ಕನ್ನಡ ಕಡ್ದಾಯದ ವಿಷಯವಾಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ..
ಸರ್ಕಾರದ ಆದೇಶದ ವಿರುದ್ಧದ ನಡೆಗೆ ಶಿಸ್ತು ಕ್ರಮ ಜರುಗಿಸಿ..
ಶಾಸಕ ಅಭಯ ಪಾಟೀಲ..
ಬೆಳಗಾವಿ : ನಗರದ ಪಾಲಿಕೆಯ ಸಭಾಭವನದಲ್ಲಿ ಗುರುವಾರ ಜರುಗಿದ ಸಾಮಾನ್ಯ ಪರಿಷತ್ ಸಭೆಯಲ್ಲಿ ಮರಾಠಿಯಲ್ಲಿ ನಡಾವಳಿ ಹಾಗೂ ಸಭೆಯ ನೋಟಿಸ್ ನೀಡಬೇಕು ಎಂಬ ವಿಚಾರ ವಿವಾದಕ್ಕೆ ಕಾರಣವಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಸದಸ್ಯ ರವಿ ಸಾಳುಂಕೆ, ವೈಶಾಲಿ ಭಾತಕಾಂಡೆ, ಶಿವಾಜಿ ಮಾಂಡೊಳಿಕರ್ ಅವರು, ನಮಗೆ ಸಭೆಯ ನಡಾವಳಿ ಮತ್ತು ಸಭೆಗೆ ಹಾಜರಾಗಲು ನೀಡಲಾಗುವ ನೋಟಿಸ್ ಮರಾಠಿಯಲ್ಲೇ ಕೊಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕೆಲ ನಗರಸೇವಕರು, ಕನ್ನಡವನ್ನು ಕಡ್ಡಾಯಗೊಳಿಸುವಂತೆ ಆಗ್ರಹಿಸಿದರು.
ಈ ವೇಳೆ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ಬೆಳಗಾವಿಯಲ್ಲಿ ಕರ್ನಾಟಕ ಸರಕಾರದ ಆಡಳಿತದ ಇದೆ. ರಾಜ್ಯ ಭಾಷೆ ಕನ್ನಡದಲ್ಲಿಯೇ ದಾಖಲೆ ನೀಡಬೇಕು. ಮಹಾರಾಷ್ಟ್ರದ ಅಕ್ಕಲಕೋಟೆ, ಜತ್ತ ನಲ್ಲಿ ಅಪ್ಪಟ ಕನ್ನಡಿಗರೇ ಹೆಚ್ಚಿದ್ದಾರೆ. ಆದರೆ, ಅಲ್ಲಿ ಮರಾಠಿಯಲ್ಲೇ ದಾಖಲೆ ನೀಡಲಾಗುತ್ತಿದೆ. ಹೀಗಿರುವಾಗ ಬೆಳಗಾವಿ ಪಾಲಿಕೆಯಲ್ಲಿ ಮರಾಠಿಯಲ್ಲಿ ನಡಾವಳಿ ಕೊಡಬಾರದು ಎಂದು ಆಗ್ರಹಿಸಿದರು.
ಆಡಳಿತಾರೂಢ ಬಿಜೆಪಿ ಸದಸ್ಯರು, ರವಿ ಸಾಳುಂಕೆ ವಿರುದ್ಧ ಹರಿಹಾಯ್ದರು. ನಾಡವಿರೋಧಿ ನಿಲುವು ತೆಳೆದ ಸದಸ್ಯನನ್ನು ಅನರ್ಹಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನುಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಕನ್ನಡ ಕಡ್ಡಾಯ ಸರ್ಕಾರ ಹೊರಡಿಸಿದ ಆದೇಶವಿದೆ, ಅದನ್ನು ಆಡಳಿತರೂಢ ಶಾಸಕರು ತಿಳಿಸಿ ಹೇಳಬೇಕು, ನಾವು ಕೂಡಾ ಸರ್ಕಾರದ ಆದೇಶದ ಪರವಾಗಿ ಇದ್ದೇವೆ, ಪಾಲಿಕೆ ಸಭೆಯಲ್ಲಿ ಹೀಗೆ ಅವೈಜ್ಞಾನಿಕವಾಗಿ ಹಾಗೂ ವನ ಪ್ರಚಾರಕ್ಕಾಗಿ ಸಭೆಯಲ್ಲಿ ಅಸಿಸ್ತು ತರುವವರ ವಿರುದ್ಧ ಶಿಸ್ತು ಕ್ತಮ ಜಾರಿ ಮಾಡಬೇಕು ಎಂದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..