ಕೂಸಿನ ಮನೆ ಸೌಲಭ್ಯದಿಂದ ಮಹಿಳಾ ಕೂಲಿಕಾರರು ಹೆಚ್ಚಳ..
ಬೆಳಗಾವಿ : ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಕೂಲಿಕಾರರ ಪ್ರಮಾಣ ಹೆಚ್ಚಿಸುವಲ್ಲಿ ಕೂಸಿನ ಮನೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ಹೆಳಿದರು.
ನಗರದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಪ ಗವರ್ನಮೆಂಟ್ ನಲ್ಲಿ ಗುರುವಾರ ನವೆಂಬರ್ 23 ರಂದು ಜಿಲ್ಲಾ ಪಂಚಾಯತ ಹಾಗೂ ಎಸ್.ಐ.ಆರ್.ಡಿ ವತಿಯಿಂದ ಆಯೋಜಿಸಿದ್ದ
ಕೂಸಿನ ಮನೆಯ ಕೇರ್ ಟೆಕರ್ಸಗಳಿಗೆ ತರಭೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಮಹಿಳಾ ಕೂಲಿ ಕಾರ್ಮಿಕರರು ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಅವರ ಮಕ್ಕಳ ಪಾಲನೆ-ಫೋಶನೆಗೆ ಕೂಸಿನ ಮನೆ ಬಹಳ ಅನುಕೂಲವಾಗಲಿದೆ, ಕೂಸಿನ ಮೆನೆಯ ಸದುಪಯೋಗವನ್ನು ನರೇಗಾ ಕೂಲಿ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ ಕಾರ್ಯಕ್ರಮಗಳ ಸಂಯೋಜಕರಾದ ಬಸವರಾಜ ಎನ್, ಅವರು ತರಭೇತಿ ಕುರಿತು ವಿವರಿಸಿದರು, ಎ.ಎನ್.ಎಸ್,ಐ,ಆರ್,ಡಿ ಮೈಸೂರ ನೊಡಲ್ ಡಿ.ಟಿ.ಸಿ. ಸಂಜುವ ತಳವಾರ ಅವರು ನಿರೂಪಿಸಿ ಒಂದಿಸಿದರು.
ಲೋಕಸಭಾ ಚುನಾವಣೆಯ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗಳಾದ ಶುಭಂ ಶುಕ್ಲಾ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಕುಮಾರಿ ಸವಿತಾ ಎಂ., ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ್ ಗೋಡೆಕರ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ರಮೇಶ ಮಾದರ ಸೇರಿದಂತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ಮತ್ತು ತರಭೇರಿದಾರರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಕುರಗುಂದ..