ಕನ್ನಡ ಭವನ ಖಾಸಗಿಯವರ ನಿರ್ವಹಣೆ ಬಗ್ಗೆ ವಿಚಾರಿಸಿ ಕ್ರಮ..
ಈಗಾಗಲೇ 150 ಹೊಸ ಹಾಸ್ಟೆಲ್ ಕೊಡುವ ಕಾರ್ಯ ಮಾಡಿದ್ದೇವೆ..
ಸಚಿವ ಶಿವರಾಜ ತಂಗಡಗಿ..
ಬೆಳಗಾವಿ : ಇದೆ ತಿಂಗಳು 19 ರಂದು ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ನಂದಗಂಡದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಅದರ ಪ್ರಯುಕ್ತ ಶುಕ್ರವಾರ ಪೂರ್ವಭಾವಿಯಾಗಿ ನಂದಗಡಕ್ಕೆ ನಾನು ಬೇಟಿ ನೀಡುತ್ತಿದ್ದೇನೆ, ಬಳಿಕ ಕಾರ್ಯಕ್ರಮದ ರುಪುರೇಷೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.
ಶುಕ್ರವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು, ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ, ನ್ಯಾಷನಲ್ ಹೆರಾಡ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಮೂರು ಭಾಗವಾಗಿದೆ, ಬಿಜೆಪಿಯವರು ದ್ವೇಷ ರಾಜಕಾರಣ ಬಿಟ್ಟು ಬೇರೆ ಏನು ಮಾಡಿದ್ದಾರೆ? ದೇಶದಲ್ಲಿ ಏನು ಕೊಡುಗೆ ಕೊಟ್ಟಿದ್ದಾರೆ? ಮಹಾತ್ಮ ಗಾಂಧಿ ಅವರ ಹೆಸರನ್ನು ಅಳಿಸಿ ರಾಮಜೀ ಎಂದು ಹೆಸರಿಟ್ಟಿದ್ದಾರೆಂದು ಕೇಂದ್ರ ಹಾಗೂ ರಾಜ್ಯ ಬಿಜಿಪಿಯ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜಿಪಿಯವರು ಪ್ರತಿಯೊಂದು ಗ್ರಾಮಪಂಚಾಯತಿಯಲ್ಲಿಯೂ ಅನ್ಯಾಯ ಮಾಡುವುದಕ್ಕೆ ಹೊರಟಿದ್ದಾರೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಕೇಂದ್ರ ಬಿಜೆಪಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಸಿಎಂ ಬದಲಾವಣೆ ವಿಚಾರ; ಅದರ ಬಗ್ಗೆ ಚರ್ಚೆ ಮಾಡುವುದು ಅವಶ್ಯಕತೆ ಇಲ್ಲ, ಹೈ ಕಮಾಂಡ ರಾಜ್ಯದಲ್ಲಿ ಕೆಲಸ ಮಾಡುವದಕ್ಕೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಅದಕ್ಕೆ ಈ ರೀತಿ ಆರೋಪ ಮಾಡಿಕೊಂಡು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೋರ ಹಾಕಿದರು.
ಬೆಳಗಾವಿ ಕನ್ನಡ ಭವನ ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದಾರೆ. ಅದರ ಬಗ್ಗೆ ವಿಚಾರಸಿ ಕ್ರಮ ತೆಗೆದುಕೊಳ್ಳಲಾಗುವದು ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ 150 ಹಾಸ್ಟೆಲ್ ಗಳನ್ನು ಕೊಡುವ ಕೆಲಸ ಮಾಡಿದ್ದೇವೆ.
ಸಿಎಂ ಸಿದ್ದರಾಮಯ್ಯ ದಿ. ದೇವರಾಜ ಅರಸು ದಾಖಲೆ ಮೀರಿ ಮುಂದೆ ಸಾಗುತ್ತಿದ್ದಾರೆ, ನಾನು ದೇವರಾಜ ಅರಸರನ್ನು ನೋಡಿಲ್ಲ, ಆದರೆ ಸಿದ್ದರಾಮಯ್ಯ ಅವರು ಅವರಿಗಿಂದ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರಾಜ್ಯದಲ್ಲಿ ಜನಪರ ಆಡಳಿತ ಮಾಡಿದ್ದಾರೆ, ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.
ಹಿಂದಿನ ಬಿಜೆಪಿ ಸರಕಾರ ಇದ್ದಾಗ ಏನು ಮಾಡಿದ್ದಾರೆ, ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಸಂಗೊಳ್ಳಿ ರಾಯಣ್ಣನ ನಂದಗಡದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೂಡಲೇ ಮಾಡಲಾಗುವುದು ಎಂದರು..