ಕಳ್ಳರು ಚಾಪೆ ಕೆಳಗೆ ತೂರಿದರೆ, ಅಧಿಕಾರಿಗಳು ರಂಗೋಲಿ ಕೆಳಗೆ ತೂರಿದ್ದಾರೆ..!
ಸಾರಾಯಿ ಖದೀಮರ ಚಕ್ರವ್ಯೂಹ ಭೇದಿಸಿದ ಚಾಣಾಕ್ಷ ಅಬಕಾರಿ ಅಧಿಕಾರಿಗಳು..!
ಬೆಳಗಾವಿ : ಶನಿವಾರ ಬೆಳಿಗ್ಗೆ ಸುಮಾರು 3 ರಿಂದ 4ರ ಸಮಯದಲ್ಲಿ ನಗರದ ಸುವರ್ಣ ವಿಧಾನ ಸೌಧದ ಬಳಿ, ಖಚಿತ ಮಾಹಿತಿ ಮೇರೆಗೆ, ಅಬಕಾರಿ ಇಲಾಖೆಯ ಸಿಬ್ಬಂದಿ, ಸಾರಾಯಿ ಕಳ್ಳ ಸಾಗಣೆಯ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ..
ಬೆಳಗಾವಿಯ ಅಬಕಾರಿ ಇಲಾಖೆಯ ಪೊಲೀಸರಿಂದ ಹೈ ಪ್ರೊಫೈಲ್, ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಜಾಲವನ್ನು ಖೆಡ್ಡಾಕ್ಕೆ ಕೆಡವಿ, ಸಾರಾಯಿ ಕಳ್ಳ ಸಾಗಾಟಗಾರರ ನಿದ್ದೆಗೆಡಸಿದ್ದಾರೆ..
ರಾತ್ರಿ ಹೊತ್ತಿನಲ್ಲಿಯೇ ದಾಳಿ ಮಾಡಿದ ಅಬಕಾರಿ ಸಿಬ್ಬಂದಿ, ಲಾರಿ ಸಮೇತ ಸುಮಾರು 54 ಲಕ್ಷ ಮೌಲ್ಯದ ಬೆಳೆಬಾಳುವ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ..

ಈ ವೇಳೆ ಘಟನೆಯ ಬಗ್ಗೆ ಮಾಹಿತಿ ನೀಡಿದ ಅಬಕಾರಿ ಅಪರ ಆಯುಕ್ತರಾದ ಮಂಜುನಾಥ್ ಅವರು, ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಸುವರ್ಣಸೌಧ ಬಳಿ ನಮ್ಮ ಅಧಿಕಾರಿಗಳು ಕೆಲ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ,
ಕಳ್ಳರು ಕೆಲ ದಿನಗಳಿಂದ ಈ ಕಳ್ಳ ಸಾಗಾಟ ಮಾಡುತ್ತಿದ್ದು, ತುಂಬಾ ಜಾಣತನದಿಂದ, ಪ್ಲಾವುಡ್ ಮಧ್ಯದಲ್ಲಿ ಲಿಕ್ಕರ್ ಬಾಕ್ಸ್ ಬಚ್ಚಿಟ್ಟು ಲಿಕ್ಕರ್ ಸ್ಮಗ್ಲಿಂಗ್ ಮಾಡುತ್ತಿದ್ದ ಒಂದು ಅಪಾಯಕಾರಿ ತಂಡ ಇದು ಎಂದಿದ್ದಾರೆ,
ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ಖರೀದಿಸಿ, ಅಕ್ರಮವಾಗಿ ಬೇರೆ ರಾಜ್ಯಕ್ಕೆ ಸಾಗಾಟ ಮಾಡುವ ಈ ತಂಡವು ಬಹುದೊಡ್ಡ ಕಾನೂನುಬಾಹಿರ ಕಾರ್ಯದಲ್ಲಿ ತೊಡಗಿದೆ ಎಂದಿದ್ದಾರೆ..

ಹೊರನೋಟಕ್ಕೆ ಪ್ಲೈವುಡ್ ಸಾಗಿಸುವ ಲಾರಿಯಂತೆ, ಯಾರೇ ಪರೀಕ್ಷೆ ಮಾಡಿದರೂ ಸಂಶಯ ಬಾರದಂತೆ ಕಾಣುವ ಹಾಗೆ ಲೋಡಿಂಗ ಮಾಡಿದ್ದು, ಅವರ ಬುದ್ದಿವಂತಿಕೆ, ಆದರೆ ಅಧಿಕಾರಿಗಳು ಯಾವ ಹಂತಕ್ಕೆ ಇಳಿಯಬಹುದು ಎಂಬುದು ಇಂತಹ ಖದಿಮರಿಗೆ ಗೊತ್ತಿಲ್ಲ, ಆ ಲೆವೆಲ್ಲಿಗೆ ಕಾರ್ಯ ಮಾಡಿ ಇಂದು ನಮ್ಮ ಸಿಬ್ಬಂದಿ, ಸುಮಾರು 28 ಲಕ್ಷ ಮೌಲ್ಯದ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿದ್ದೇವೆ ಎಂದರು..
ಈ ಹಿಂದೆ ಕೆಲವು ಬಾರಿ, ಪೊಲೀಸರ ಪರಿಶೀಲನೆ ವೇಳೆ, ಈ ತಂಡವು ನಾವು ಪ್ಲಾವುಡ್ ಸಾಗಿಸುತ್ತಿದ್ದೇವೆ ಎಂದು ಹೇಳಿ ಬಚಾವ್ ಆಗುತ್ತಿದ್ದರೆಂಬ ಮಾಹಿತಿ ನೀಡಿದ ಅವರು,
ಗೋವಾದಿಂದ ಈ ಮದ್ಯವನ್ನು ಯಾವ ರಾಜ್ಯಕ್ಕೆ ಕಳಿಸಲಾಗುತ್ತಿತ್ತು ಎಂಬ ವಿಷಯ ತನಿಖೆಯಿಂದ ಬಯಲಾಗಬೇಕಾಗಿದೆ ಎಂದಿದ್ದಾರೆ..

ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ಬನಾರಸ್ ಮೂಲದ ವಿರೇಂದ್ರ ಮಿಶ್ರಾ (34) ಎಂಬ ಚಾಲಕನನ್ನು ಬಂಧನ ಮಾಡಿದ್ದು, ದುಬಾರಿ ಬೆಲೆಯ ಈ ಮಧ್ಯ ಸಾಗಾಟದ ಹಿಂದೆ ಇನ್ನೂ ಯಾರ್ಯಾರ ಕೈವಾಡ ಇದೇ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ ಎಂದಿದ್ದಾರೆ..
ಬೆಳೆಬಾಳುವ ಸಾರಾಯಿ ಬಾಟಲಿಗಳನ್ನೇ ಪ್ಲಾವುಡ್ ಮಧ್ಯದಲ್ಲಿಟ್ಟು ಸಾಗಾಟ ಮಾಡುವ ಈ ಖತರ್ನಾಕ್ ತಂಡದ ಹಿಂದೆ ದೊಡ್ಡವರು ಇರುವ ಸಂಶಯ ಇದ್ದು, ಮುಂದಿನ ತನಿಖೆಯಲ್ಲಿ ಸತ್ಯಾಸತ್ಯತೆ ತಿಳಿಯುತ್ತದೆ ಎಂದರು..

ಪ್ರಕರಣ ಬೇಧಿಸಿದ ನಮ್ಮೆಲ್ಲ ಸಿಬ್ಬಂದಿ ಕಾರ್ಯಕ್ಕೆ ತುಂಬಾ ಮೆಚ್ಚಗೆಯಿದೆ ಎಂದ ಅಬಕಾರಿ ಅಪರ ಆಯುಕ್ತರಾದ ಮಂಜುನಾಥ ಅವರು ತಮ್ಮ ಸಿಬ್ಬಂದಿಯ ಜೊತೆಯಾಗಿ, ರವಿವಾರ ಮದ್ಯಾಹ್ನ ಮಾಧ್ಯಮದವರ ಎದುರಿಗೇ ಪ್ಲೈವುಡ್ ಕೆಳಗೆ ಸಾರಾಯಿ ತುಂಬಿದ ಲಾರಿಯನ್ನು ತೆರೆದು, ಮದ್ಯದ ಬಾಟಲಿಗಳನ್ನು ಎಣಿಕೆ ಮಾಡಲಾಯಿತು..
ವರದಿ ಪ್ರಕಾಶ ಕುರಗುಂದ..