ಕರವೇ ಮನವಿಗೆ ಸ್ಪಂದಿಸಿದ ದಂಡು ಮಂಡಳಿ..

ಕರವೇ ಮನವಿಗೆ ಸ್ಪಂದಿಸಿದ ದಂಡು ಮಂಡಳಿ..

ಆಟೋ ಡ್ರೈವರಗಳ ಪರನಿಂತ ಕರವೇ ಸಂಘಟನೆ..

ಬೆಳಗಾವಿ – ಬೆಳಗಾವಿಯ ದಂಡು ಮಂಡಳಿಯ ಪ್ರದೇಶದಲ್ಲಿ ಬರುವ ಅಟೋಗಳಿಗೂ ಪೇ ಪಾರ್ಕಿಂಗ್ ಶುಲ್ಕ ವಿಧಿಸುತ್ತಿರುವದನ್ನು ವಿರೋಧಿಸಿ ಶುಕ್ರವಾರ ದಂಡು ಮಂಡಳಿಯ ಅಧಿಕಾರಿಗಳಿಗೆ ಕರವೇ ನಿಯೋಗ ಭೇಟಿಯಾಗಿ ಅಟೋಗಳಿಗೆ ಶುಲ್ಕ ವಿಧಿಸುತ್ತಿರುವದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು.

ಕರವೇ ಮನವಿಗೆ ಸ್ಪಂದಿಸಿದ ದಂಡು ಮಂಡಳಿಯ ಅಧಿಕಾರಿಗಳು ಆಟೋಗಳಿಗೆ ಪೇ ಪಾರ್ಕಿಂಗ್ ವಸೂಲಿ ಮಾಡುವದನ್ನು ನಿಲ್ಲಿಸುವಂತೆ ಮೌಖಿಕ ಆದೇಶ ಮಾಡಿದ್ದಾರೆ.

ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿಯಾಗಿ ಪೇ ಪಾರ್ಕಿಂಗ್ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಶುಕ್ರವಾರ ಒತ್ತಾಯಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..