ಖಾನಾಪುರದಲ್ಲಿ ಸ್ವಾಭಿಮಾನಿ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮ..
ಬೆಳಗಾವಿ : ಗುರುವಾರ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಲಘು ಉದ್ಯೋಗ ಭಾರತೀಯ ಮಹಿಳಾ ಘಟಕದ ಸಹಯೋಗದೊಂದಿಗೆ ಸ್ವಾವಲಂಬಿ ಭಾರತ ಅಭಿಯಾನದ ಜಾಗೃತ ಕಾರ್ಯಕ್ರಮ ಅತೀ ಅರ್ಥಪೂರ್ಣವಾಗಿ ಜರುಗಿದೆ..
ಸಣ್ಣ ಅತಿಸಣ್ಣ ಮತ್ತು ಗುಡಿ ಕೈಗಾರಿಕೆಯ ಉದ್ದಿಮೆಯಲ್ಲಿ ಆಸಕ್ತಿ ಇರುವ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮತ್ತು ತೆಲಂಗಾಣ ವಿದ್ಯಾರ್ಥಿಗಳು ಈ ಜಾಗೃತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಭವಿಷ್ಯದಲ್ಲಿ ಉದ್ದಿಮೆ ಅಭಿವೃದ್ಧಿಪಡಿಸುವ ಹಾಗೂ ಅದರಲ್ಲಿ ಸಾಧಿಸುವ ಹಲವಾರು ವಿಷಯಗಳನ್ನು ಹಂಚಿಕೊಂಡರು..
ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾದ ಅತಿಥಿಗಳಾದ ಹಾಗೂ ಲಘು ಉದ್ಯೋಗ ಮಹಿಳಾ ರಾಜ್ಯ ಕಾರ್ಯದರ್ಶಿಯಾದ ಪ್ರಿಯಾ ಪುರಾಣಿಕ ಅವರು ವಿಧ್ಯಾರ್ಥಿ, ಉದ್ದಿಮೆದಾರರನ್ನು ಉದ್ದೇಶಿಸಿ ಮಾತನಾಡಿ, ಬ್ಯಾಂಕಿಂಗ್ ಯೋಜನೆಗಳು ಹಾಗೂ ಯೋಜನಾ ವರದಿಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು…
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅತಿಥಿಗಳು ಅವರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು, ಎಲ್ಲರೂ ತಮ್ಮದೇ ಆದ ಘಟಕವನ್ನು ಹಿಂಡುವ ಇಚ್ಛೆಯನ್ನು ವ್ಯಕ್ತಪಡಿಸಿದರು..
ವರದಿ ಪ್ರಕಾಶ ಕುರಗುಂದ..
