ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ, ಆರ್ ಎಲ್ ಲಾ ಕಾಲೇಜಿನ ಐದು ಹಳೆಯ ವಿಧ್ಯಾರ್ಥಿಗಳಿಗೆ ಸನ್ಮಾನ..
ಬೆಳಗಾವಿ : ಗುರುವಾರ ನಗರದ ಕಾಲೇಜ್ ರಸ್ತೆಯಲ್ಲಿರುವ ಆದರ್ಶ ಪ್ಯಾಲೇಸ್ ಹೋಟೆಲಿನಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಾಖಮನಗೌಡ ಕಾನೂನು ಮಹಾವಿದ್ಯಾಲಯದ ಅಧಿಕಾರಿಗಳು ಅಭಿನಂದನಾ ಸಮಾರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ..
ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಕಾರ್ಯದರ್ಶಿಯಾದ ಅರುಣ ಗಣಾಚಾರಿ ಅವರು, ಬೆಳಗಾವಿಯ ಆರ್ ಎಲ್ ಲಾ ಕಾನೂನು ಮಹಾವಿದ್ಯಾಲಯದಲ್ಲಿ ಈ ಹಿಂದೆ ಕಲಿತು ಹೋದ, ಹಳೆಯ ವಿಧ್ಯಾರ್ಥಿಗಳು ಇಂದು ಪ್ರತಿಷ್ಠಿತ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು ಸಂಸ್ಥೆಗೆ ಹೆಮ್ಮೆ ತರುವ ವಿಷಯವಾಗಿದೆ, ಆದಕಾರಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ, ವರಾಳೆ ಅವರು ಆಗಸ್ಟ್ 05 ರಂದು, ಈ ಸಾಧನೆಗೈದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಿದ್ದಾರೆ ಎಂಬ ಮಾಹಿತಿ ನೀಡಿದರು..
ಸಂಸ್ಥೆ 1930ರಲ್ಲೆ ಪ್ರಾರಂಭವಾಗಿದ್ದು, ರಾಜ್ಯದ ಪ್ರತಿಷ್ಠಿತ ಎಲ್ಲಾ ನ್ಯಾಯಾಲಯದಲ್ಲಿಯೂ ಸರ್ಕಾರಿ ನ್ಯಾಯವಾದಿಗಳಾದ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಯ ಹೆಮ್ಮೆ ಆಗಿದೆ, ಆಗಸ್ಟ್ 5 ರಂದು ಸಂಜೆ 4 ಕ್ಕೇ ಈ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಕಾಲೇಜಿನ ಅನೇಕ ಸಾಧಕರು ಭಾಗಿಯಾಗಲಿದ್ದಾರೆ ಅವರೆಲ್ಲರ ಸಮ್ಮುಖದಲ್ಲಿ ಈ ಐದು ನ್ಯಾಯಾಧೀಶರಿಗೆ ಅಭಿನಂದನೆ ಜರುಗಲಿದೆ ಎಂಬ ಮಾಹಿತಿ ನೀಡಿದರು..
ಕೇವಲ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಷ್ಟೇ ಅಲ್ಲದೇ, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಈ ಕಾಲೇಜಿನ ವಿಧ್ಯಾರ್ಥಿಗಳು ಸಾಧನೆ ಮಾಡಿದ್ದು, ಸಂಸದರಾಗಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಸುರೇಶ ಅಂಗಡಿ ಅವರು ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದರು..
ಕರ್ನಾಟಕ ಉಚ್ಛ ನ್ಯಾಯಾಲಯದ 40 ನ್ಯಾಯಾಧೀಶರಲ್ಲಿ ನಮ್ಮ ಸಂಸ್ಥೆಯ 5 ನ್ಯಾಯಾಧೀಶರು ಇರುವದು ತುಂಬಾ ಹೆಮ್ಮೆಯ ವಿಷಯ, ನ್ಯಾಯಾಂಗ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಸಂಸ್ಥೆ ಹಾಗೂ ಕಾಲೇಜಿನ ಈ ಸಾಧನೆಗೆ ನಮ್ಮೆಲ್ಲರಿಗೂ ತುಂಬಾ ಸಂತಸದ ವಿಷಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು..
ಈ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯರಾದ ಆರ್ ಎಸ್ ಮುತಾಲಿಕ ದೇಸಾಯಿ, ಸಂಸ್ಥೆಯ ಅಧ್ಯಕ್ಷ ಎಂ ಆರ್ ಕುಲಕರ್ಣಿ, ಪ್ರಿನ್ಸಿಪಾಲ್ ಆದ ಎ ಏಚ್ ಹವಾಲ್ದಾರ, ಸಮಿನ ಬೇಗ ಮುಂತಾದವರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..