ಕುಂದಾನಗರಿಯಲ್ಲಿ ಕೌತುಕದ ಕಥಾಹಂದರವಿರುವ “ಕಲಿ” ಚಿತ್ರದ ಚಿತ್ರೀಕರಣಕ್ಕೆ ಚಾಲನೆ..

ಬೆಳಗಾವಿಯ ಯುವಪ್ರತಿಭೆಗಳ ಕನ್ನಡ ಚಿತ್ರಕ್ಕೆ ಮುಹೂರ್ತ..

ಕುಂದಾನಗರಿಯಲ್ಲಿ ಕೌತುಕದ ಕಥಾಹಂದರವಿರುವ “ಕಲಿ” ಚಿತ್ರದ ಚಿತ್ರೀಕರಣಕ್ಕೆ ಚಾಲನೆ..

ಯಂಗ್ ಏನರ್ಜೇಟಿಕ್ ಟೀಮ್ ಜೊತೆ, ಯಂಗ್ ಡೈರೆಕ್ಟರ್ ಗಣೇಶ್ ದೆಗಾನಟ್ಟಿಯ ಲೋಡೆಡ್ ಚಿತ್ರ..

ಬೆಳಗಾವಿ : ರವಿವಾರ ದಿನಾಂಕ 18/2/2024ರಂದು ನಗರದ ಸಮೀಪ ಇರುವ ಕಣಬರಗಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ, ಬೆಳಗಾವಿಯ ಯುವ ಪ್ರತಿಭೆಗಳ ಅಪ್ಪಟ ಕನ್ನಡ ಚಿತ್ರದ ಮಹೂರ್ತ ನೆರವೇರಿದ್ದು, ಭಗವಂತನ ಸನ್ನಿಧಿಯಲ್ಲಿ, ಶುಭ ಸಮಯದಲ್ಲಿ ಚಿತ್ರದ ಮಹೂರ್ತ ಜರುಗಿದ್ದು ಚಿತ್ರಕ್ಕೆ ಶುಭ ಸೂಚಕವಾಗಿದೆ..

ಗಣೇಶ ದೆಗಾನಟ್ಟಿ ಎಂಬ ಬೆಳಗಾವಿಯ ಯುವ ಪ್ರತಿಭೆ ನಿರ್ದೇಶನ ಮಾಡುತ್ತಿರುವ “ಕಲಿ” ಎಂಬ ಕನ್ನಡ ಚಿತ್ರದ ಕಥಾಹಂದರ ಕುತೂಹಲದಿಂದ ಕೂಡಿದ್ದು, ಪ್ರಚಲಿತ ಘಟನೆಗಳ ಆಧಾರವಾಗಿಟ್ಟುಕೊಂಡು, ಯುವಶಕ್ತಿಯ, ಚಾಣಾಕ್ಷತನ ಹಾಗೂ ಸಾಮಾಜಿಕ ಸಂದೇಶದ ವೈಶಿಷ್ಟ್ಯಪೂರ್ಣ ಕಥೆ ಈ ಕಲಿ ಚಿತ್ರದ್ದಾಗಿದೆ ಎಂಬ ಮಾಹಿತಿ ನೀಡಿದ್ದಾರೆ..

ಇಲ್ಲಿ ಕಥೆಯೇ ಹೀರೋ, ಕಂಟೆಂಟ್ ಮತ್ತು ಡೈಲಾಗ್ ಮೇಲೆ ತುಂಬಾ ನಂಬಿಕೆ ಇದ್ದು, ಯುವಸಮೂಹಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಲಿದ್ದು, ಹೊಸ ವಿಷಯಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ..

ಶಿವಂ ಫಿಲ್ಮ್ಸ್ ಬ್ಯಾನರಿನಲ್ಲಿ ತಯಾರಾಗುತ್ತಿರುವ ಈ “ಕಲಿ” ಚಿತ್ರವನ್ನು ಡಿಎಸ್ಎಸ್ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ತಳವಾರ ಅವರು ನಿರ್ಮಾಣ ಮಾಡುತ್ತಿದ್ದಾರೆ, ಅದೇರೀತಿ ಈ “ಕಲಿ” ಚಿತ್ರದ ಮುಖ್ಯಪಾತ್ರದಲ್ಲಿ ಅಭಿ ಎನ್ನುವ ಯುವಕ ನಟಿಸುತ್ತಿದ್ದು, ಉಳಿದ ಎಲ್ಲಾ ಕಲಾವಿದರೂ ಯುವಕರೇ, ಹೊಸಬರೇ ಆಗಿದ್ದು ತುಂಬಾ ಉತ್ಸಾಹದಿಂದ, ಉತ್ತಮ ಚಿತ್ರ ಮುಡಿಬರುವದೆಂಬ ನಿರೀಕ್ಷೆಯಲ್ಲಿ ಇಡೀ ಚಿತ್ರತಂಡ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದು, ನಮ್ಮ ಕಡೆಯಿಂದಲೂ ಚಿತ್ರತಂಡಕ್ಕೆ ಶುಭ ಹಾರೈಕೆ..

ವರದಿ ಪ್ರಕಾಶ ಕುರಗುಂದ..