ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸುವರ್ಣ ಮಹೋತ್ಸವ.
50 ವರ್ಷಗಳ ಸಾರ್ಥಕ ಸಮರ್ಪಣೆಗೆ, ಮಾಲಿನ್ಯ ಮುಕ್ತ ಕರ್ನಾಟಕ ಧ್ಯೇಯ..
ಪರಿಸರ ಮಾಲಿನ್ಯ ಎಂಬುದು ದೇಶದ ದೊಡ್ಡ ಸವಾಲು…
ಮಾಲಿನ್ಯ ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯಕ..
ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷಗಳ ಸಾರ್ಥಕ ಪಯಣದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಪರಿಸರ ಮಾಲಿನ್ಯ ಎಂಬುದು ದೇಶದ ದೊಡ್ಡ ಸವಾಲು, ಮಾಲಿನ್ಯ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮ ಅತ್ಯವಶ್ಯಕ ಎಂದಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಈ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಿ 50 ವರ್ಷ ಆಗಿವೆ, ಜಾಗೃತಿ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿಯೂ ಮಾಡುತ್ತಿರುವದು ಸಂತಸದ ವಿಷಯ,
ಪರಿಸರ ಮಾಲಿನ್ಯ ಎನ್ನುವದು ಈ ದೇಶಕ್ಕೆ ದೊಡ್ಡ ಸವಾಲು, ಇದಕ್ಕೆ ಮುಂಜಾಗ್ರತೆ ಕ್ರಮ ವಹಿಸಬೇಕು, ಸಮಸ್ಯೆ ನಿವಾರಣೆಯಲ್ಲಿ ನಾವೆಲ್ಲ ಪ್ರಯತ್ನಿಸಬೇಕು, ಕೇವಲ ಸರ್ಕಾರ ಹಾಗೂ ನಿಯಂತ್ರಣ ಮಂಡಳಿ ಮಾಡಿದರೆ ಸಾಲದು, ಅದರ ಜೊತೆಗೆ ನಮ್ಮ ಜವಾಬ್ದಾರಿಯೂ ಬಹಳ ಇದೆ ಎಂದಿದ್ದಾರೆ.
ಇಂತಹ ಪರಿಸರ ಜಾಗ್ರತಿ ಕಾರ್ಯಕ್ರಮಗಳು ಪ್ರತಿ ತಾಲೂಕು ಮಟ್ಟದಲ್ಲಿಯೂ ನಡೆಯಬೇಕು, ತಾಲೂಕು ಮಟ್ಟದಲ್ಲಿ ಜಾಗ್ರತಿಯ ಅವಶ್ಯಕತೆ ತುಂಬಾ ಇದೆ, ಪರಿಸರ ಕಾಳಜಿ, ಪರಿಸರ ಸಂರಕ್ಷಣೆಯಲ್ಲಿ ತೊಡಗಿದವರನ್ನು ಗೌರವಿಸುವದು ತುಂಬಾ ಅವಶ್ಯಕ, ಇಲ್ಲಿ ವಿದ್ಯಾರ್ಥಿಗಳು ಬಹಳ ಸಂಖ್ಯೆಯಲ್ಲಿ ಉಪಸ್ಥಿತರಿರುವಿರಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಳ್ಳುವರು, ಅವರಿಗೆ ಅನುಕೂಲ ಆಗುತ್ತದೆ ಎಂದಿದ್ದಾರೆ..
ಇನ್ನೂ ಪ್ರಾಸ್ತಾವಿಕವಾಗಿ ಮಾತನಾಡಿದ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಪಿ ಎಂ ನರೇಂದ್ರಸ್ವಾಮಿ ಅವರು, ರಾಜ್ಯವ್ಯಾಪಿ ಪರಿಸರ ಸಂರಕ್ಷಣೆಯ ಜಾಗ್ರತಿ ಮೂಡಿಸುವದಕ್ಕಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಇಂತಹ ವಿಶೇಷವಾದ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ.
ನಮ್ಮ ದೇಶದ ಉಕ್ಕಿನ ಮಹಿಳೆಯ ದೂರ ದೃಷ್ಟಿಯ ಪಲವಾಗಿ ಸುಮಾರು ಐವತ್ತು ವರ್ಷಗಳ ಹಿಂದೆ ಈ ಮಂಡಳಿ ಜಾರಿಗೆ ಬಂದಿದ್ದು, ಇಂದು ನಾವು ನೀವೆಲ್ಲ ಶುದ್ಧ ನೀರು, ಗಾಳಿ, ಪರಿಸರವನ್ನು ಅನುಭವಿಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಡುಗೆ ಎಂದಿದ್ದಾರೆ.
ಇಂದಿರಾಗಾಂಧಿ ಹಾಗೂ ರಾಜೀವ ಗಾಂಧಿ ಅವರು ತಮ್ಮ ಅವಧಿಯಲ್ಲಿ ಅನೇಕ ಪರಿಸರ ಕಾಯ್ದೆಗಳನ್ನು ತಂದಿದ್ದು, ಜೊತೆಗೆ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಅವೆಲ್ಲಾ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿದೆ. ಇನ್ನೂ ಈಗಿನ ಯುವಪೀಳಿಗೆ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗುವದು ತುಂಬಾ ಅವಶ್ಯಕ ಆಗಿದೆ, ಆ ಕಾರಣಕ್ಕೆ ತಾಲೂಕು ಮಟ್ಟದ ಶಾಲಾ ಹಂತದಲ್ಲಿ ನಾವು ವಿಶೇಷವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.
ಪರಿಸರದ ಕುರಿತಾಗಿ ಜಾಗ್ರತಿ ಮೂಡಿಸುವ ರೀಲ್ಸ್ ಗಳಿಗೆ ಉತ್ತಮ ನಗದು ಬಹಮಾನ ನೀಡುವ ಮೂಲಕ ಯುವ ಸಮೂಹದಲ್ಲಿ ಪರಿಸರ ರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಇನ್ನೂ ಕಾರ್ಖಾನೆಗಳಲ್ಲಿ ಪರಿಸರಸಕ್ಕೆ ಹಾನಿಯಾಗುವ ಅಂಶಗಳನ್ನು ಕಡಿಮೆ ಮಾಡುವ ಪರಿಹಾರಕ ಮಾರ್ಗಗಳನ್ನು ಕಂಡು ಕೊಂಡು ಆದಷ್ಟು ಪರಿಸರ ಸಂರಕ್ಷಣೆ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ಪರಿಸರ ಸಂರಕ್ಷಣೆ ಮಾಡಿದ ವಿವಿಧ ಪರಿಸರ ಪ್ರೇಮಿಗಳಿಗೆ ಹಾಗೂ ಪರಿಸರ ಕಾಳಜಿ ಮೆರೆದ ವಿವಿಧ ಶಾಲೆಗಳಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಈ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಶಿಫ್ (ರಾಜು) ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳ್ಳಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್, ಜಿಲ್ಲಾ ಪೋಲೀಸ ವರಿಷ್ಟಾಧಿಕಾರಿಗಳಾದ ಭೀಮಾಶಂಕರ ಗುಳೇದ, ಬುಡಾ ಅಧ್ಯಕ್ಷರಾದ ಲಕ್ಷ್ಮಣ ಚಿಂಗಳೆ, ಕೆಎಸ್ಆರ್ಸಿಟಿ ನಿಗಮದ ಉಪಾಧ್ಯಕ್ಷರಾದ ಹಣಮ್ಮಣ್ಣವರ, ಬೆಳಗಾವಿಯ ಪ್ರಾದೇಶಿಕ ಪರಿಸರ ಮುಖ್ಯ ಅಧಿಕಾರಿಯಾದ ಗೋಪಾಲಕೃಷ್ಣ ಸನತಂಗಿ, ಪರಿಸರ ಅಧಿಕಾರಿ ಹನುಮಂತಪ್ಪ ಎಚ್ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಜಿಲ್ಲೆಯ ಅಧಿಕಾರಿಗಳು, ಸ್ಥಳೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..