ಕಡೋಲಿಯ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳ ಮಹನೀಯರಿಗೆ ಸನ್ಮಾನ..
ಸಮಾಜದ ಎಲ್ಲಾ ಕ್ಷೇತ್ರಗಳ ಸಾಧಕರನ್ನು ಗುರ್ತಿಸಿ ಗೌರವಿಸಬೇಕು..
ಯುವನಾಯಕ ರಾಹುಲ್ ಜಾರಕಿಹೊಳಿ ಹೇಳಿಕೆ..
ಬೆಳಗಾವಿ : ನಗರದ ಸಮೀಪ ಇರುವ ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಇಂದು ರಾಹುಲ್ ಜಾರಕಿಹೊಳಿ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸತ್ಕರಿಸಿ ಸನ್ಮಾನ ಮಾಡಲಾಯಿತು..
ಬಹುದಿನಗಳಿಂದ ಯೋಜಿಸಲಾದ ಈ ಅಭಿನಂದನಾ ಕಾರ್ಯಕ್ರಮಕ್ಕೆ ಬೆಳಗಾವಿ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರು ಕಾರ್ಯಕ್ರಮದ ಕೇಂದ್ರ ಬಿಂದುವಾಗಬೇಕಿತ್ತು, ಕಾರಣಾಂತರಗಳಿಂದ ಅವರ ಸುಪುತ್ರರಾದ ರಾಹುಲ್ ಜಾರಕಿಹೊಳಿ ಅವರು ಕಾರ್ಯಕ್ರಮದ ಪ್ರಮುಖರಾಗಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಜರುಗಿದೆ..

ಕಡೋಲಿಯ ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮ ಪಂಚಾಯತಿಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ, ದೇವಸ್ಥಾನ ಕಮಿಟಿಗಳ, ಕುಸ್ತಿ ಸಂಘಟನೆಗಳ, ನಿವೃತ್ತ ಯೋಧರ ಸಂಘಗಳ, ಮಾಜಿ ಹಾಗೂ ಹಾಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರನ್ನು, ಕಡೋಲಿಯ ವಿರಕ್ತಮಠದ ಪುಜ್ಯರನ್ನು, ಕಡೋಲಿ ಜಿ ಪಂ ವ್ಯಾಪ್ತಿಗೆ ಬರುವಂತಹ ಪತ್ರಕರ್ತರನ್ನು ಸತ್ಕರಿಸಿ ಸನ್ಮಾನ ಮಾಡಲಾಯಿತು…
ಕೃಷಿ, ಆಧ್ಯಾತ್ಮಿಕ, ದೇಶಸೇವೆ, ರಾಜಕೀಯ, ಸಾಮಾಜಿಕ ಸೇವೆ, ಪತ್ರಿಕೋದ್ಯಮ ಹೀಗೆ ಸಮಾಜದ ನಾನಾ ರಂಗದ ಮಹನೀಯರನ್ನು ಗುರ್ತಿಸಿ, ಅವರಿಗೆ ಹೂವು, ಹಣ್ಣು ನೀಡಿ, ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ, ಆದರ ಪೂರ್ವಕವಾಗಿ ಸತ್ಕರಿಸಲಾಗಿದ್ದು, ಇದು ಸತೀಶ ಜಾರಕಿಹೋಳಿ ಹಾಗೂ ಅವರ ಅನುಯಾಯಿಗಳ ಸಾಮಾಜಿಕ ಕಾಳಜಿಯನ್ನು ತೋರಿಸುತ್ತದೆ..

ಈ ಸಂಧರ್ಭದಲ್ಲಿ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ನಮ್ಮ ತಂದೆಯವರು ಹಿಂದಿನಿಂದಲೂ ಕೂಡಾ ಒಳ್ಳೆಯ ಕೆಲಸ ಮಾಡುವ ಜನರನ್ನು ಗುರ್ತಿಸಿ, ಅವರನ್ನು ಬೆಂಬಲಿಸುತ್ತಾರೆ, ನಮ್ಮ ಕ್ಷೇತ್ರ ಅಷ್ಟೇ ಅಲ್ಲಾ, ಯಾರೇ ಸಮಾಜಕ್ಕೆ ಅನುಕೂಲ ಆಗುವ ಕಾರ್ಯ ಮಾಡಿದ್ದಲ್ಲಿ ಅಂತವರನ್ನು ಗುರ್ತಿಸಿ ಅಭಿನಂದಿಸುವದು ನಮ್ಮ ಕರ್ತವ್ಯ, ಅದರಿಂದ ಮತ್ತಷ್ಟು ಜನರಿಗೆ ಸ್ಪೂರ್ತಿ ಆಗಿ, ಉತ್ತಮ, ಮಾನವೀಯ, ಸಮೃದ್ಧಿಯ ಸಮಾಜ ನಿರ್ಮಾಣವಾಗುತ್ತದೆ ಎಂದರು..
ಇದೇ ವೇಳೆ ಮಲಗೌಡ ಪಾಟೀಲ್ ಅವರ ಮುಂದಾಳತ್ವದಲ್ಲಿ ಯುವನಾಯಕ ರಾಹುಲ್ ಜಾರಕಿಹೊಳಿ ಅವರಿಗೂ ಗೌರವಪೂರ್ವಕವಾಗಿ ಸತ್ಕರಿಸಿ ಸನ್ಮಾನಿಸಲಾಯಿತು..
ಈ ಅಭಿನಂದನಾ ಸಮಾರಂಭದಲ್ಲಿ ವಿರಕ್ತ ಮಠದ ಪೂಜ್ಯರು, ರಾಹುಲ್ ಜಾರಕಿಹೊಳಿ, ಕೆಪಿಸಿಸಿ ಸದಸ್ಯರಾದ ಮಲಗೌಡ ಪಾಟೀಲ್, ಕಡೊಲಿ ಜಿ ಪಂ ವ್ಯಾಪ್ತಿಯಲ್ಲಿ ಬರುವ ವಿವಿಧ ಕ್ಷೇತ್ರಗಳ ಸನ್ಮಾನಿತರು, ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..