ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲರೊಂದಿಗೆ ಕನ್ನಡ ಸಂಘಗಳ ಕ್ರಿಯಾ ಸಮಿತಿ ಸಭೆ..
ಗಡಿ ಭಾಗದ ಸಮಸ್ಯೆ ಹಾಗೂ ರಾಜ್ಯೋತ್ಸವ ಆಚರಣೆ ಕುರಿತು ಚರ್ಚೆ..
ಬೆಂಗಳೂರು : ಬೆಂಗಳೂರಿನ ವಿಧಾನ ಸೌಧದಲ್ಲಿ ಗಡಿ ಭಾಗದ ವಿವಿಧ ಸಮಸ್ಯೆಗಳ ಕುರಿತು ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಹಾಗೂ ಇನ್ನಿತರ ಸಂಘಟನೆಗಳ ಮುಖಂಡರು ಬುಧವಾರ ಸಂಜೆ
ಸುದೀರ್ಘವಾದ ಚರ್ಚೆ ನಡೆಸಿದರು.
ಅಶೋಕ್ ಚಂದರಗಿ,
ಮಹಾದೇವ ತಳವಾರ, ವಾಜಿದ ಹಿರೇಕೋಡಿ, ಆರ್.
ಅಭಿಲಾಷ, ಶಿವಪ್ಪ ಶಮರಂತ, ಮೈನೋದ್ದೀನ್ ಹಾಗೂ
ಮಕಾನದಾರ್ ಮುಂತಾದವರು ಪಾಲ್ಗೊಂಡಿದ್ದರು.

ಇದಕ್ಕೂ ಮುಂಚೆ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ
ಶಿವರಾಜ ತಂಗಡಗಿ ಅವರೊಂದಿಗೆ ಬೆಳಗಾವಿಯ ಕನ್ನಡ ಸಂಘಟನೆಗಳ ಮುಖಂಡರು ಬುಧವಾರ ಮಧ್ಯಾನ್ಹ ಬೆಂಗಳೂರಿನ ಕುಮಾರಕೃಪಾ ಅತಿಥಿ ಗ್ರಹದಲ್ಲಿ ಗಡಿ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ರಾಜ್ಯೋತ್ಸವ,
ಕನ್ನಡ ಗಡಿಭವನದ ನಿರ್ವಹಣೆ ಮತ್ತಿತರರು ವಿಷಯಗಳ
ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಗಡಿ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ್ ಅವರು ಕೂಡಾ ಉಪಸ್ಥಿತರಿದ್ದರು.