ಸ್ಥಳೀಯ ಸಸ್ಥೆಗಳಿಂದ ಸಂಬಂಧವಿಲ್ಲದಂತ ಪಾಲಿಕೆಗೆ ಶಿಫ್ಟ್ ಆದ ಸುನಾಮಿ,
ಆರೋಗ್ಯ, ಸಮಿತಿಯ ಕಾರ್ಯದರ್ಶಿ, ಅಲ್ಲಿಂದ ಕಂದಾಯಕ್ಕೆ ಜಂಪಾದ ಅಡ್ಜೆಸ್ಟಮೆಂಟ ಆಸಾಮಿ..
ಕಂದಾಯ ವಿಭಾಗವನ್ನು ಕಲುಷಿತಗೊಳಿಸಿದ ಅಧಿಕಾರಿ ಎಂಬ ಆರೋಪ..
ಪಾಲಿಕೆಯ ಮೇಲಾಧಿಕಾರಿಗಳು ತಮ್ಮ ಕರ್ತವ್ಯನಿಷ್ಠೆ ಮೆರೆಯುತ್ತಾರಾ ??
ಬೆಳಗಾವಿ : ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಒಂದು ಉದ್ಯೋಗ ಸಿಕ್ಕಿತೆಂದರೆ ಅದು ಅದೃಷ್ಟದ ಕೊಡುಗೆಯೆಂದು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಹಲವು ಸರ್ಕಾರಿ ನೌಕರರನ್ನು ನೋಡುತ್ತೇವೆ, ಸರ್ಕಾರ ಹಾಗೂ ಸಮಾಜದ ನಡುವಿನ ಕೊಂಡಿಯಾಗಿ, ಇಲಾಖೆಗೆ ಉತ್ತಮ ಹೆಸರು ಹಾಗೂ ಆದಾಯ ತಂದು, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಅನೇಕ ಅಧಿಕಾರಿಗಳಿರುತ್ತಾರೆ..
ಅಂತವರ ಮಧ್ಯ ತಮ್ಮ ಜವಾಬ್ದಾರಿ ಮರೆತು ವ್ಯವಸ್ಥೆ ಹಾಳು ಮಾಡುವ ಕೆಲ ಅಧಿಕಾರಿಗಳು ಇರುವದು ದುರಾದೃಷ್ಟ, ಅದೇ ರೀತಿ ನಮ್ಮ ಬೆಳಗಾವಿ ಪಾಲಿಕೆಯ, ಉತ್ತರದ ಕಂದಾಯ ಶಾಖೆಯಲ್ಲಿ, “ಸಹಾಯಕ ಕಂದಾಯ ಅಧಿಕಾರಿ” ಆಗಿ ಕಾರ್ಯನಿರ್ವಹಿಸುತ್ತಿರುವ “ರವಿ ಮಾಸ್ತಿಹೊಳಿಮಠ” ಎಂಬುವರ ಮೇಲೆ ಅಂತಹದ್ದೇ ಬೇಜವಾಬ್ದಾರಿಯುತ ಕಾರ್ಯದ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ..
“ರವಿ ಮಾಸ್ತಿಹೊಳಿಮಠ” ಎಂಬ ಪಾಲಿಕೆಯ ಕಂದಾಯ ಅಧಿಕಾರಿಯ ಮೇಲೆ ನಾನಾ ರೀತಿಯ ಆರೋಪಗಳು ಇದ್ದರೂ, ಈತ ತನ್ನ ದೋಷಗಳನ್ನು ತಿದ್ದಿಕೊಂಡು ನಡೆಯದೇ, ತನ್ನ ಇಷ್ಟದಂತೆ, ಮನಬಂದಂತೆ ಕೆಲಸ ಮಾಡುತ್ತಾ, ಮೇಲಾಧಿಕಾರಿಗಳ ಅಳುಕಿಲ್ಲದೆ, ಕಂದಾಯ ವಿಭಾಗದಲ್ಲಿ ಅಶಿಸ್ತಿನ್ನು ತರುವ ಕಾರ್ಯ ಮಾಡುತ್ತಿರುವರು ಎಂಬ ಮಾತುಗಳಿವೆ..
ಇವರು ಮೊದಲು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಪಾಲಿಕೆ ಸಿಬ್ಬಂದಿಯಂತು ಅಲ್ಲವೇ ಅಲ್ಲ, ಸುಮಾರು 2008ರಲ್ಲಿ ಬೆಳಗಾವಿ ಪಾಲಿಕೆಯ ಆರೋಗ್ಯ ಶಾಖೆಗೆ ವರ್ಗಾವಣೆ ಆಗಿ ಬಂದಿದ್ದು ಕೂಡಾ ಅಸಹಜ ವರ್ಗಾವಣೆ ಎಂಬ ಮಾತು ಇದೆ, ವಾಮಮಾರ್ಗದಲ್ಲಿ ಪಾಲಿಕೆಗೆ ಎಂಟ್ರಿ ಕೊಟ್ಟ ನಂತರ ಆರೋಗ್ಯ ವಿಭಾಗದಲ್ಲಿ ಸೇರಿ ಅಲ್ಲಿಯೂ ಸರಿಯಾಗಿ ನಿಲ್ಲದೆ, ಸಮಿತಿ ಕಾರ್ಯದರ್ಶಿ ಹುದ್ದೆಗೆ ಸೇರಿಕೊಂಡು, ಸಮಿತಿ ಕಾರ್ಯದರ್ಶಿ ಹುದ್ದೆಯಲ್ಲಿಯೂ ನೆಮ್ಮದಿಯಾಗಿ ಕಾರ್ಯ ಮಾಡದೇ ತನ್ನ ಸ್ವಾರ್ಥ ಸಾಧನೆಗಾಗಿ ಸುಮಾರು 2019ರಲ್ಲಿ ಕಂದಾಯ ಶಾಖೆಗೆ ವರ್ಗಾವಣೆ ಮಾಡಿಸಿಕೊಂಡ ಎಂಬ ಮಾಹಿತಿ ಇದೆ..
ಈ ರೀತಿಯಾಗಿ ಒಂದು ಸ್ಥಾನದಲ್ಲೇ ಸಮರ್ಥವಾಗಿ ಕೆಲಸ ಮಾಡದೇ, ತನ್ನ ತಂತ್ರಗಾರಿಕೆಯಿಂದ ಎಲ್ಲಾ ವಿಭಾಗಕ್ಕೂ ಹಾಯ್ದು ಬಂದ ಈ ಆಸಾಮಿ, ಈಗ ಸಹಾಯಕ ಕಂದಾಯ ಅಧಿಕಾರಿಯಾಗಿ ನಿರ್ವಹಿಸುತ್ತಿರುವ ಕಾರ್ಯದಲ್ಲಿಯೂ ಕೂಡಾ ಅನೇಕ ಲೋಪದೋಷಗಳನ್ನು ಮಾಡುತ್ತಿದ್ದು, ಇದರಿಂದ ಜನರಿಗೆ ತೊಂದರೆಯ ಜೊತೆಗೆ ಪಾಲಿಕೆಯ ಆದಾಯಕ್ಕೂ ನಷ್ಟವಾಗುತ್ತಿದೆ ಎಂಬ ಮಾತಿದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ, ಇಲಾಖೆಯ ನೀತಿ ನಿಬಂಧನೆಗಳನ್ನು ಮೀರಿ, ತನ್ನ ಇಷ್ಟದಂತೆ ಕಾರ್ಯ ಮಾಡುವ ಇಂತಹ ಅಧಿಕಾರಿ ಕಂದಾಯ ವಿಭಾಗಕ್ಕೆ ಮಾರಕ ಎನ್ನುವದು ಕೆಲವರ ಅಭಿಪ್ರಾಯವಾಗಿದೆ..
ಜನರಿಗೆ ಸರಿಯಾಗಿ ಸ್ಪಂದನೆ ನೀಡದೇ ಇರುವದು, ಕಚೇರಿಯಲ್ಲಿ ಇಲ್ಲದೇ ಇರುವದು, ಗುಂಪುಗಾರಿಕೆ, ಅವ್ಯವಸ್ಥಿತವಾಗಿ ಕಡತಗಳ ನಿರ್ವಹಣೆ, ಅನಧಿಕೃತ ಆಸ್ತಿಗಳಿಗೆ ದಾಖಲೆ ನೀಡುವದು, ನಿಯಮದಂತೆ ತೆರಿಗೆ ವಿಧಿಸದೇ ಪಾಲಿಕೆಗೆ ಕಂದಾಯ ನಷ್ಟ ಮಾಡುವದು, ಕೆಲವೊಂದು ಕಡತಗಳಿಗೆ ಸಂಬಂಧಿಸಿದ ಸಿಬ್ಬಂದಿಯ ಸಹಿ ಪಡೆಯದೇ ಹಾಗೇ ಅನುಮೋದನೆ ಪಡೆದು ಆಸ್ತಿ ದಾಖಲೆ ಮಾಡಿಸುವದು ಹೀಗೆ ಲೋಪದೋಷಗಳನ್ನು ಯಾವುದೇ ಭಯ ಭೀತಿ ಇಲ್ಲದೇ ಮಾಡುವ ಇಂತಹ ಅಧಿಕಾರಿ ವ್ಯವಸ್ಥೆಗೆ ಅಪಾಯ.
ಕಂದಾಯ ವಿಭಾಗಕ್ಕೆ ಸೇರಲು ಅನರ್ಹತೆ ಹೊಂದಿದ, ನಿಯಮಬಾಹಿರವಾಗಿ, ಅನಧಿಕೃತವಾಗಿ ಸೇರಿಕೊಂಡ ಈ ವ್ಯಕ್ತಿ, ಕಂದಾಯ ವಿಭಾಗದಲ್ಲಿ ದುರಾಡಳಿತ ನಡೆಸುತ್ತಿದ್ದರೂ, ಪಾಲಿಕೆಯ ಮೇಲಾಧಿಕಾರಿಗಳು ನೋಡಿಕೊಂಡು ಸುಮ್ಮನೇಕೆ ಕುಳಿತಿರುವರು? ಅವರಿಗೂ ಈತನಿಂದ ಏನಾದರೂ ಪ್ರಯೋಜನೇ ಇದೆಯಾ? ಯಾರದ್ದಾದರೂ ಪ್ರಭಾವ, ಒತ್ತಡ ಇದೆಯಾ? ವ್ಯವಸ್ಥೆಗೆ ಗೌರವ ನೀಡದ ಇಂತ ವ್ಯಕ್ತಿಯ ಹಿಂದೆ ನಿಂತವರು ಯಾರು? ಎಂಬ ಪ್ರಶ್ನೆಗೆ ಆದಷ್ಟು ಬೇಗ ಉತ್ತರ ಸಿಗುವುದೆಂಬ ನಿರೀಕ್ಷೆಯಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..