ಕಾರ್ಗಿಲ್ ವಿಜಯೋತ್ಸವಕ್ಕಾಗಿ ಬೈಕ್ ರ್ಯಾಲಿ..

ಕಾರ್ಗಿಲ್ ವಿಜಯೋತ್ಸವಕ್ಕಾಗಿ ಬೈಕ್ ರ್ಯಾಲಿ..

ರ್ಯಾಲಿಗೆ ಶೋಭೆ ತಂದ ಮಾಜಿ ಸೈನಿಕರು..

ಬೆಳಗಾವಿ : ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದಿಂದ ಆಯೋಜಿಸಲಾದ ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವದ ಹಿನ್ನೆಲೆಯಲ್ಲಿ ನಗರದ ಕಿಲ್ಲಾ ಕೋಟೆಯಿಂದ ಬೈಕ್ ರ್ಯಾಲಿಗೆ ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾದ ಮುರುಗೇಂದ್ರಗೌಡ ಪಾಟೀಲ್ ಶನಿವಾರ ಚಾಲನೆ ನೀಡಿದರು.

ಕಿಲ್ಲಾ ಕೋಟೆಯಿಂದ ಆರಂಭವಾದ ಬೈಕ್ ರ್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ, ಕೇಂದ್ರ ಬಸ್ ನಿಲ್ದಾಣ, ಚನ್ನಮ್ಮ ವೃತ್ತದಿಂದ ಧರ್ಮನಾಥ ಭವನದವರೆಗೆ ಭಾರತ್ ಮಾತಾಕೀ ಜೈ ಎನ್ನುವ ಘೋಷ ವಾಕ್ಯದೊಂದಿಗೆ ಸಾಗಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರಿ, ಉಪಾಧ್ಯಕ್ಷರಾದ ಸಂಗಪ್ಪ ಮೇಟಿ, ರಮೇಶ ಚೌಗಲಾ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಕಡಸನ್ನವರ, ಸಂತೋಷ ಹಿರೇಮಠ, ಗಣಪತ ದೇಸಾಯಿ, ಸುರಜ ಪಾಟೀಲ, ಸುನೀತಾ ಪಟ್ಟಣಶೇಟ್ಟಿ, ಸಂತೋಷ ಮಠಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *