ಬೆಂಗಳೂರು : ಶನಿವಾರ ದಿನಾಂಕ 16/11/2024ರಂದು ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಶಿವರಾಜ ತಂಗಡಗಿ ಅವರಿಗೆ ರಾಜ್ಯ ಕುಂಬಾರ ಸಮುದಾಯದ ಕೆಲ ಬೇಡಿಕೆಗಳ ಈಡೇರಿಕೆಗಾಗಿ ಮನವಿ ನೀಡಲಾಗಿದೆ..

ಬೆಂಗಳೂರಿನ ಸಚಿವರ ಗೃಹ ಕಛೇರಿಯಲ್ಲಿ ಸಚಿವರನ್ನು ಬೇಟಿ ಮಾಡಿದ ಕರ್ನಾಟಕ ಕುಂಬಾರರ ಯುವಸೈನ್ಯ(ರಿ) ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ನಿಂಗಪ್ಪ ಕುಂಬಾರ ಅವರು, ತಕ್ಷಣವೇ ಕುಂಬಾರ ನಿಗಮ ಕಾರ್ಯಾರಂಭ ಆಗಬೇಕು ಅದೇರೀತಿ ಅನುದಾನ ಕೂಡಾ ಬಿಡುಗಡೆ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..