ಕಾಕಾತಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಬೆಳಗಾವಿ ತಾಲೂಕಿನ 10ನೇ ಸಾಹಿತ್ಯ ಸಮ್ಮೇಳನ..

ಕಾಕಾತಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಬೆಳಗಾವಿ ತಾಲೂಕಿನ 10ನೇ ಸಾಹಿತ್ಯ ಸಮ್ಮೇಳನ..

ಔದ್ಯೋಗಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ ಶಿವು ನಂದಗಾವಿ ಅವರಿಗೆ ಸಾಹಿತ್ಯದ ಸನ್ಮಾನ..

ಬೆಳಗಾವಿ : ಬಸವಾದಿ ಶರಣರು ಕಲ್ಯಾಣ ನಾಡು ಬೆಳಗಿರುವಂತ ಕಲ್ಯಾಣವನ್ನು “ಕ” ಎಂಬ ಅಕ್ಷರದ ಮೂಲಕ ಕಲ್ಯಾಣ ಮಂಟಪ ಕಟ್ಟಿದರು‌‌. ಕಾಶ್ಮೀರ ಕನ್ಯಾಕುಮಾರಿ ಹೀಗೆ ಎಲ್ಲವನ್ನು ಕನ್ನಡದಿಂದ ಕಟ್ಟಲಾಗಿದೆ. ಇದನ್ನು ನೋಡಿದಾಗ ಕಸ್ತೂರಿ ಕನ್ನಡ ಎಲ್ಲೆಲ್ಲೂ ಹರಡಿರುವುದನ್ನು ಸಾಹಿತಿಗಳು ತಮ್ಮ ಕವಿತೆಗಳಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ ಎಂದು ಸುಕ್ಷೇತ್ರ ಮುಕ್ತಿ ಮಠದ ಪೂಜ್ಯಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಕಾಕತಿಯ ಶ್ರೀಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸೋಮವಾರ 27 ರಂದು ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ‌ಆಯೋಜಿಸಲಾದ ‘ಬೆಳಗಾವಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಕೂಟರು, ಚಾಲುಕ್ಯರು ಹೊಯ್ಸಳರು ಹೀಗೆ ಹಲವು
ಕನ್ನಡ ನಾಡಿನ ಅರಸರು ಕನ್ನಡ ಲಿಪಿಯನ್ನು ಬಳಸಿ, ಅಲ್ಲಲ್ಲಿ ಕಲ್ಲುಗಳ ಮೇಲೆ ಕನ್ನಡ ಅಕ್ಷರ ಕೆತ್ತಿಸಿ ವಿಜಯನಗರದ ಸಾಮ್ರಾಜ್ಯದ ಘನತೆ ಗೌರವವನ್ನು ಈ ಕನ್ನಡ ಬಾಷೆ ಹೆಚ್ಚಿಸಿದೆ. ಹೀಗಾಗಿ ಹಕ್ಕಬುಕ್ಕ ವಿದ್ಯಾರಣ್ಯರ ಅಂತಹ ಅನೇಕರು ಕನ್ನಡವನ್ನು ಉಳಿಸಿ ಬೆಳಸಿ ಮೆರೆಸಿದ್ದಾರೆ ಎಂದರು.
ಆಂಗ್ಲರು ಬಳಸಿದ ಕರ್ನಾಟಕ ಪದ ಕರುನಾಡು ಎಂದು ಮರುನಾಮಕರಣವಾಗಬೇಕು
ಎಂದು ಸುಕ್ಷೇತ್ರ ಮುಕ್ತಿ ಮಠದ ಪೂಜ್ಯಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.

ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ: ಕನ್ನಡ ಭಾಷೆ ಪುರಾತನ ಭಾಷೆಯಾಗಿದ್ದು, ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಹಾಗೂ ಸಮೃದ್ಧಿಯಾದ ಭಾಷೆಯಾಗಿದೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.‌

ಕನ್ನಡ ಸಂಸ್ಕೃತಿ‌, ಇತಿಹಾಸ ತಿಳಿದುಕೊಳ್ಳುವ ಪ್ರಯತ್ನವನ್ನು ಯುವ ಪೀಳಿಗೆ ಮಾಡಬೇಕಿದೆ. ಮಹಾನ್ ಪುರುಷರು ಜನಿಸಿದ ಪುಣ್ಯದ ನಾಡು ಕನ್ನಡನಾಡು, ಅಂತಹ ಮಹನೀಯರು ನೆನುವ ಕಾರ್ಯವಾಗಬೇಕು‌.‌ ನಾಡು , ನುಡಿ, ನೆಲ, ಜಲ ವಿಚಾರ ಬಂದಾಗ ಕನ್ನಡಾಭಿಮಾನಿಗಳು ಹೋರಾಟ ಮಾಡಿದ್ದಾರೆ. ಕನ್ನಡ ಬೆಳೆಸಲು ಮಹನೀಯರು ಹಾಗೂ ಸಾಹಿತ್ಯಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರ ತ್ಯಾಗ ಫಲವೇ ಕನ್ನಡ ವಿಶ್ವವ್ಯಾಪಿ ಬೆಳೆದಿದೆ ಎಂದರು.

ತಂದೆಯವರಾದ ಸಚಿವ ಸತೀಶ ಜಾರಕಿಹೊಳಿ ಅವರು ಕನ್ನಡ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ಶಿಕ್ಷಣ ಒಂದೇ ದಾರಿಯಾಗಿದೆ. ಹೀಗಾಗಿ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕಿದೆ. ಸಚಿವರು ಯಮಕನಮರಡಿ ಕ್ಷೇತ್ರದ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಶಾಲಾ ಅಭಿವೃದ್ಧಿಗಾಗಿ ಈಗಾಗಲೇ 8.5 ಕೋಟಿ ರೂ. ನೀಡಿದ್ದಾರೆ ಎಂದು ಹೇಳಿದರು.

ಈ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗಿದ್ದು, ಕೆಲ ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಒಂದು ಸಣ್ಣ ಕೆಲಸ ಹುಡುಕಿಕೊಂಡು ಬಂದ ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಸಾಧನೆಗೈದ ಮಹಾನ ಮಾದರಿ ಉದ್ಯಮಿಯಾಗಿರುವ ಬೆಳಗಾವಿಯ ಶಿವಾ ಅಪಸೆಟ್ ಸಂಸ್ಥಾಪಕರಾದ ಶಿವು ನಂದಗಾವಿ ಅವರಿಗೆ ಅವರ ಔದ್ಯೋಗಿಕ ವಲಯದಲ್ಲಿನ ಸಾಧನೆಗೆ ಸನ್ಮಾನಿಸಲಾಗಿದೆ..

ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಶೈಲಜಾ ಭಿಂಗೆ, ತಾಲೂಕು ಸಾಹಿತ್ಯ ಸಮ್ಮೇಳನದ ಉಸ್ತುವಾರಿ ಅಶೋಕ ಖೋತ, ತಾಪಂ ಮಾಜಿ ಸದಸ್ಯ ಯಲ್ಲಪ್ಪ ಕೋಳೆಕರ, ಶಿವಾ ಆಪಸೆಟ್ ಸಂಸ್ಥಾಪಕರಾದ ಶಿವು ನಂದಗಾವಿ, ಸಿದ್ದು ಸುಣಗಾರ , ಸಚಿವರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ್, , ಖ್ಯಾತ ವೈದ್ಯಾರಾದ ಗಿರೀಶ ಸೋನವಾಲ್ಕರ್ , ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಅಧ್ಯಕ್ಷತೆ ವಹಿಸುವರು. ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ಡಾ. ಹೇಮಾ ಸೊನೊಳ್ಳಿ, ಬೆಳಗಾವಿ ತಾಲೂಕಿನ ಕನಾಪ ಅಧ್ಯಕ್ಷರಾದ ಸುರೇಶ ಹಂಜಿ ,ಎಂ.ವೈ. ಮೆಣಸಿನಕಾಯಿ, ಹೇಮಾ ಕಾಜಗಾರ, ಶಿವಾನಂದ ತಲ್ಲೂರ, ವಿ.ಎಂ. ಅಂಗಡಿ, ಪ್ರಬಾವತಿ ಹಿರೇಮಠ, ಬಿಇಒ ರವಿ ಭಜಂತ್ರಿ, ಯಲ್ಪಪ್ಪ ಕಿಲೇಕರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಅಧ್ಯಕ್ಷತೆ ವಹಿಸುವರು. ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ಡಾ. ಹೇಮಾ ಸೊನೊಳ್ಳಿ, ಎಂ.ವೈ. ಮೆಣಸಿನಕಾಯಿ, ಹೇಮಾ ಕಾಜಗಾರ, ಶಿವಾನಂದ ತಲ್ಲೂರ ಹಾಗೂ ಇತರರು ಇದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ.