ಕನ್ನಡ ಹಾಗೂ ಕನ್ನಡಿಗರನ್ನು ಅವಮಾನಿಸುವ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ನೀಡಬಾರದು..

ಕನ್ನಡ ಹಾಗೂ ಕನ್ನಡಿಗರನ್ನು ಅವಮಾನಿಸುವ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ನೀಡಬಾರದು..

ಪಾಲಿಕೆ ಸಿಬ್ಬಂದಿಗಳಿಗೆ ಕನ್ನಡ ಕಲಿಸುವ ಕಾರ್ಯ ಶೀಘ್ರ ಆಗಲಿ..

ಡಾ ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಧಿಕಾರ..

ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಅವಮಾನ ಮಾಡುವ ಲೇಖನಗಳನ್ನು ಪ್ರಕಟಿಸುವ ಅನ್ಯ ಭಾಷಿಯ ಪತ್ರಿಕೆಗಳಿಗೆ ಸರ್ಕಾರದಿಂದ ಬರುವ ಜಾಹೀರಾತು ಅನುದಾನವನ್ನು ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ರಾಜ್ಯದಲ್ಲಿ ಇದ್ದುಕೊಂಡು, ಇದನ್ನೇ ಅವಮಾನ ಮಾಡುವ, ಹಾಗೂ ಈ ರಾಜ್ಯದಿಂದಲೇ ಅನುದಾನ ಪಡೆದುಕೊಳ್ಳುವ ಈ ವಿರೋಧಾವಾಸದ ಪ್ರಕ್ರಿಯೆಯನ್ನು ನಾವು ಒಪ್ಪುವದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷರಾದ ಡಾ ಪುರುಷೋತ್ತಮ ಬಿಳಿಮಲೆ ಅವರು ಹೇಳಿದ್ದಾರೆ.

ಗುರುವಾರ ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪಾಲಿಕೆ ಅಧಿಕಾರಿಗಳ ಜೊತೆ ನಡೆದ ಸಭೆಯ ನಂತರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರು ರಾಜ್ಯದಲ್ಲಿ ಕನ್ನಡ ಕನ್ನಡಿಗರಿಗೆ ಅವಮಾನ ಆಗುವಂತ ಸನ್ನಿವೇಶ ಆಗಬಾರದು ಎಂದ ಅವರು, ಈ ಮೊದಲು ಸಭೆಯಲ್ಲಿ ಮಾತನಾಡುತ್ತಾ
ವಡಗಾವಿಯ ಕನ್ನಡ ಭವನ ಹಾಳು ಬಿದಿದ್ದೆ, ಅದನ್ನು ನಿರ್ವಹಣೆ ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡ‌ ಭವನದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಕೂಡಲೇ ಪಾಲಿಕೆ ಆಯುಕ್ತರು ಭೇಟಿ ನೀಡಿ ಅದನ್ನು ಪರಿಶೀಲನೆ ನಡೆಸಬೇಕು, ಅಲ್ಲಿ ಯಾವುದೇ ಕನ್ನಡ ಕಾರ್ಯಕ್ರಮ ನಡೆಯುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಗೆ ನಿರ್ವಹಣೆಗೆ ಕೊಡಿ, ಇಲ್ಲದಿದ್ದರೆ ಜವಾಬ್ದಾರಿಯಿಂದ ಪಾಲಿಕೆಯವರು ನಿರ್ವಹಣೆ ಮಾಡಿ ಎಂದು ಸೂಚನೆ ನೀಡಿದರು.

ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, ವಡಗಾವಿಯ ಕನ್ನಡ ಭವನ ಒಂದು ವಾರದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಅಲ್ಲದೆ, ಇಲ್ಲಿ ಸಾರ್ವಜನಿಕ ಗ್ರಂಥಾಲಯ ಮಾಡಿದರೆ ನಿತ್ಯ ಕಾರ್ಯಚಟುವಟಿಕೆಯಿಂದ ಕೂಡಿರುತ್ತದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ ಅವರು ಮಾತನಾಡಿ, ಉದ್ಯಮಬಾಗದಲ್ಲಿರುವ ವೇಗಾ ಹೆಲ್ಮೆಟ್ ‌ಕಂಪನಿಯಲ್ಲಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದಾರೆ. ನಾಲ್ಕೈದು ದೂರುಗಳು ನಮಗೆ ಬಂದಿದ್ದವು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡುವ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 878 ಜನ‌ ಸಿಬ್ಬಂದಿಗಳಿಗೆ ಕನ್ನಡವೇ ಬರುವುದಿಲ್ಲ. ಅವರಿಗೆ ಉದ್ಯೋಗ ಕೊಡಿ. ಆದರೆ ಅವರೊಂದಿಗೆ ಕನ್ನಡದಲ್ಲಿಯೇ ಮಾತನಾಡಿ. ನೀವು ಮರಾಠಿ ಭಾಷೆಯಲ್ಲಿ ಮಾತನಾಡಿದರೇ, ಅವರಿಗೆ ಕನ್ನಡ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಂತೋಷ ಹಾನಗಲ್ಲ, ಟಿ.ಎಸ್.ಫಣಿರಾಮ, ದ್ರಾಕ್ಷಾಯಣಿ ಹುಡೇದ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅಶೋಕ ಚಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..

Leave a Reply

Your email address will not be published. Required fields are marked *