ಕುತೂಹಲ ಮೂಡಿಸಿದ ಬಿಜೆಪಿ ವರಿಷ್ಠರ ಭೇಟಿ..!!!

ಕುತೂಹಲ ಮೂಡಿಸಿದ ಬಿಜೆಪಿ ವರಿಷ್ಠರ ಭೇಟಿ..

ಬೆಳಗಾವಿ : ಬೆಳಗಾವಿಯ ಮಾಜಿ ಸಚಿವರು, ಗೋಕಾಕಿನ ಶಾಸಕರು, ರೆಬೆಲ್ ರಾಜಕಾರಣಿ ರಮೇಶ ಜಾರಕಿಹೊಳಿ ಅವರು ಯಾವತ್ತೂ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವರಲ್ಲ, ಅಧಿಕಾರ ಇದ್ದರೂ, ಇಲ್ಲದಿದ್ದರೂ ಜನಸೇವೆ ಮಾಡುತ್ತಾ, ಪಕ್ಷ ಸಂಘಟನೆಗೆ ಒತ್ತು ನೀಡುತ್ತಾ, ಮತ್ತೆ ಜಯಿಸಿ, ಶತ್ರುಗಳನ್ನು ಶಮನ ಮಾಡುವ ಗುಣದವರು..

ಈ ಹಿಂದೆ ಕೇಂದ್ರದ ಹಲವಾರು ಬಿಜೆಪಿಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ರಮೇಶ ಜಾರಕಿಹೊಳಿ ಅವರು, ಈಗ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ಅವರನ್ನು ಭೇಟಿ ಮಾಡಿ, ಕೆಲ ವಿಷಯಗಳನ್ನು ಚರ್ಚೆ ಮಾಡಿರಬಹುದು ಎಂಬ ಮಾಹಿತಿ ಇದೆ..

ಜಿಲ್ಲೆಯ ಬಿಜೆಪಿ ವಲಯದಲ್ಲಿ ಕೆಲ ಅಸಮಾಧಾನ ಇದ್ದು, ಕೆಲವರು ವೈಯಕ್ತಿಕ ಹಿತಾಸಕ್ತಿಯಿಂದ, ಬೇರೆಯವರ ಜೊತೆ ಕೈ ಜೋಡಿಸಿ, ಪಕ್ಷಕ್ಕೆ ಅನ್ಯಾಯ ಮಾಡುತ್ತಿದ್ದು, ಅದನ್ನು ರಮೇಶ ಜಾರಕಿಹೊಳಿ ಅವರು ಮೊದಲಿನಿಂದಲೂ ವಿರೋಧಿಸುತ್ತಿದ್ದರು, ಅದರ ಬಗ್ಗೆ ವರಿಷ್ಠರ ಗಮನ ಸೆಳೆದರಾ?? ಜಿಲ್ಲೆಯಲ್ಲಿ ಪಕ್ಷಕ್ಕಾಗಿ, ತಮ್ಮ ಸ್ವಾರ್ಥ ತೊರೆದು, ಎಲ್ಲರೂ ಒಟ್ಟಾಗಿ ಹೋಗಬೇಕು ಎಂಬ ವಿಷಯದ ಕುರಿತಾಗಿ ವರಿಷ್ಠರಿಗೆ ಮನವಿ ಮಾಡಿಕೊಂಡಿರಬಹುದಾ?? ಎಂಬುವದು ನಿಗೂಢವಾಗಿದೆ..

ಪಕ್ಷದ ಪ್ರಭಾವಿ ನಾಯಕರಾದ ಬಿ ಎಲ್ ಸಂತೋಷ ಅವರಿಗೆ ಜಿಲ್ಲೆಯಲ್ಲಿ ಇರುವಂತ ಪಕ್ಷದ ಸ್ಥಿತಿಗತಿಗಳ ಬಗ್ಗೆ, ಪಕ್ಷ ಸಂಘಟನೆಯ ಬಗ್ಗೆ, ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂಬ ವಿಚಾರದ ಬಗ್ಗೆ ಚರ್ಚೆ ಮಾಡಿದರಾ?? ಎಂಬ ವಿಷಯಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ..

ಹಠಮಾರಿ ಗುಣದ ಬೆಳಗಾವಿಯ ಸಾಹುಕಾರ, ತಮ್ಮ ಪ್ರಾಮಾಣಿಕ ಹಾಗೂ ಚಾಣಾಕ್ಷತನದ ರಾಜಕೀಯ ಆಟದಿಂದ ವಿರೋಧಿಗಳಿಗೆ ನಿದ್ದೆಗೆಡಿಸಿದ್ದಂತೂ ಸತ್ಯ, ಎಲ್ಲರೂ ನಮ್ಮವರೇ ಎಂದು ನಂಬುವ ಹಾಗೂ ನಂಬಿಕೆಗೆ ಮೋಸ ಮಾಡಿದ ದುಷ್ಟರಿಗೆ ಹಾಗೂ ಪಕ್ಷಕ್ಕೆ ದಕ್ಕೆ ತರುವ ಭ್ರಷ್ಟರಿಗೆ, ರಣಬೇಟೆಗಾರನಾಗಿ ಬುದ್ದಿಕಲಿಸುವ ಚಾಣಾಕ್ಷ ರಾಜಕಾರಣಿ..

ವರದಿ ಪ್ರಕಾಶ ಕುರಗುಂದ…