ಕ್ರೀಡೆಗೆ ತಂದೆಯವರು ಮೊದಲಿನಿಂದಲೂ ಸಹಕಾರ ನೀಡುತ್ತಿದ್ದು, ನಾವು ಮುಂದುವರೆಸುತ್ತೇವೆ.
ದುಡಗುಂಟಿ ಅವರಂಥ ಒಳ್ಳೆಯ ಅಧಿಕಾರಿಗಳಿಂದ ಸಮಾಜಮುಖಿ ಕಾರ್ಯ ಸಾಧ್ಯ..
ಸಂಸದೆ ಪ್ರಿಯಾಂಕಾ ಜಾರಕಿಹೊಳಿ..
ಬೆಳಗಾವಿ : ಯುವಾಸಮೂಹದ ಏಳಿಗೆಗಾಗಿ ಕ್ರೀಡಾ ಚಟುವಟಿಕೆಗಳು ಬಹಳ ಮುಖ್ಯ, ಮೊದಲಿನಿಂದಲೂ ತಂದೆಯವರು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ, ಮುಂದೆ ನಾವು ಕೂಡಾ ಕ್ರೀಡಾಸಕ್ತರಿಗೆ ಪ್ರೋತ್ಸಾಹ ನೀಡುವಂತ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆಯಾದ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದ್ದಾರೆ..

ಶನಿವಾರ ಸಂಜೆ ವಿಶ್ವೇಶ್ವರಯ್ಯ ನಗರದಲ್ಲಿ ಡಾ ಸತೀಶ್ ಜಾರಕಿಹೊಳಿ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ 2025ರ ಟ್ರೋಫಿಗಳನ್ನು ಅನಾವರಣ ಮಾಡಿ ಮಾತನಾಡಿದ ಸಂಸದರು, ಕ್ರೀಡೆಯಲ್ಲಿ ಆಸಕ್ತಿಯಿರುವ ಯುವ ಜನಾಂಗಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ, ಬಾತಕಂಡೆ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ವಾಲ್ಮೀಕಿ ಸಮಾಜದ ವತಿಯಿಂದ ಆಯೋಜನೆಗೊಂಡ ಈ ಟೂರ್ನಮೆಂಟ್ ಮೇ ಐದರಿಂದ ಪ್ರಾರಂಭವಾಗುವದು ಸಂತಸದ ವಿಷಯ ಎಂದಿದ್ದಾರೆ.

ಈ ಕ್ರಿಕೆಟ್ ಪಂದ್ಯಾವಳಿಗೆ ಯಾರೆಲ್ಲ ಶ್ರಮ ಪಟ್ಟಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು, ಸರಿಯಿಲ್ಲದ ಮೈದಾನವನ್ನು ಸುಧಾರಣೆ ಮಾಡಿ, ಸಂಬಂಧಪಟ್ಟ ಇಲಾಖೆಯವರು ತಮ್ಮ ಜವಾಬ್ದಾರಿ ಮರೆತಿದ್ದರೂ, ಪರಶುರಾಮ ದುಡಗುಂಟಿ ಅವರಂಥ ಅಧಿಕಾರಿಗಳು ವಿಶೇಷ ಆಸಕ್ತಿ ತಗೆದುಕೊಂಡು ಇಂದು ಒಂದು ಉತ್ತಮ ಸ್ಥಿತಿಯ ಮೈದಾನ ಎಲ್ಲರಿಗೂ ಒದಗಿಸುವ ಪ್ರಯತ್ನ ಮಾಡಿದ್ದು, ಸಮಾಜಕ್ಕೆ, ಯುವಸಮೂಹಕ್ಕೆ ಉತ್ತಮ ಸೌಲಭ್ಯ ನೀಡುವ ನಿದರ್ಶನವಾಗಿದ್ದಾರೆ.

ಮುಂದೆಯೂ ಕೂಡಾ ಕ್ರಿಕೆಟ್ ಜೊತೆಗೆ ಖೋಖೋ, ವಾಲಿಬಾಲ್, ಇನ್ನು ಹಲವಾರು ಕ್ರೀಡಾ ಚಟುವಟಿಕೆಗಳಿಗೆ ನಾವಾಗಲಿ ತಂದೆಯವರಾಗಲಿ ಯಾವಾಗಲೂ ಸಹಕಾರ ನೀಡೆ ನೀಡುತ್ತೇವೆ, ಈ ಟೂರ್ನಮೆಂಟ್ ಯಶಸ್ವಿಯಾಗಲಿ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..