ಗಣರಾಯ ಬೆಳಗಾವಿ ಜನತೆಗೆ ಸುಖ ಶಾಂತಿ ನೆಮ್ಮದಿ ಅಭಿವೃದ್ಧಿ ನೀಡಲಿ..

ಗಣರಾಯ ಬೆಳಗಾವಿ ಜನತೆಗೆ ಸುಖ ಶಾಂತಿ ನೆಮ್ಮದಿ ಅಭಿವೃದ್ಧಿ ನೀಡಲಿ..

ಜಾತಿ, ಮತವನ್ನು ಮರೆತು ಎಲ್ಲರೂ ಒಂದೇ ಎಂದು ಆಚರಿಸುವ ಈ ಗಣೇಶತ್ಸವದಿಂದ ಎಲ್ಲರಿಗೂ ಶುಭವಾಗಲಿ..

ಕಿರಣ ಜಾಧವ, ಬಿಜೆಪಿ ಮುಖಂಡರು ಬೆಳಗಾವಿ..

ಬೆಳಗಾವಿ : ಗಣೇಶ್ ಉತ್ಸವದ 10ನೇ ದಿನದಂದು ಬೆಳಗಾವಿ ಬಿಜೆಪಿಯ ಮುಖಂಡರಾದ ಕಿರಣ ಜಾಧವ ಹಾಗೂ ಇತರ ಬಿಜೆಪಿ ಮುಖಂಡರೊಂದಿಗೆ ನಗರದಲ್ಲಿ ಸಂಚರಿಸಿ, “ಬೆಳಗಾವಿ ಸಾರ್ವಜನಿಕ ಗಣಪತಿ ಪೆಂಡಾಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಅದಾದ ಬಳಿಕ, ನಾಳೆ ಹನ್ನೊಂದನೇ ದಿನದಂದು ಬೆಳಗಾವಿ ನಗರದಲ್ಲಿರುವ ಗಣೇಶ ವಿಸರ್ಜನೆ ಮಾರ್ಗಗಳನ್ನು ಹಾಗೂ ವಿಸರ್ಜನೆಯ ಹೊಂಡಗಳನ್ನು ವೀಕ್ಷಿಸಿ ಪರಿಶೀಲನೆ ಮಾಡಿದರು.

ಇದೇ ವೇಳೆ ಬೆಳಗಾವಿಯ ನಾರ್ವೆಕರ ಗಲ್ಲಿಯ ಯುವಕ ಮಂಡಳ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕಿರಣ ಜಾಧವ ಅವರು, ಬೆಳಗಾವಿ ಗಣೇಶೋತ್ಸವ ಬಹಳ ಅದ್ದೂರಿಯಾಗಿ ಆಚರಣೆ ಆಗುತ್ತಿದೆ. ಅದೇ ರೀತಿ ಬೆಳಗಾವಿ ಜನತೆಗೆ ಸುಖ, ಶಾಂತಿ, ನೆಮ್ಮದಿ ಅಭಿವೃದ್ಧಿಗೆ ಗಣರಾಯ ಆಶೀರ್ವಾದ ನೀಡಲಿ ಎಂದು ಆಶಿಸಿದರು..

ಬೆಳಗಾವಿಯಲ್ಲಿ ಯಾವುದೇ ರೀತಿಯ ಬೇದಭಾವ ಇಲ್ಲದೆ, ಜಾತಿ ಮತ ನೋಡದೆ ಉತ್ಸವವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ, ಬೆಳಗಾವಿ ಜನತೆ ಶಾಂತಿ ಪ್ರಿಯರು ಬೆಳಗಾವಿ ಜನತೆಗೆ ವಿಘ್ನೇಶ್ವರ ಎಲ್ಲರ ವಿಘ್ನ ಪರಿಹರಿಸಲಿ ಎಂದು ಹಾರೈಸಿದರು.

ಭಾರತ ಶ್ರೀ ಸಾರ್ವಜನಿಕ ಗಣೇಶ ಉತ್ಸವ ಮಂಡಳ ಅನಸುರ್ಕರ ಗಲ್ಲಿ ಬೆಳಗಾವಿ, ಮಾರುತಿ ಗಲ್ಲಿ ಬೆಳಗಾವಿ, ನಗರ ಸಾರ್ವಜನಿಕ ಗಣೇಶ ಉತ್ಸವ ಮಂಡಳ ವತಿಯಿಂದ ಪಾಲಿಕೆ ಸದಸ್ಯ ಸಂತೋಷ್ ಪೆಡ್ನೆಕರ್ ಅತಿಥಿಗಳನ್ನು ಬರಮಾಡಿಕೊಂಡರು, ಅದೇ ರೀತಿ ಸಾರ್ವಜನಿಕ ಗಣೇಶೋತ್ಸವ ಮಂಡಳ ಸದಸ್ಯರಾದ ಕಿರಣ ಜಾದವ್ ಅತಿಥಿಗಳಿಗೆ ಗೌರವಿಸಿ ಗಣೇಶ ದರ್ಶನ ಹಾಗೂ ಮಹಾಪ್ರಸಾದದಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರ ಸೇವಕ ಸಂತೋಷ್ಬಿ ಪೇಡನೆಕರ, ಬಿಜೆಪಿಯ ಹಲವು ಕಾರ್ಯಕರ್ತರು ಶ್ರೀ ಸಾರ್ವಜನಿಕ ಗಣೇಶ್ ಉತ್ಸವ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು..