ಸಿಎಂ ವಿರುದ್ಧ ರಾಜಕೀಯ ಷ್ಯಡ್ಯಂತ್ರ ನಡೆಯುತ್ತಿದೆ..
ಕಾನೂನು ಹೋರಾಟ ಮಾಡುತ್ತೇವೆ, ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲಾ.
ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿದ ಸಿದ್ದರಾಮಯ್ಯ ಇಂದು ಟಾರ್ಗೆಟ್ ಆಗಿದ್ದಾರೆ..
ನಮ್ಮ ಇಡೀ ಪಕ್ಷ ಅವರ ಜೊತೆ ನಿಲ್ಲುತ್ತೆವೆ..
ಸಚಿವ ಸತೀಶ್ ಜಾರಕಿಹೊಳಿ..
ಬೆಳಗಾವಿ : ಕಾಂಗ್ರೆಸ್ ಸರ್ಕಾರ ಅಭದ್ರಗೊಳಿಸುವ ಹುನ್ನಾರ ನಡೆದಿದೇಯಾ ಎಂಬ ಆರೋಪಕ್ಕೆ ಪ್ರತಿಕ್ರಯಿಸಿರುವ ಸಚಿವ ಸತೀಶ ಜಾರಕಿಹೊಳಿ, ಆ ಬಗ್ಗೆ ರಾಜ್ಯಪಾಲರ ವಿರುದ್ಧ ಈಗಗಾಲೇ ಸಾಕಷ್ಟು ಆರೋಪ ಕೇಳಿ ಬಂದಿವೆ. ನಾವು ರಾಜಕೀಯ ಪಕ್ಷವಾಗಿ ಎದುರಿಸಬೇಕಾಗಿದ್ದು, ಎದುರಿಸುತ್ತೇವೆ. ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಸಮರ್ಥಿಸಿಕೊಂಡರು.
ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಷಿಕ್ಯೂಶನ್ ಗೆ ಅನುಮತಿ ವಿಚಾರಕ್ಕೆ ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಸತೀಶ ಜಾರಕೊಹೊಳಿ, ನಿರೀಕ್ಷೆಯಂತೆ ಅನುಮತಿ ಕೊಡುತ್ತಾರೆ ಅಂತಾ ಇತ್ತು, ಕೊಟ್ಟಿದ್ದಾರೆ. ರಾಜ್ಯದಲ್ಲಿ ಬೆಳಿಗ್ಗೆಯಿಂದ ತುಂಬ ಚರ್ಚೆ ಆಗುತ್ತಿದೆ. ನಾವು ಕೂಡ ಮಾನಸಿಕವಾಗಿ ಸಿದ್ಧವಾಗಿದ್ದೇವೆ. ಸದ್ಯ ನಮ್ಮ ಮುಂದೆ ಇರೋದು ಕಾನೂನು ಹೋರಾಟ. ಅದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ, ಕಾನೂನು ಹೋರಾಟ ಈಗಾಗಲೇ ಪ್ರಾರಂಭ ಆಗಿದೆ. ರಾಜ್ಯಪಾಲರು ಅನುಮತಿ ಕೊಟ್ಟ ಒಂದು ದಿನಕ್ಕೆ ಏನೂ ಆಗಲ್ಲ, ಕಾಯ್ದು ನೋಡಬೇಕು ಎಂದರು.
ಇನ್ನು ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ, ಸಿಎಂ ಮೇಲೆ ತನಿಖೆಯಾಗಿ ಆರೋಪ ಸಾಬೀತಾದ್ರೆ ಅದು ಎರಡನೇ ಹಂತ. ಕೇಂದ್ರ ಸರ್ಕಾರದ 25 ಮಂತ್ರಿಗಳ ಮೇಲೆ ಚಾರ್ಜ್ ಸೀಟ್, ಕೇಸ್ ದಾಖಲಾಗಿವೆ. ಆದರೂ ಮಂತ್ರಿಗಳಾಗಿ ಮುಂದುವರೆದಿದ್ದಾರೆ.
ಇದು ಇವತ್ತಿಂದಲ್ಲ ಹಿಂದೆಯೂ ಇತ್ತು ಈಗಲೂ ಇದೆ, ಮುಂದೆಯೂ ನಡೆಯುತ್ತಲೇ ಇರುತ್ತದೆ ಎಂದು ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡರು.

ಯಡಿಯೂರಪ್ಪ ಮೇಲೆ ಆರೋಪ ಕೇಳಿ ಬಂದಾಗ ರಾಜೀನಾಮೆ ಕೊಟ್ಟಂತೆ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಬೇಕು ಎಂಬ ವಿಚಾರಕ್ಕೆ ಯಡಿಯೂರಪ್ಪ ಕೇಸ್ ಬೇರೆ ಇದೆ. ಸಿದ್ದರಾಮಯ್ಯ ಕೇಸ್ ಬೇರೆ ಇದೆ. ಯಡಿಯೂರಪ್ಪ ಭೂಮಿ ಬಿಟ್ಟು ಕೊಟ್ಟಿದ್ದರು. ಸ್ವಂತ ಸಹಿ ಮಾಡಿದ್ದರು. ಅಲ್ಲದೇ ಯಡಿಯೂರಪ್ಪ ಕೇಸ್ ಗೆ ನ್ಯಾಯಮೂರ್ತಿ ಸಂತೋಷ ಹೆಗಡೆ ವರದಿ ಕೊಟ್ಟಿದ್ದರು. ಅದರಲ್ಲಿ ಯಡಿಯೂರಪ್ಪ ಹೆಸರು ಕೂಡ ಬಂದಿತ್ತು. ಹಾಗಾಗಿ, ಅವರು ರಾಜೀನಾಮೆ ಕೊಟ್ಟಿದ್ದರು. ಆದ್ದರಿಂದ ಸಿದ್ದರಾಮಯ್ಯ ಜೊತೆ ನಾವೆಲ್ಲ ಗಟ್ಟಿಯಾಗಿ ಜೊತೆಗೆ ಇರಬೇಕು.
ಸಿದ್ದರಾಮಯ್ಯ ಬದಲಾವಣೆ ಮಾಡುವ ಪ್ರಶ್ನೆಯೇ ಬರಲ್ಲ. ಈ ಪ್ರಕರಣದಲ್ಲಿ ಈಗ ಇನ್ನು ಎ ದಿಂದ ಆರಂಭವಾಗಿದೆ, ಜೆಡ್ ಗೆ ಬಂದಾಗ ನೀವು ಹೇಳುವುದು ಅನ್ವಯ ಆಗುತ್ತದೆ ಎಂದು ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.
ಬಿಜೆಪಿ ಹೈಕಮಾಂಡ್ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುತ್ತಿದೆಯಾ ಎಂಬುದಕ್ಕೆ ಖಂಡಿತ ಟಾರ್ಗೆಟ್ ಮಾಡಿದೆ, ಯಾಕೆಂದರೆ ಬಿಜೆಪಿಯನ್ನು ಸಿದ್ದರಾಮಯ್ಯ ಸಮರ್ಥವಾಗಿ ಎದುರಿಸುತ್ತಿದ್ದರು. ದೇಶದಲ್ಲಿ ಯಾರ್ಯಾರು ಬಿಜೆಪಿ ಸಮರ್ಥವಾಗಿ ಎದುರಿಸಿದ್ದಾರೆ, ಅವರಿಗೆಲ್ಲಾ ಇದೇ ಪರಿಸ್ಥಿತಿ ಬಂದಿದೆ. ಹಾಗಾಗಿ, ಅವರು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ನಾವೆಲ್ಲಾ ಗಟ್ಟಿಯಾಗಿ ಅವರ ಜೊತೆಗಿದ್ದೇವೆ. ಇಡೀ ಪಕ್ಷ ಅವರ ಜೊತೆ ಇರಬೇಕಾಗುತ್ತದೆ ಎಂದು ಹೇಳಿದರು.
ಮುಂದಿನ ಸಿಎಂ ನೀವೆ ಎಂಬ ವಿಚಾರಕ್ಕೆ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಇರುವಾಗ ಆ ಪ್ರಶ್ನೆ ಬರುವುದಿಲ್ಲ. ಒಂದೇ ಸ್ಥಾನ ಇರುವಾಗ ಎರಡು ಸ್ಥಾನ ಎಲ್ಲಿಂದ ತರೋದು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ. ನಾವೂ ಸಿಎಂ ಆಗುವ ಪ್ರಶ್ನೆಯೂ ಬರಲ್ಲ. ಅದೇ ರೀತಿ ಬೇರೆ ಯಾರೂ ಸಿಎಂ ಆಗುವ ಪ್ರಶ್ನೆ ಕೂಡ ಬರೋದಿಲ್ಲ ಎಂದು ಸತೀಶ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಅನುಮತಿ ನೀಡಿದ್ದರಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತಾ ಎಂಬ ವಿಚಾರಕ್ಕೆ ಏನೂ ಹಿನ್ನಡೆ ಆಗೋದಿಲ್ಲ ಎಂದ ಸತೀಶ ಜಾರಕಿಹೊಳಿ, ದೆಹಲಿ ಸಿಎಂ ಕೇಜ್ರಿವಾಲ್ ಆಯ್ತು ಈಗ ಸಿದ್ದರಾಮಯ್ಯ ವಿರುದ್ಧ ಪ್ರಕರಣ ಅದರ ಭಾಗವೇ ಎಂಬ ಪ್ರಶ್ನೆಗೆ ಖಂಡಿತವಾಗಿ ಇದು ಅದರ ಭಾಗವೇ. ಅದಕ್ಕಾಗಿ ನಾವು ರಾಜಕೀಯವಾಗಿ ಎದುರಿಸಬೇಕು. ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆಂದು ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಕಾನೂನು ಹೋರಾಟವಾಗಿ, ಸಾಬೀತಾದ ಮೇಲೆ ಅದು ಮುಂದಿನ ವಿಚಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಅಸಮಾಧಾನ ಹಿನ್ನೆಲೆ ಎಲ್ಲರೂ ಸಿಎಂ ಬೆಂಬಲಕ್ಕೆ ನಿಂತಿದ್ದಾರಾ ಎಂಬ ಪ್ರಶ್ನೆಗೆ ಆ ವಿಷಯ ಬಂದಾಗ ಜಗಳಾಟ ಬೇರೆ, ನಮ್ಮ ಲೀಡರ್ ಕಷ್ಟದಲ್ಲಿದ್ದಾಗ ಸ್ವಾಭಾವಿಕವಾಗಿ ನಾವೆಲ್ಲಾ ಅವರ ಬೆನ್ನಿಗೆ ಇರಬೇಕಾಗುತ್ತದೆ ಎಂದು ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಿಗೆ ಡಿ.ಕೆ.ಶಿವಕುಮಾರ ದಾಖಲೆ ನೀಡಿದ್ದಾರೆ ಎಂಬ ಆರೋಪಕ್ಕೆ ಅವರು ಯಾಕೆ ಕೊಡಬೇಕು. 10 ರೂ. ಕೊಟ್ಟರೆ ಸಾರ್ವಜನಿಕವಾಗಿ ಮಾಹಿತಿ ಹಕ್ಕಿನಡಿ ಅಧಿಕಾರಿಗಳು ಯಾರಿಗೆ ಬೇಕಾದರೂ ದಾಖಲೆ ಕೊಡುತ್ತಾರೆ. ಹಾಗಾಗಿ, ಡಿಕೆಶಿ ಕೊಟ್ಟಿದ್ದಾರೆ ಎಂದು ಹೇಳಲು ಬರೋದಿಲ್ಲ. ಈಗ ಸಿಎಂ ಮೇಲೆ ಆರೋಪ ಕೇಳಿ ಬಂದಿದ್ದು, ಸಮರ್ಥವಾಗಿ ಎದುರಿಸುತ್ತೇವೆ ಎಂದು ಸತೀಶ ಹೇಳಿದರು.
ಸಿಎಂ ಬದಲಾವಣೆ ಆದರೆ ನಾವು ಮಂತ್ರಿ ಆಗುತ್ತೇವೆ ಎಂದು ಕೆಲವರು ಕೋಟ್ ಹೋಲಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಈಗ ಆ ಪ್ರಶ್ನೆ ಉದ್ಭವಿಸುವುದಿಲ್ಲ ಮತ್ತು ಅದು ಅನವಶ್ಯಕ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ ಎಂದು ಪುನರುಚ್ಚರಿಸಿದರು.
ಕ್ಯಾಬಿನೇಟ್ ಮಿಟಿಂಗ್ ಕರೆದಿದ್ದಾರೆ. ಎಲ್ಲರಿಗೂ ಹೋಗಲು ಆಗಿಲ್ಲ. ರಾತ್ರಿ ಹೋಗಿ ನಾವು ಸಭೆಯಲ್ಲಿ ಭಾಗಿಯಾಗುತ್ತೇವೆ. ನೋಡೋಣ ಏನೆಲ್ಲಾ ಚರ್ಚೆ ಆಗುತ್ತದೆ ಎಂದು. ಇನ್ನು ಸಿಎಂ ವಿರುದ್ಧ ನೂರಕ್ಕೆ ನೂರು ಷಡ್ಯಂತ್ರ ಆಗಿದೆ ಎಂದು ಸತೀಶ ಜಾರಕಿಹೊಳಿ ಆರೋಪಿಸಿದರು.
ಜೊಲ್ಲೆ, ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ಕೊಡದ ಬಗ್ಗೆ ರಾಜ ಭವನದಲ್ಲಿ ಆ ಪ್ರಕರಣಗಳು ಬಾಕಿಯಿವೆ. ಇದನ್ನ ನಾವು ರಾಜಕೀಯವಾಗಿ ನೋಡಬೇಕು, ಹಾಗಾಗಿ, ಬಹಳ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..