ಕೆಪಿಸಿಸಿ ಎಸ್ಸಿ ವಿಭಾಗಕ್ಕೆ ರಾಜ್ಯ ಸಂಚಾಲಕರಾಗಿ ಗಜು ದರನಾಯ್ಕ ನೇಮಕ..!!!
ಬೆಳಗಾವಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ, ಬೆಳಗಾವಿಯ ಸಮಾಜಸೇವಕರಾದ, ಗಜು ವಾಯ್ ದರನಾಯಿಕ ಅವರು ನೇಮಕಗೊಂಡಿದ್ದು, ಗಡಿ ಭಾಗದ ಶೋಷಿತ ಸಮುದಾಯಕ್ಕೆ ಸಂತಸದ ವಿಷಯವಾಗಿದೆ..
ಈ ನೇಮಕವನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಖಿಲ್ ಭಾರತ ಎಸ್ಸಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಶ್ ಅಲೋತಿಯ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಅನುಮೋದನೆಯೊಂದಿಗೆ, ರಾಜ್ಯ ಪರಿಶಿಷ್ಟ ವಿಭಾಗದ ಅಧ್ಯಕ್ಷ ಆರ್ ಧರ್ಮಸೇನ ಅವರು ನಿಯುಕ್ತಿ ಗೊಳಿಸಿ, ಆದೇಶ ಪತ್ರ ನೀಡಿದ್ದಾರೆ..
ಮಹನೀಯರ ನೇಮಕಕ್ಕೆ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ಶಾಸಕರಾದ ರಾಜು ಸೇಠ ಅವರು, ಅಬಕಾರಿ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅವರು ಗಜು ದರನಾಯ್ಕ ಅವರಿಗೆ ಶುಭ ಹಾರೈಸಿ, ಸಮುದಾಯದ ಅಭಿವೃದ್ದಿ ಹಾಗೂ ಪಕ್ಷ ಸಂಘಟನೆ ಮಾಡಲು ಸಲಹೆ ಸೂಚನೆ ನೀಡಿದ್ದಾರೆ..
ವರದಿ ಪ್ರಕಾಶ ಕುರಗುಂದ..