ಕಾಂಗ್ರೆಸ್ ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಯಾದ ಪದಾಧಿಕಾರಿಗಳು..

ಕಾಂಗ್ರೆಸ್ ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಯಾದ ಪದಾಧಿಕಾರಿಗಳು..

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ..

ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಪ್ರಯತ್ನದಿಂದ ಬಿಜೆಪಿಗೆ ಬಲ..

ಬೆಳಗಾವಿ : 2024ರ ಬೆಳಗಾವಿ ಲೋಕಸಭಾ ಚುನಾವಣಾ ಕದನದಲ್ಲಿ ಹತ್ತು ಹಲವು ರಾಜಕೀಯ ವಿದ್ಯಮಾನಗಳು, ಬದಲಾವಣೆಗಳು ನಡೆಯುತ್ತಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯ ಹಲವು ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ..

ಮೊನ್ನೆ ಶುಕ್ರವಾರ ಬೆಳಗಾವಿ ಲೋಕಸಭಾ ಚುನಾವಣೆಯ ಪ್ರಚಾರದ ನಿಮಿತ್ತ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ, ಬಿಜೆಪಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾ ಬಿಜೆಪಿ ನಾಯಕರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಲವು ಪದಾಧಿಕಾರಿಗಳು ಬಿಜೆಪಿ ನಾಯಕರ ಸಮ್ಮುಖದಲ್ಲಿಯೇ ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರಿಕೊಂಡಿದ್ದಾರೆ..

ಮಾರಿಹಾಳ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಬಸವರಾಜ ಸಿತಿಮಣಿ, ಮಾರಿಹಾಳ ಪಿಕೆಪಿಎಸ್ ನಿರ್ದೇಶಕರಾದ ಮಹಾಂತೇಶ ಉಪ್ಪಿನ, , ಪಿಕೆಪಿಎಸ್ ಸದಸ್ಯರಾದ ಗುರು ಅಕ್ಕತಂಗಿಯರಹಾಳ, ಶಂಕರಗೌಡ ಹೊನ್ನಪ್ಪನವರ ಹಾಗೂ ಮಂಜು ಬರಲಿ ಇವರೆಲ್ಲಾ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರುವ ಮೂಲಕ ಪಕ್ಷಕ್ಕೆ ಬಲ ತಂದಿದ್ದಾರೆ, ಈ ಪಕ್ಷಾಂತರ ಕಾರ್ಯದ ಹಿಂದೆ ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮಾದಮ್ಮನವರ ಅವರ ಪ್ರಯತ್ನ ಶ್ಲಾಘನೀಯ ಎಂಬ ಮಾಹಿತಿ ಇದೆ..

ವರದಿ ಪ್ರಕಾಶ್ ಕುರಗುಂದ..