ಕೊಟ್ಟ ಕುದುರೆಯನ್ನೇರದವನು ವೀರನೂ ಅಲ್ಲಾ, ಶೂರನೂ ಅಲ್ಲಾ ಎಂಬಂತೆ,,,
ನೀಡಿದ ಜವಾಬ್ದಾರಿ ನಿರ್ವಹಿಸದವರು ಸಮರ್ಥ ಅಧಿಕಾರಿಯೇ??
ತಾ ಪಂ ಅಧಿಕಾರಿಯಾಗಿ ತನಿಖಾ ತಂಡದಿಂದ ಹೊರಬರಲು ಕಾರಣವೇನು?
15 ದಿನದ ಒಳಗಾಗಿ ವರದಿ ನೀಡುತ್ತೇವೆ ಎಂದ ಕಡೆಮನಿ 45 ದಿನ ಆದರೂ ನೀಡಿಲ್ಲವೇಕೆ?
ಸಹಾಯಕ ನಿರ್ದೇಶಕರೆ ಅಸಹಾಯಕರಾಗಿದ್ದಾರೆಯೇ?
ಬೆಳಗಾವಿ : ಒಂದು ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಇರುವ ಒಬ್ಬ ಅಧಿಕಾರಿ ತನ್ನ ಮೇಲಿನ ಅಧಿಕಾರಿ ನೀಡಿದ ಒಂದು ಸಣ್ಣ ಜವಾಬ್ದಾರಿ ನಿರ್ವಹಿಸಲು ಆಗದೇ ಅದರಿಂದ ಜಾರಿಕೊಂಡರೆ ಅಂತಹ ಅಧಿಕಾರಿ ಹೇಗೆ ಆಡಳಿತ ಸುಧಾರಣೆ ಮಾಡಿ, ಸಾರ್ವಜನಿಕರ ಕೆಲಸ ಕಾರ್ಯ ಮಾಡುವರು?
ಬೆಳಗಾವಿ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ತಿಂಗಳ ಹಿಂದೆ ಮೂರು ಪಿಡಿಓಗಳ ಮೇಲೆ ಭ್ರಷ್ಟಚಾರ ಆರೋಪ ಆಗಿದ್ದು, ಅದಕ್ಕಾಗಿ ಸ್ಥಳೀಯ ಅಂಬೇಡ್ಕರ ಶಕ್ತಿ ಸಂಘಟನೆ ತಾಲೂಕು ಪಂಚಾಯತಿ ಕಚೇರಿ ಎದುರಿಗೆ ತಮಟೆ ಬಾರಿಸುವ ಧರಣಿ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಪ್ರತಿಭಟನೆ ಮಾಡಿದ್ದರು.
ಪ್ರತಿಭಟನೆಗೆ ಸ್ಪಂದನೆ ನೀಡಿದ ತಾಲೂಕು ಪಂಚಾಯತ ಇಓ ಅವರು, ಭ್ರಷ್ಟಾಚಾರದ ಆರೋಪದ ಕುರಿತಾಗಿ 15 ದಿನಗಳ ಒಳಗಾಗಿ ಸೂಕ್ತ ತನಿಖೆ ಮಾಡಿ, ವರದಿ ನೀಡಬೇಕೆಂದು ಐದು ಸದಸ್ಯರ ತಂಡವನ್ನು ರಚಿಸಿ ಆದೇಶಕ್ಕೆ ಸಹಿ ಮಾಡಿದ್ದರು, ತಂಡ ರಚನೆ ಮಾಡಿ ಅರ್ಧ ಗಂಟೆಯಲ್ಲೇ ತನಿಖಾ ತಂಡದಲ್ಲಿರುವ ಪ್ರಮುಖ ಅಧಿಕಾರಿಯಾದ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಕಡೆಮನಿ ಅವರ ಹೆಸರನ್ನು ತಗೆದು ಹಾಕಲಾಗಿತ್ತು.
ಆಮೇಲೆ ಯಾಕೆ ತಮ್ಮ ಹೆಸರನ್ನು ತನಿಖಾ ತಂಡದಿಂದ ತೆಗೆಯಲಾಗಿದೆ ಎಂದು ಕೇಳಿದ್ದಕ್ಕೆ, ಮಾರ್ಚ ತಿಂಗಳಲ್ಲಿ ಕಚೇರಿಯಲ್ಲಿ ತುಂಬಾ ಕೆಲಸಗಳಿವೆ, ಹಲವಾರು ಬಿಲ್ಲುಗಳು ಪೆಂಡಿಂಗ ಇವೆ, ಅವೆಲ್ಲವನ್ನೂ ಕ್ಲಿಯರ್ ಮಾಡ್ತಾ ಇದೀವಿ, ಜೊತೆಗೆ ನನಗೆ ಇನ್ನು ಬೇರೆ ಹುದ್ದೆಗಳ ಜವಾಬ್ದಾರಿ ಇದೆ ಎಂದು ಕಾರಣ ಹೇಳುತ್ತಿರುವ ಇವರಿಗೆ ಬಿಲಗಳನ್ನು ಪಾಸ್ ಮಾಡಿಕೊಂಡು ಅನುದಾನ ತಗೆಯುವದೊಂದೇ ಮುಖ್ಯ ಕಾರ್ಯ ಆಗಿದ್ದು,
ತಮ್ಮ ಕಚೇರಿಯ ಅಧೀನದಲ್ಲಿ ಲಕ್ಷಗಟ್ಟಲೆ ಭ್ರಷ್ಟಾಚಾರದ ಆರೋಪ ಇರುವ ಪ್ರಕರಣಗಳನ್ನು ಒಬ್ಬ ಜವಾಬ್ದಾರಿ ಅಧಿಕಾರಿಯಾಗಿ, ಪರಿಶೀಲನೆ ಮಾಡಿ, ಕ್ರಮ ಜರುಗಿಸಲು ಇವರಿಗೆ ಸಮಯವಿಲ್ಲಾ, ಮತ್ತು ಅದು ಪ್ರಮುಖ ಕೆಲಸ ಕೂಡಾ ಅಲ್ಲಾ ಎಂಬ ದಾಟೀಯಲ್ಲಿ ಮಾತನಾಡಿದ್ದಾರೆ.
ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಹೊತ್ತಿರುವ ಪಿಡಿಒಗಳ ಬಗ್ಗೆ ಸರಿಯಾದ ತನಿಖೆ ಮಾಡಿ, ವರದಿ ಪಡೆಯುವ, ವರದಿ ಆಧರಿಸಿ ಕ್ರಮ ಜರುಗಿಸುವ ಮಹತ್ವದ ಕರ್ತವ್ಯ ಈ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ ಕಡೆಮನಿ ಅವರ ಕರ್ತವ್ಯ, ಅದರ ಬಗ್ಗೆ ಇವರಿಗೆ ಚಿಂತೆ ಇಲ್ಲಾ ಎಂದರೇ ಇವರು ಸಮರ್ಥ, ಪ್ರಾಮಾಣಿಕ ಅಧಿಕಾರಿಯಾ? ಎಂಬ ಸಂಶಯ ಮೂಡುತ್ತಿದೆ.
ಹಳೆಯ ತಾಪಂ ಅಧಿಕಾರಿ ಹೆಡಗೆ ಅವರ ಆದೇಶದ ಪ್ರಕಾರ 15 ದಿನಗಳ ಒಳಗಾಗಿ ತನಿಖಾ ವರದಿ ನೀಡುವ ಗಡುವಿದ್ದು, ಸ್ವತಃ ತಾಪಂ ಸಹಾಯಕ ನಿರ್ದೇಶಕರಾದ ಕಡೆಮನಿ ಅವರೇ 15 ದಿನಗಳ ಒಳಗಾಗಿ ವರದಿ ನೀಡುತ್ತೇವೆ ಎಂದು ಧೈರ್ಯವಾಗಿ ಹೇಳಿದ್ದರು, ಆದರೆ ಈಗ ಸುಮಾರು 45 ದಿನಗಳು ಕಳೆದರೂ ಇನ್ನು ವರದಿ ನೀಡಿಲ್ಲ ಎಂದರೆ, ಇದು ಭ್ರಷ್ಟಚಾರ ಆರೋಪ ಹೊತ್ತ ಪಿಡಿಒಗಳನ್ನು ರಕ್ಷಣೆ ಮಾಡುವ ತಂತ್ರವಿರಬಹುದೇ ಎಂಬ ಸಂಶಯ ಮೂಡುತ್ತಿದೆ.
ಭ್ರಷ್ಟಚಾರದ ಆರೋಪದ ವಿಷಯದ ಸಲುವಾಗಿ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಪಡೆದುಕೊಂಡು, ಸಂಘಟನೆಗಳಿಂದ ಕಚೇರಿಯ ಮುಂದೆ ಹೋರಾಟ ಮಾಡಲಾಗಿ, ಮಾದ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿ, ಕೊನೆಗೆ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ತನಿಖಾ ತಂಡ ರಚಿಸಿ, ಲಿಖಿತ ರೂಪದಲ್ಲಿ ಆದೇಶ ಮಾಡಲಾಗಿದ್ದರೂ ಕೂಡಾ, ಸಂಬಂಧಪಟ್ಟ ತಾಲೂಕು ಪಂಚಾಯತಿ ಅಧಿಕಾರಿಗಳು ಇಷ್ಟೊಂದು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದರೆ ಬೆಳಗಾವಿಯ ತಾಲೂಕು ಪಂಚಾಯತಿ ಆಡಳಿತ ಎಲ್ಲಿಗೆ ಬಂದಿದೆ? ಜಿಲ್ಲಾ ಪಂಚಾಯತಿ ಆಡಳಿತಕ್ಕೆ ಇವೆಲ್ಲಾ ಕಾಣುತ್ತಿಲ್ಲವೇ? ಇಂಥವರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವೇ? ಇವೆಲ್ಲ ಮೇಲಾಧಿಕಾರಿಗಳ ಗಮನಕ್ಕೆ ಇಲ್ಲವೇ? ಇವರೆಲ್ಲರ ಪ್ರಾಯಶ್ಚಿತ್ತಕ್ಕಾಗಿ ಭಗವಂತನಿಂದ ಯಾವ ಅಸ್ತ್ರ ಬರುತ್ತದೆ? ಎಂದು ಕಾಯುತ್ತಿರುವ ಸ್ಥಿತಿ ಜನಸಾಮಾನ್ಯರದ್ದಾಗಿದೆ…
ವರದಿ ಪ್ರಕಾಶ್ ಬಸಪ್ಪ ಕುರಗುಂದ..