ಕ್ಷೇತ್ರದ ಜನಕ್ಕೆ ಗಣರಾಜ್ಯೋತ್ಸವದ ಗಿಪ್ಟ ನೀಡಿದ ಶಾಸಕ ರಾಜು ಸೇಠ್ .
ಬೆಳಗಾವಿ : ಉತ್ತರ ಮತ ಕ್ಷೇತ್ರದಲ್ಲಿ ಗಣರಾಜ್ಯೋತ್ಸವದ ಮುನ್ನಾದಿನದಂದು ಶಾಸಕ ಆಸೀಫ್ (ರಾಜು) ಸೇಠ್ ಅವರು ಹಣ್ಣಿನ ಮಾರುಕಟ್ಟೆ ಬಳಿಯ ಆಜಾದ್ ನಗರದಲ್ಲಿ ನೂತನ ವಿದ್ಯುತ್ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕ್ಷೇತ್ರದ ಜನಕ್ಕೆ ಗಣರಾಜ್ಯೋತ್ಸವದ ಗಿಪ್ಟ ನೀಡಿದ್ದಾರೆ..
ಈ ಹಿಂದೆ 35 ಕಿಲೋವ್ಯಾಟ್ ಸಾಮರ್ಥ್ಯ ಇದ್ದಿದ್ದ ವಿದ್ಯುತ್ ಕೇಂದ್ರವನ್ನು ಈಗ 110 ಕಿಲೋವ್ಯಾಟ್‌ಗೆ ನವೀಕರಿಸಲಾಗಿದ್ದು, ಇದು ಕಣಬರ್ಗಿಯವರೆಗೆ ವಿದ್ಯುತ್ ತಂತಿಗಳನ್ನು ಕಲ್ಪಿಸುವ ಹೊಸ ಯೋಜನೆಗೆ ಅಡಿಪಾಯವಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಶಾಸಕ ಸೇಠ್ ಅವರು, ವಿದ್ಯುತ್ ಪೂರೈಕೆ ಮತ್ತು ವಿದ್ಯುತ್ ಏರಿಳಿತಕ್ಕೆ ಸಂಬಂಧಿಸಿದ ಸಮಸ್ಯಗಳಿಂದ ನಗರದ ಜನರಿಗೆ ಹೆಚ್ಚಿನ ಚಿಂತೆಯಾಗಿದೆ, ಈ ಸಮಸ್ಯೆಗಳನ್ನು ನಾನು ಯಾವಾಗಲೂ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ ಯೋಜನೆಗಳು ಇವು.
ಇದು ನಗರದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಯೋಜನೆಗಳಿಗೆ, ವ್ಯವಹಾರಗಳಿಗೆ ಮತ್ತು ನಗರವಾಸಿಗಳಿಗೆ ಸಹಾಯ ಆಗುವ ಇಂತಹ ಯೋಜನೆಯನ್ನು ಪ್ರಾರಂಭಿಸಲು ಗಣರಾಜ್ಯೋತ್ಸವಕ್ಕಿಂತ ಉತ್ತಮ ದಿನ ಬೇರೊಂದಿಲ್ಲ ಎಂದಿದ್ದಾರೆ..
ವರದಿ ಪ್ರಕಾಶ್ ಕುರಗುಂದ..