ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಬೇಕು..

ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಬೇಕು..

ರೈತರಿಗೆ ಸ್ಪಂದನೆ ನೀಡದ ಸರ್ಕಾರದ ವಿರುದ್ಧ ನಾವು ಬೀದಿಗೆ ನಿಂತು ಹೋರಾಟ ಮಾಡುತ್ತೇವೆ..

ಬಿ ವೈ ವಿಜಯೇಂದ್ರ..

ಬೆಳಗಾವಿ : ಕಳೆದ ಕೆಲ ದಿನಗಳಿಂದ ಈ ಭಾಗದ ರೈತರು, ಕಬ್ಬು ಬೆಳೆಗಾರರು ಗುರ್ಲಾಪುರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಅವರ ನ್ಯಾಯಯುತವಾದ ಬೇಡಿಕೆಯನ್ನು ರಾಜ್ಯ ಸರ್ಕಾರ ಮುಂದಾಳತ್ವ ವಹಿಸಿ ಈಡೇರಿಸಬೇಕು ಎಂದು ಒತ್ತಾಯಿಸುತ್ತೇವೆ, ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವಾಗ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಸರ್ಕಾರ ಸರಿಯಾಗಿ ಕಾರ್ಯ ಮಾಡದಿದ್ದಾಗ ವಿರೋಧ ಪಕ್ಷವಾಗಿ ನಾವು ನಮ್ಮ ಕರ್ತವ್ಯ ಮಾಡಬೇಕಾಗುತ್ತದೆ, ರೈತರಿಗೆ ಸಮಸ್ಯೆ ಆದಾಗ ಪಕ್ಷತೀತವಾಗಿ ನಾವು ರೈತರ ಪರ ನಿಲ್ಲಬೇಕಾಗುತ್ತದೆ, ಹಾಗಾಗಿ ನಾನು ನನ್ನ ಪಕ್ಷದ ಮುಖಂಡರೊಂದಿಗೆ ಇಂದು ಇಲ್ಲಿಗೆ ಬಂದು ರೈತರ ಜೊತೆ ನಿಂತಿದ್ದೇವೆ ಎಂದರು.

ಈ ನಾಡಿನ ರೈತರು ಸಂಕಷ್ಟದಲ್ಲಿ ಇದ್ದಾರೆ, ಈ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲದಾಗಿದೆ, ಬೀಕರ ಮಳೆಯಾಗಿ ಅತಿವೃಷ್ಟಿ ಆಗಿ ತೊಂದರೆ ಆದಾಗಲೂ, ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದಾಗಲೂ, ಆಯಾ ಜಿಲ್ಲಾ ಉಸ್ತುವಾರಿಗಳು ಹೋಗಿ ಬೆಳೆ ಪರಿಹಾರ ನೀಡಲಿಲ್ಲ, ಇಲಾಖೆಯ ಅಧಿಕಾರಿಗಳು ಕೂಡಾ ತಲೆ ಕೆಡಿಸಿಕೊಳ್ಳಲಿಲ್ಲ, ಕಂದಾಯ, ಕೃಷಿ ಸಚಿವರು ಕೂಡಾ ಉತ್ತರ ಕರ್ನಾಟಕ ಪ್ರವಾಸ ಮಾಡಲಿಲ್ಲ ರೈತರ ಸಂಕಷ್ಟ ಕೇಳಲಿಲ್ಲ, ಈಗ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿದೆ, ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸದೆ ಇದ್ದಾಗ, ನಾವು ಕೂಡಾ ರೈತರಿಗೆ ಬೆಂಬಲವಾಗಿ ನಿಂತು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು..

ಕಬ್ಬಿನಿಂದ ನುರಿಸುವ ಕಾರ್ಯದಿಂದ ಇಂದು ರಾಜ್ಯ ಸರ್ಕಾರಕ್ಕೆ 50 ರಿಂದ 55 ಸಾವಿರ ಕೋಟಿ ತೆರಿಗೆ ಮೂಲಕ ಆದಾಯ ಬರುತ್ತದೆ, ಇಷ್ಟೊಂದು ಆದಾಯ ಬರುವಾಗ ರಾಜ್ಯ ಸರ್ಕಾರದ ಕರ್ತವ್ಯವು ಕೂಡಾ ಇರುತ್ತದೆ, ಈ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ರೈತರ ಬಗ್ಗೆ ಕಬ್ಬು ಬೆಳೆಗಾರರ ಬಗ್ಗೆ ಎಂಬುದನ್ನು ರೈತರು ಪ್ರಶ್ನೆ ಮಾಡುತ್ತಿದ್ದಾರೆ, ನಾನು ಕೂಡಾ ಒಬ್ಬ ರೈತ ನಾಯಕನ ಮಗನಾಗಿ ರೈತರ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ.