ಕುಮಾರಸ್ವಾಮಿ ಹಗಲುಗನಸು ಕಾಣುವುದನ್ನು ಬಿಡಲಿ..
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿ…
ಸುವರ್ಣ ಸೌಧ ಬೆಳಗಾವಿ: ಇತ್ತೀಚೆಗೆ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನ ಆದ ನಂತರ ಕುಮಾರಸ್ವಾಮಿಯವರು ಕಟ್ಟಾ ಬಿಜೆಪಿಯೇ ಆಗಿದ್ದಾರೆ, ಅವರ ಹಗಲುಗನಸು ಹೇಳಿಕೆಗಳು ಪ್ರತಿದಿನ ಸಾಮಾನ್ಯವಾಗಿವೆ, ಆದರೆ ಅವು ಎಂದಿಗೂ ಈಡೇರುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ..
ಬಿಜೆಪಿ ವಿಲೀನ ಆದ ನಂತರ ಅವರ ಚಟುವಟಿಕೆ ಬೇರೆಯಾಗಿದ್ದು, ಹೇಗಾದರೂ ಮಾಡಿ ಈ ಸರ್ಕಾರವನ್ನು ಪತನಗೊಳಿಸುವ ಹೇಳಿಕೆಯನ್ನು ನೀಡುತ್ತಿದ್ದು, ಅದಕ್ಕೆ ಯಾವುದೇ ಆಧಾರಗಳಿರುವದಿಲ್ಲ,
ಕುಮಾರಸ್ವಾಮಿ ಅದೇನೇ ಮಾಡಿದರು ಅವರ ಆಸೆ ಈಡೇರುವದಿಲ್ಲ..

ಅವರು ಐವತ್ತು ಶಾಸಕರೊಂದಿಗೆ ಮಾತನಾಡಿಲ್ಲ, ಕೇವಲ ಐದು ಜನರೊಂದಿಗೆ ಮಾತನಾಡಿದ್ದಾರೆ, 136 ಶಾಸಕರು ಆಯ್ಕೆಯಾಗಿ ಬಂದ ನಮ್ಮ ಕಾಂಗ್ರೆಸ್ ಸರ್ಕಾರ ಸುಭದ್ರ ಸರ್ಕಾರ, ಕುಮಾರಸ್ವಾಮಿ ಸರ್ಕಾರ ಬೀಳಿಸುವ ಹಗಲು ಕನಸು ಕಾಣುತ್ತಿದ್ದಾರೆ, ಮೊದಲುಅದನ್ನು ಬಿಡಲಿ ಎಂದರು..
ವರದಿ ಪ್ರಕಾಶ ಕುರಗುಂದ..