ಕೆಎಎಸ್ ಅಧಿಕಾರಿಯ ಕನ್ನಡ ಕಾಳಜಿಗೆ ಸಂದ ಗೌರವ..

ಕೆಎಎಸ್ ಅಧಿಕಾರಿಯ ಕನ್ನಡ ಕಾಳಜಿಗೆ ಸಂದ ಗೌರವ..

ಪರಶುರಾಮ ದುಡಗುಂಟಿ ಅವರ ಭಾಷಾಪ್ರೇಮ ಸರ್ವರಿಗೂ ಅನುಕರಣೀಯ..

ಬಸವರಾಜ ಕಡೆಮನಿ, ಶಿಕ್ಷಣ ಸಂಸ್ಥೆಯ ನಿರ್ದೇಶಕರು..

ಬೆಳಗಾವಿ : ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪರಶುರಾಮ ದುಡಗುಂಟಿ ಅವರ ಕನ್ನಡ ಭಾಷೆಯ ಕಾಳಜಿ, ಅವರು ಅದನ್ನು ಉಳಿಸಿ ಬೆಳೆಸುತ್ತಿರುವ ಕಾರ್ಯಗಳ ಕುರಿತಾಗಿ ಕೆಲ ದಿನಗಳ ಹಿಂದೆ ನಮ್ಮ ಸಮಾಜಮುಖಿ ವೆಬ್ ನ್ಯೂಸಲ್ಲಿ ವರದಿ ಪ್ರಕಟ ಮಾಡಿದ್ದು, ಅಧಿಕಾರಿಯ ಕನ್ನಡತನದ ಆಸಕ್ತಿಗೆ ಎಲ್ಲೆಡೆಯಿಂದ ಉತ್ತಮ ಪ್ರಸಂಶೆಗಳು ವ್ಯಕ್ತವಾಗಿದ್ದವು..

ಅದೇ ರೀತಿ ಗುರುವಾರ 26/12/2024ರಂದು, ಉಳವಿ ಚೆನ್ನಬಸವೇಶ್ವರ ಸಲಹಾ ಸಮಿತಿಯ ಸದಸ್ಯರು ಹಾಗೂ ಉಳವಿ ಚನ್ನಬಸವೇಶ್ವರ ಪ್ರೌಢ ಶಾಲೆಯ ನಿರ್ದೇಶಕರು ಆಗಿರುವ ಹಿರೇಬಾಗೆವಾಡಿಯ ಬಸವರಾಜ ಕಡೇಮನಿ ಹಾಗೂ ಅವರ ತಂಡದವರು ಅಧಿಕಾರಿ ಪರಶುರಾಮ ದುಡಗುಂಟಿ ಅವರಿಗೆ ಗೌರವೀಯ ಸನ್ಮಾನವನ್ನು ನೆರವೇರಿಸಿದ್ದಾರೆ..

ಈ ಬಗ್ಗೆ ಶಿಕ್ಷಣ ಪೋಷಕ ಬಸವರಾಜ ಕಡೇಮನಿ ಅವರು ಮಾತನಾಡಿ, ಕನ್ನಡ ನಾಡಲ್ಲಿ ಹುಟ್ಟಿ, ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವದು ಪ್ರತಿ ಕನ್ನಡಿಗನ ಕರ್ತವ್ಯವಾಗಿದ್ದು, ಬೆಳಗಾವಿಯಂತಹ ಗಡಿ ಭಾಗದಲ್ಲಿ ಅದರ ಅವಶ್ಯಕತೆ ತುಂಬಾ ಇದ್ದು, ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಮೊದಲು ತೊದಲು ನುಡಿಯಲ್ಲಿ ಆಡಿದ ಮಾತೃಭಾಷೆಯನ್ನು ಪ್ರೀತಿಸಿ, ಗೌರವಿಸಿ, ಬೆಳಸುವ ಇಂತಹ ಅಧಿಕಾರಿಗಳು ನಿಜಕ್ಕೂ ನಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ.