ಸೇವೆಗೆ ಸಂದ ಸನ್ಮಾನ,,
ಕಿರಿಯ ವಯಸ್ಸಿನ ಹಿರಿಯ ಸಾಧನೆಗೆ ಅಭಿನಂದನೆಗಳ ಮಹಾಪೂರ…
ಬೆಳಗಾವಿ : ನಗರದ ಉದಯೋನ್ಮುಖ ಸಾಮಾಜಿಕ ಹೋರಾಟಗಾರ, ಯುವಕರ ಆದರ್ಶ, ಸದಾ ಸಮಾಜಮುಖಿ ಕಾರ್ಯಗಳಲ್ಲಿ ನಿರತನಾಗಿರುವ ಮಹೇಶ ಶಿಗೀಹಳ್ಳಿ ಎಂಬ ಯುವಪ್ರತಿಭೆಗೆ ಕಳೆದ ಕೆಲ ದಿನಗಳ ಹಿಂದೆ ರಾಜ್ಯ ರಾಜಧಾನಿಯಲ್ಲಿ ಬೆಳಗಾವಿಗರು ಹೆಮ್ಮೆ ಪಡುವಂತಹ ಅದ್ಬುತ ಪುರಸ್ಕಾರ ದೊರಕಿದೆ..
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದಿಂದ ಮಹಾ ಮಾನವತಾವಾದಿ ಡಾಕ್ಟರ ಬಾಬಾ ಸಾಹೇಬ ಅಂಬೇಡ್ಕರ್ ರವರ 132 ನೆ ಜನ್ಮ ದಿನಾಚರಣೆ ಸಮಾರಂಭ ಬೆಂಗಳೂರಿನ (ಟೌನ್ ಹಾಲ್) ನಲ್ಲಿ ನೆರವೇರಿಸಲಾಗಿತ್ತು..
ಈ ಸಂದರ್ಬದಲ್ಲಿ ರಾಜ್ಯಮಟ್ಟದ ಹೋರಾಟಗಾರ ಸಮಾಜಸೇವಕರಿಗೆ / ಸಾಧಕರಿಗೆ ಅಂಬೇಡ್ಕರ ಪ್ರಶಸ್ತಿ ವಿತರಿಸಿದರು, ಈ ವೇಳೆ ಬೆಳಗಾವಿಯ ಯುವ ಹೋರಾಟಗಾರ ಸಮಾಜ ಸೇವಕರಾದ ನಾಲ್ಕು ಸಂಘಟನೆಯಲ್ಲಿ ಸಕ್ರಿಯವಾಗಿ ನೇತೃತ್ವ ವಹಿಸಿಕೊಂಡು, ಹೋರಾಟ, ಸಮಾಜ ಸೇವೆ ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹೇಶ ಸಿದ್ರಾಯಿ ಶಿಗೀಹಳ್ಳಿ ಇವರ ಸೇವೆಯನ್ನು ಗುರುತಿಸಿ ಇವರಿಗೆ ಅಂಬೇಡ್ಕರ ಪ್ರಶಸ್ತಿ ವಿತರಿಸಿ ಸತ್ಕರಿಸಲಾಯಿತು …
ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು,ರಾಜ್ಯದ ಎಲ್ಲಾ ಗಣ್ಯಾತಿಗಣ್ಯರು, ಸ್ನೇಹಿತರು, ಹಿತೈಷಿಗಳು ಉಪಸ್ಥಿತರಿದ್ದು ಸಾಧಕರಿಗೆ ಅಭಿನಂದಿಸಿದರು…
ವರದಿ ಪ್ರಕಾಶ ಕುರಗುಂದ..
