ಕ್ಷೇತ್ರದ ಜನತೆಗೆ ಸವದತ್ತಿ ಶಾಸಕರ ಕೃತಜ್ಞತೆ…

ಕ್ಷೇತ್ರದ ಜನತೆಗೆ ಸವದತ್ತಿ ಶಾಸಕರ ಕೃತಜ್ಞತೆ..

ವರ್ಷದ ಸಂಭ್ರಮದಲ್ಲಿ ತಮ್ಮ ರಾಜಕೀಯ ಗುರುಗಳಿಂದ ಆಶೀರ್ವಾದ..

ಬೆಂಗಳೂರು : ಮೇ 13 2023ರ ಈ ದಿನವು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಪಾಲಿಗೆ ಅದೃಷ್ಟದ ದಿವಾಸವಾಗಿದ್ದು, ಇದೇ ದೀನ ರಾಜ್ಯ ವಿಧಾನ ಸಭಾ ಚುನಾವಣೆಯ ಪಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 136 ಸ್ಥಾನ ಗೆಲ್ಲುವದರೊಂದಿಗೆ, ಸರ್ಕಾರ ರಚಿಸುವ ಬಹುಮತ ಪಡೆದು, ಇಡೀ ಕಾಂಗ್ರೆಸ್ ವಲಯದಲ್ಲಿಯೇ ಹರ್ಷದ ವಾತಾವರಣ ನಿರ್ಮಾಣವಾದ ದಿನವಾಗಿತ್ತು..

ಅದೇ ರೀತಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿಯೂ ಕೂಡಾ ವಿಶ್ವಾಸ ವೈದ್ಯ ಅವರು ಅಪಾರ ಜನಬೆಂಬಲದಲ್ಲಿ ವಿಜಯಿಯಾಗಿ ಪ್ರಪ್ರಥಮವಾಗಿ ಶಾಸಕರಾಗಿ ಆಯ್ಕೆಯಾದ ಕಾರಣ ಅವರ ಹಿತೈಷಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಇಡೀ ಕ್ಷೇತ್ರದ ತುಂಬಾ ಸಂಭ್ರಮಾಚರಣೆ ಮಾಡಿದ್ದರು..

ವಿಶ್ವಾಸ ವೈದ್ಯ ಅವರು ಶಾಸಕತ್ವ ಪಡೆದು ಇವತ್ತಿಗೆ ಒಂದು ವರ್ಷ ಪೂರೈಸಿದ ಸಂತಸದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ತಮ್ಮ ರಾಜಕೀಯ ಗುರುಗಳಾದ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಕುಟುಂಬ ಸಮೇತರಾಗಿ ಭೇಟಿ ಆಗಿ ಅವರ ಆಶೀರ್ವಾದ ಪಡೆದಿದ್ದಾರೆ..

ಇದೇ ವೇಳೆ ತಮ್ಮ ಅತ್ಯಮೂಲ್ಯ ಮತಗಳನ್ನು ನೀಡಿ, ತಮ್ಮನ್ನು ಗೆಲ್ಲಿಸಿ ತಂದಂತ ಕ್ಷೇತ್ರದ ಸರ್ವ ಮತದಾರರಿಗೂ ತುಂಬು ಹೃದಯದ ಧನ್ಯವಾದ ತಿಳಿಸಿದ ಶಾಸಕರು, ತಮ್ಮ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಇನ್ನು ಹತ್ತು ಹಲವಾರು ಕನಸನ್ನು ಹೊಂದಿದ್ದು, ಮುಂಬರುವ ಯೋಜನೆಗಳಲ್ಲಿ ಅವೆಲ್ಲವನ್ನೂ ಸಾಕಾರಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..