ಕರ್ನಾಟಕ ರಾಜ್ಯ ರೈತ ಸಂಘದಿಂದ ಸುವರ್ಣ ಸೌಧ ಮುತ್ತಿಗೆ..
ರೈತ ವಿರೋಧಿ ನೀತಿಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯ ದೊಡ್ಡಪ್ಪ..
ರೈತರ ವಿಷಯದಲ್ಲಿ ಉಲ್ಟಾ ಹೊಡೆದ ಕಾಂಗ್ರೆಸ್ ಪಕ್ಷ..
ಕೋಡಿಹಳ್ಳಿ ಚಂದ್ರಶೇಖರ್ ಕಿಡಿ..
ಬೆಳಗಾವಿ : ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ರೈತ ಹೋರಾಟದ ಮುಖಂಡರಾದ ಕೊಡಿಹಳ್ಳಿ ಚಂದ್ರಶೇಖರ್ ಅವರು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯ ವಿರುದ್ಧ ತಮ್ಮದೇ ಶೈಲಿಯಲ್ಲಿ ಕೀಡಿ ಕಾರಿದ್ದಾರೆ..
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ದಿನಾಂಕ 04/12/2023 ರಂದು ಸಾವಿರಾರು ರೈತರೊಂದಿಗೆ, ಬೆಳಗಾವಿಯ ಚನ್ನಮ್ಮ ವೃತ್ತದಿಂದ ಸುವರ್ಣ ವಿಧಾನ ಸೌಧದ ವರೆಗೆ ಪಾದಯಾತ್ರೆ ಮಾಡಿ, ಸೌಧವನ್ನು ಮುತ್ತಿಗೆ ಹಾಕುವ ಮೂಲಕ ಸರ್ಕಾರವನ್ನು ಎಚ್ಚೆತ್ತುಗೊಳಿಸುವ ಕಾರ್ಯ ಮಾಡುತ್ತೇವೆ ಎಂದಿದ್ದಾರೆ..

ಕಳೆದ ಬಿಜೆಪಿ ಸರ್ಕಾರದಲ್ಲಿ ಕೃಷಿ ಕಾಯಿದೆಯನ್ನು ಜಾರಿಗೆ ತಂದಿದ್ದು, ಅದು ರೈತ ಸಮುದಾಯಕ್ಕೆ ಮಾರಕವಾಗುತ್ತದೆ ಎಂದು ನಮ್ಮ ಜೊತೆ ರಾಜ್ಯದ ಎಲ್ಲಾ ರೈತರು ವಿರೋಧ ಮಾಡಿ, ಪ್ರತಿಭಟನೆ ಮಾಡಿದ್ದರು, ಜೊತೆಗೆ ಆಗಿನ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರೂ ಕೂಡಾ ವಿರೋಧ ಮಾಡಿ, ಕಾಯಿದೆ ಹಿಂತೆಗೆದುಕೊಳ್ಳಲು ಒತ್ತಾಯ ಮಾಡಿದ್ದರು, ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದರು..
ನಂತರ ಚುನಾವಣೆ ಸಂದರ್ಭದಲ್ಲಿಯೂ ಕೂಡಾ ಕಾಂಗ್ರೆಸ್ ಪಕ್ಷ ರೈತರಿಗೆ ಆಶ್ವಾಸನೆ ನೀಡಿ, ಕೃಷಿ ಕಾಯಿದೆಯನ್ನು ಹಿಂದೆ ಪಡೆಯುತ್ತೇವೆ ಎಂಬ ಭರವಸೆ ನೀಡಿತ್ತು, ಆದರೆ ಅಧಿಕಾರ ಹಿಡಿದ ಮೇಲೆ ಕಾಂಗ್ರೆಸ್ ಪಕ್ಷವಾಗಲಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಾಗಲಿ ಕಾಯಿದೆ ರದ್ದು ಮಾಡುವ ವಿಷಯ ತಗೆಯುತ್ತಿಲ್ಲ, ರೈತರ ವಿಷಯದಲ್ಲಿ ಉಲ್ಟಾ ಹೊಡೆಯುತ್ತಿದ್ದಾರೆ ಎನಿಸುತ್ತಿದೆ, ಇದರಿಂದ ಇಡೀ ರೈತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡುತ್ತಿರುವ ಸಂಗತಿ ಕಾಣುತ್ತದೆ ಎಂದರು..

ಮೊನ್ನೆ ಎಪಿಎಂಸಿ ಕಾಯ್ದೆಯ ವಿಷಯವಾಗಿ ಕಾಂಗ್ರೆಸ್ಸಿನ ಒಬ್ಬ ಮಂತ್ರಿಯವರು ಅತೀ ಆಸಕ್ತಿ ವಹಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಮರ್ಥನೆ ಮಾಡಿಕೊಳ್ಳುವದನ್ನು ನೋಡಿದರೆ, ಬಿಜೆಪಿ ಮಾಡಿದ ರೈತ ವಿರೋಧಿ ಎಪಿಎಂಸಿ ಕಾಯಿದೆಯನ್ನು ಕಾಂಗ್ರೆಸ್ ಪಕ್ಷ ಯತಾವತ್ತಾಗಿ ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿದಂತೆ ಕಾಣುತ್ತದೆ, ಬಿಜೆಪಿಯವರು ಮತ್ತು ನೀವು ಎಲ್ಲಾ ಒಂದೇ, ರೈತರಿಗೆ ಮಾರಕವಾಗುವ ನಿಯಮಗಳನ್ನೇ ಮಾಡುವವರು ಎಂದು ತಿಳಿಯುತ್ತದೆ ಎಂದಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಬರಗಾಲ ಬಂದಿದೆ, ಸಿದ್ದರಾಮಯ್ಯ ಅವರು ವಿಚಾರವಂತ ಮುಖ್ಯಮಂತ್ರಿಯಾಗಿದ್ದು, ರೈತರ ಪರಿಸ್ಥಿತಿ ಅರ್ಥ ಮಾಡಿಕೊಂಡು, ಬರ ಪರಿಹಾರ ಹಂಚಿಕೆಯಲ್ಲಿ ರೈತರಿಗೆ ಅಗೌರವ ಆಗದಂತೆ ನೋಡಿಕೊಳ್ಳಿ ಎಂದ ಅವರು, 25,000 ನಷ್ಟ ಆದ ಸಂದರ್ಭದಲ್ಲಿ ನೀವು 2000 ನೀಡಿದರೆ ಏನು ಅರ್ಥ ಎಂದ ಅವರು, ರೈತರು ಸಂಕಷ್ಟದಲ್ಲಿ ಇರುವಾಗ ನೀವು ಬೇರೆ ರಾಜ್ಯದಲ್ಲಿ ಹೋಗಿ ಚುನಾವಣಾ ಗೆಲ್ಲಲು ಪ್ರಚಾರದಲ್ಲಿ ಬಿಜಿ ಇದ್ದೀರಿ, ರೈತರ ವಿಷಯದಲ್ಲಿ ನಿಮ್ಮ ಸುಳ್ಳುತನ ನಿಲ್ಲಿಸಿ, ನಿಮ್ಮ ಮಾತು ಉಳಿಸಿಕೊಳ್ಳಿ ಎಂದು ಕಿಡಿ ಕಾರಿದರು..

ಈ ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರ ಜೊತೆಯಲ್ಲಿ ರೈತ ಮುಖಂಡ ಭೀಮಶಿ ಗಡಾದಿ, ರಾಜು ವರ್ಲೆ, ಮತ್ತಿತರರು ಹಾಜರಿದ್ದರು..
ವರದಿ ಪ್ರಕಾಶ ಕುರಗುಂದ…