ವರ” ಎಂಬ ಚಿತ್ರ ಓಡುತ್ತಿದ್ದು, ನಿನ್ನೆ ನಗರದ ಚಿತ್ರಾ ಚಿತ್ರಮಂದಿರದಲ್ಲಿ ರಾತ್ರಿಯ ಕೊನೆಯ ಪ್ರದರ್ಶನಕ್ಕೂ ಜನರು ಕಿಕ್ಕಿರಿದು ಬಂದಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿತ್ತು. ಇದು ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಆನೆಬಲ ತಂದಂತ ಚಿತ್ರವಾದಂತಿದೆ..

ಅತೀ ಕಡಿಮೆ ಖರ್ಚಿನಲ್ಲಿ, ಯಾವುದೇ ಆಡಂಬರ ಇಲ್ಲದೆ, ಸಣ್ಣ ಸಣ್ಣ ವಿಷಯಗಳನ್ನು ಎತ್ತಿಕೊಂಡು ಸುಂದರ ಸ್ವಾರಸ್ಯಕರ ಕಥೆ ನಿರ್ಮಿಸಿ, (ಸಿನಿಮಾ ತಲೆ ಉಪಯೋಗಿಸಿ) ಮಾಡಿದ “ಸು ಫ್ರಮ್ ಸೋ” ಚಿತ್ರ ರಾಜ್ಯದಲ್ಲಿ ಮೂರನೇ ವಾರವೂ ತುಂಬಿದ ಗ್ರಹಗಳಲ್ಲಿ ಪ್ರದರ್ಶನ ಕಾಣುತ್ತಾ, ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಆಗಿ, ಥಿಯೇಟರ್ ಗಳ ಸಂಖ್ಯೆ ಹೆಚ್ಚಿಸಿಕೊಂಡು ಕೋಟಿಗಟ್ಟಲೆ ಬಾಚುತ್ತಿದೆ..

ಒಳ್ಳೆಯ ಕಂಟೇoಟ್ ಇರುವ ಚಿತ್ರವನ್ನು ಕನ್ನಡಿಗರು ಯಾವಾಗಲೂ ಕೈ ಹಿಡಿಯುವರು ಎಂದು ಈ ಚಿತ್ರ ಮತ್ತೊಮ್ಮೆ ಸಾಬೀತುಪಡಿಸಿದೆ, ಯಾವುದೇ ಸ್ಟಾರ್ ನಟರು ಇಲ್ಲದೇ, ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ ಇಡೀ ರಾಜ್ಯವೇ ಜೈಕಾರ ಹಾಕುತ್ತಿದ್ದು, ಸಿನಿಮಾ ಮಂದಿರದಲ್ಲಿ ಎಲ್ಲಾ ಜನರು ಕುಟುಂಬ ಸಮೇತರಾಗಿ ಬಂದು, ಪ್ರತಿ ಸನ್ನಿವೇಶದಲ್ಲಿಯೂ ನಕ್ಕು ನಕ್ಕು ನಲಿಯುತ್ತಿದ್ದಾರೆ, ನಿನ್ನೆ ರಾತ್ರಿ ಶೋನಲ್ಲಿ ಬೆಳಗಾವಿಯ ಚಿತ್ರಾ ಚಿತ್ರಮಂದಿರದಲ್ಲಿಯೂ ಅದೇ ಸನ್ನಿವೇಶ ಕಂಡು ಬಂದಿದ್ದು, ಒಂದು ಉತ್ತಮ ಸಾಂಸಾರಿಕ ಕನ್ನಡ ಚಿತ್ರವನ್ನು ನಗುನಗುತ್ತಲೇ ನೋಡಿಬಂದ ಸಂತಸ ಕನ್ನಡಿಗರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..