ಕಾಲ್ತುಳಿತ ದುರಂತದ ಬಗ್ಗೆ ಉಭಯ ಪಕ್ಷಗಳ ಆರೋಪ ಪ್ರತ್ಯಾರೋಪ ಸರಿಯಲ್ಲ..

ಕಾಲ್ತುಳಿತ ದುರಂತದ ಬಗ್ಗೆ ಉಭಯ ಪಕ್ಷಗಳ ಆರೋಪ ಪ್ರತ್ಯಾರೋಪ ಸರಿಯಲ್ಲ..

ಕ್ರಿಕೆಟ್ ಕಮಿಟಿ ಹಾಗೂ ಆಟಗಾರರು ಮತ್ತಷ್ಟು ಸಹಾಯಕ್ಕೆ ಮುಂದಾಗಬೇಕು.

ಆತುರದಲ್ಲಿ ಮಾಡಿದ ಎಡವಟ್ಟಿಗೆ ರಾಜ್ಯ ಸರ್ಕಾರವೇ ಹೊಣೆ..

ಬೆಳಗಾವಿ : ಆರ್ಸಿಬಿ ಗೆಲುವಿನ ವೇಳೆ ಕಾಲ್ತುಳಿತ ಸಂಭವಿಸಿದ್ದು, ಆಡಳಿತ ಮತ್ತು ವಿರೋಧ ಪಕ್ಷದವರು ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಬೇಕು. ಸಿಎಂ ಸಿದ್ಧರಾಮಯ್ಯ ಕ್ಷಮೆಯಾಚಿಸಿದರೇ ದೊಡ್ಡ ಅಪರಾಧವಾಗುದಿಲ್ಲ. ಕ್ರಿಕೆಟ್ ಆಟಗಾರರು ಪರಿಹಾರ ರೂಪದಲ್ಲಿ 1 ಕೋಟಿ ರೂಪಾಯಿ ನೀಡಬೇಕೆಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಗುರುವಾರ ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು ಆರ್,ಸಿ.ಬಿ ಗೆಲುವಿನ ವೇಳೆ ವಿಜಯೋತ್ಸವದ ವೇಳೆ ದುರಂತ ನಡೆದಿದ್ದು, ದುರದೃಷ್ಠಕರ. ಈ ಸಂದರ್ಭದಲ್ಲಿ ಉಭಯ ಪಕ್ಷಗಳ ಕೆಸರೆರಚಾಟ ಸರಿಯಲ್ಲ. ಕುಂಭಮೇಳದ ಘಟನೆಗೆ ಇದನ್ನು ಹೋಲಿಸುವುದು ಸರಿಯಲ್ಲ. ಪರಸ್ಪರ ಒಬ್ಬರಿಗೊಬ್ಬರ ಮೇಲೆ ಆರೋಪ ಪ್ರತ್ಯಾರೋಪಗಳನ್ನ ಮಾಡುವುದು ಶೋಭೆ ತರುವುದಲ್ಲ. ಸಿಎಂ ಸಿದ್ಧರಾಮಯ್ಯನವರು ವಿರೋಧ ಪಕ್ಷದವರು ಹೇಳಿರುವುದು ಮತ್ತು ಜನರು ಹೇಳಿರುವುದನ್ನು ಕೇಳಿ, ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದರೇ ದೊಡ್ಡ ಅಪರಾಧವಾಗುವುದಿಲ್ಲ.
ಉಭಯ ಪಕ್ಷದ ರಾಜಕಾರಣಿಗಳು ಈ ಸಂದರ್ಭದಲ್ಲಿ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದರು.

ಇನ್ನು ಕ್ರಿಕೆಟಿಗರು ಕೂಡ ಕೋಟ್ಯಾಂತರ ಹಣ ಸಂಪಾದಿಸುತ್ತಾರೆ. ಆದರೇ ಇಂತಹ ಘಟನೆ ನಡೆದಾಗ ತಡವಾಗಿ ಪ್ರತಿಕ್ರಿಯಿಸಿದ್ದು, ದುರದೃಷ್ಠಕರ. ನಿಮ್ಮ ಅಭಿಮಾನಿಗಳು ನಿಮಗಾಗಿ ಸಾವನ್ನಪ್ಪಿದ್ದಾರೆ. ಕ್ರಿಕೆಟ್ ಕಮೀಟಿಯವರು ಆಟಗಾರರು ಕೂಡ 1 ಕೋಟಿ ರೂಪಾಯಿ ಪರಿಹಾರ ನೀಡಿದರೇ ತಪ್ಪಲ್ಲ. ಕ್ರಿಕೆಟ್ ಹೆಸರಿನಲ್ಲಿ ಬೇಕಾದಷ್ಟು ಲೂಟಿ ಹೊಡೆದು ಅಭಿಮಾನಿಗಳಿಂದ ಬದುಕುತ್ತಿದ್ದು, ಇದಕ್ಕೆ ನ್ಯಾಯ ನೀಡಬೇಕೆಂದರು.

ಇನ್ನು ಆತುರದಲ್ಲಿ ಸರ್ಕಾರ ವಿಜಯೋತ್ಸವದ ವೇಳೆ ಜನರ ಗಮನ ಸೆಳೆಯಲು ಹೋಗಿ ಈ ದುರಂತಕ್ಕೆ ಕಾರಣವಾಗಿದ್ದು, ಇದಕ್ಕೆ ಸರ್ಕಾರವೇ ಹೊಣೆಯಾಗಿದೆ. ಇದರ ಜವಾಬ್ದಾರಿಯನ್ನು ಕಾಂಗ್ರೆಸ್ ಸರ್ಕಾರವೇ ತೆಗೆದುಕೊಳ್ಳಬೇಕೆಂದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..