ಕುಂಬಾರರಿಗೆ ಮಡಿಕೆ ತಯಾರಿಕಾ ವಿದ್ಯುತ್ ಚಾಲಿತ ಯಂತ್ರಗಳ ವಿತರಣೆ..
ಕೇಂದ್ರೀಯ ಕುಂಬಾರಿಕಾ ತರಬೇತಿ ಕೇಂದ್ರದಿಂದ 50 ಯಂತ್ರಗಳ ವಿತರಣೆ..
ಬೆಳಗಾವಿ : ಜಿಲ್ಲಾ ಖಾದಿ ಗ್ರಾಮದ್ಯೋಗ ಸಹಯೋಗದಡಿ ದಿನಾಂಕ 5/01/2025 ರಂದು ಖಾನಾಪುರದ ಶಹನಾಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಬಾರ ಸಮಾಜದ ಕುಲಕಸಬು ಮಡಿಕೆ ತಯಾರಿಕೆಯ ವಿದ್ಯುತ್ ಚಾಲಿತ ಯಂತ್ರ(ತಿಗರಿ )ಗಳನ್ನು ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ವಿತರಣೆ ಮಾಡಲಾಗಿದೆ..

ಶಿಗ್ಗಾವ್ – ಸವಣೂರು ಮತ್ತು ಬೆಳಗಾವಿ ಜಿಲ್ಲಾ ಕುಂಬಾರರಿಗೆ ಸುಮಾರು 50 ತಿಗರಿಗಳನ್ನು ಕೇಂದ್ರೀಯ ಕುಂಬಾರಿಕಾ ತರಬೇತಿ ಕೇಂದ್ರ ಖಾನಾಪುರ ಘಟಕ ವತಿಯಿಂದ ವಿತರಿಸಲಾಗಿದೆ,
ಈ ಸಂದರ್ಭದಲ್ಲಿ ಖಾದಿ ಗ್ರಾಮೋದ್ಯೋಗ ನಿಗಮದ ರಾಷ್ಟ್ರೀಯ ಅಧ್ಯಕ್ಷರಾದ ಮನೋಜ್ ಕುಮಾರ್ ಖಾನಾಪುರ ಶಾಸಕರಾದ ವಿಠ್ಠಲ ಹಲಗೆಕರ ಕರ್ನಾಟಕ ಕುಂಬಾರರ ಯುವ ಸೈನ್ಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಕುಂಬಾರ ಉಸ್ತುವಾರಿಗಳಾದ ರಮೇಶ ಕುಂಬಾರ ಮತ್ತು ಸಮಾಜದ ಮುಖಂಡರು ಫಲಾನುಭವಿಗಳು ಉಪಸ್ಥಿತರಿದ್ದರು..