ಕಣೀರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಮೇಲಿನ ಜಿಲ್ಲಾ ಪ್ರವೇಶ ನಿಷೇಧವನ್ನು ಹಿಂಪಡೆಯಬೇಕು..

ಕಣೀರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಮೇಲಿನ ಜಿಲ್ಲಾ ಪ್ರವೇಶ ನಿಷೇಧವನ್ನು ಹಿಂಪಡೆಯಬೇಕು..

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ..

ಡಾ ರವಿ ಪಾಟೀಲ, ಬಿಜೆಪಿ ಪ್ರಮುಖರು ಬೆಳಗಾವಿ ನಗರ..

ಬೆಳಗಾವಿ : ಕಣೀರಿ ಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಯಾವುದೊ ಸಂದರ್ಭದಲ್ಲಿ ಬಸವಣ್ಣವರ ಹಾಗೂ ಅವರ ಅನುಯಾಯಿಗಳ ಕುರಿತಾಗಿ ಮಾತನಾಡಿದ್ದಾರೆಂಬೆ ವಿಷಯವನ್ನು ಮುಂದಿಟ್ಟುಕೊಂಡು ಬಿಜಾಪುರ ಜಿಲ್ಲೆಗೆ ಅವರ ಪ್ರವೇಶವನ್ನು ನಿಷೇಧಿಸುವದು ಖಂಡನೀಯ, ಆ ನಿರ್ಬಂಧವನ್ನು ಹಿಂಪಡೆಯಬೇಕೆಂದು ಬಿಜೆಪಿ ಮುಖಂಡ ಡಾ ರವಿ ಪಾಟೀಲ್ ಅವರು ಹೇಳಿದ್ದಾರೆ.

ಗುರುವಾರ ದಿನಾಂಕ 06/11/2025 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜವು ಅತೀ ಪ್ರಾಚೀನ ಪರಂಪರೆ ಹೊಂದಿದ್ದು, ಸುದೀರ್ಘ ಕಾಲದಿಂದಲೂ ಸಮಾಜವನ್ನು ಬೆಳೆಸುತ್ತ ಭಕ್ತಿ ಮಾರ್ಗದಲ್ಲಿ ಎಲ್ಲರನ್ನು ಮುನ್ನಡೆಸುತ್ತಿದೆ, ಆದರೆ ಕೆಲ ರಾಜಕೀಯ ಹಿತಾಸಕ್ತಿಗಳಿಂದ ಇಂದು ಈ ಸಮಾಜವನ್ನು ಒಡೆಯುವ ಪ್ರಯತ್ನ ಆಗುತ್ತಿದೆ, ಅಂತವರ ಷ್ಯಡ್ಯಂತ್ರಕ್ಕೆ ಇಂದು ಕಾಡಸಿದ್ದೇಶ್ವರ ಸ್ವಾಮೀಜಿಗಳು ತೊಂದರೆ ಪಡುತ್ತಿದ್ದಾರೆ.

ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ನೈಸರ್ಗಿನ ಕೃಷಿ ಚಟುವಟಿಕೆಗಳ ಮೂಲಕ, ಜನೋಪಯೋಗಿ ಸೇವಾ ಕಾರ್ಯಗಳ ಮೂಲಕ, ಗುರುಕುಲ ಪದ್ದತಿಯ ಶಿಕ್ಷಣದ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ, ಸಮಾಜದ ನಿರ್ಮಾನಕ್ಕೆ ನಿಸ್ವಾರ್ಥವಾಗಿ, ಬಸವತತ್ವಕ್ಜೆ ಪೂರಕವಾಗಿ, ಹಗಲು ರಾತ್ರಿ ದುಡಿಯುತ್ತಿರುವ ಸಂತಾರೋಬ್ಬರು ದಂಗೆಗೆ ಕಾರಣ ಆಗುತ್ತಾರೆ ಎಂಬ ಸರ್ಕಾರದ ಆರೋಪವೇ ಎಲ್ಲರನ್ನು ಗಾಬರಿಗೋಳಿಸಿದೆ ಎಂದಿದ್ದಾರೆ..

ನಾವೆಲ್ಲ ನಾಡು ಕಟ್ಟುವ ಕಾರ್ಯ ಮಾಡಬೇಕು, ಒಡೆಯುವ ನೇತೃತ್ವ ವಹಿಸಬಾರದು, ಸುಳ್ಳು ಆರೋಪದಿಂದ ಸ್ವಾಮೀಜಿಯವರ ಮೇಲೆ ವಿಧಿಸಿದ ಜಿಲ್ಲಾ ಪ್ರವೇಶದ ನಿಷೇಧವನ್ನು ಆದಷ್ಟು ಬೇಗ ಹಿಂಪಡೆಯಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ನಾಡಿನ ಸಂಸ್ಕೃತಿ ಪರಂಪರೆಗೆ ಗೌರವ ತರುವಂತಹ ಕಾರ್ಯ ಮಾಡುವ ಸ್ವಾಮೀಜಿಯ ನಗರ ಪ್ರವೇಶ ನಿಷೇಧವನ್ನು ನಗರವಾಸಿಗಳಾದ ನಾವು ಖಂಡುಸುತ್ತೇವೆ, ಈಗಿನಿಂದಲೇ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಜೊತೆಗೆ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದು, ಹಿಂದೂ ಸಮಾಜದಲ್ಲಿ ಒಡಕು ತರುವಂತಹ ಕೆಟ್ಟ ಶಕ್ತಿಗಳನ್ನು ನಿಯಂತ್ರಿಸಬೇಕು ಎಂದರು..

ರಾಜ್ಯದ ಮುಖ್ಯಮಂತ್ರಿಗಳು ಈ ಬಗ್ಗೆ ಕಾಳಜಿ ವಹಿಸಿ, ರಾಜ್ಯವನ್ನು ಧರ್ಮ ಜಾತಿಯ ಕಿತ್ತಾಟಕ್ಕೆ ಬಿಡದೇ, ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸುವ ನಿಟ್ಟಿನಲ್ಲಿ ಕಣೀರಿ ಮಠದ ಶ್ರೀಗಳ ವಿಚಾರದಲ್ಲಿ ಉತ್ತಮ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ..

ಈ ಸಂದರ್ಭದಲ್ಲಿ ದನ್ಸಕುಮಾರ ಪಾಟೀಲ, ಬಸವರಾಜ್ ಕೋಲಿನ, ಸಂಜಯ ಪಾಟೀಲ, ಶಿವಾನಂದ ಈರನಗೌಡರ್, ವಿಶ್ವನಾಥ, ಮಲ್ಲಿಕಾರ್ಜುನಸ್ವಾಮಿ, ದೇಮಗೌಡ ಪಾಟೀಲ್, ಶಿವಾನಂದ ಕಂಠಿ, ಭೀಮರಾಯಿ ಬಡಿಗೇರ, ಸಂತೋಷ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಿ ಕುರಗುಂದ..