ಗಣೇಶ ಉತ್ಸವಕ್ಕಾಗಿ, ವಿದ್ಯುತ್ ಜಾಲ ಸರಿಪಡಿಸುವ ಕಾಮಗಾರಿಗೆ ಸಚಿವರಿಂದ ಚಾಲನೆ..!!!

ಗಣೇಶ ಉತ್ಸವಕ್ಕಾಗಿ, ವಿದ್ಯುತ್ ಜಾಲ ಸರಿಪಡಿಸುವ ಕಾಮಗಾರಿಗೆ ಸಚಿವರಿಂದ ಚಾಲನೆ..

ಸತೀಶ ಜಾರಕಿಹೊಳಿ ಅವರಿಂದ ವಾಹನದ ಉಚಿತ
ಚಾರ್ಜರ್ ಘಟಕಕ್ಕೆ ಚಾಲನೆ..

ಬೆಳಗಾವಿ : ಮಂಗಳವಾರ ದಿನಾಂಕ 15/08/2023 ರಂದು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 77 ನೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾದ ನಂತರ ಕೆಇಬಿ ಕಾರ್ಯಕ್ರಮದಲ್ಲಿ ಭಾಗಿಯಾದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರು, ಹಲವು ಕಾಮಗಾರಿಗೆ ಚಾಲನೆ ನೀಡಿದರು..

ನೇಹರು ನಗರದಲ್ಲಿ ಇರುವ ಕೆಇಬಿ ವಿಭಾಗೀಯ ಕಚೇರಿಗೆ ಆಗಮಿಸಿದ ಸಚಿವರು, ಮೊದಲಿಗೆ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಉಚಿತ ಚಾರ್ಜರ್ ಘಟಕವನ್ನು ಉದ್ಘಾಟಿಸಿದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಗ್ರಾಹಕರಿಗೆ ಉಚಿತವಾಗಿ, ತಮ್ಮ ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ನಿಗಮವು ನೀಡಿದ್ದು, ಬೆಳಗಾವಿಯಲ್ಲಿ ನೆಹರು ನಗರದಲ್ಲಿ ಒಂದು, ಮತ್ತು ರೇಲ್ವೆ ನಿಲ್ದಾಣದ ಎದುರಿನ ಕಚೇರಿಯಲ್ಲಿ ಒಂದು, ಒಟ್ಟು ಎರಡು ಇಂತಹ ಘಟಕಗಳಿವೆ ಎಂಬ ಮಾಹಿತಿ ನೀಡಿದ್ದಾರೆ.

ವಾಹನ ಚಾರ್ಜ್ ಬಗ್ಗೆ ಮಾಹಿತಿ ಪಡೆದ ಸಚಿವರು, ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಎಂಬ ಮನವಿ ಮಾಡಿದರು..

ನಂತರ 2023ರ ಸಾಲಿನ ಗಣೇಶೋತ್ಸವ ಆಚರಣೆಗಾಗಿ, ವಿದ್ಯುತ್ ಸುರಕ್ಷತಾ ಮುಂಜಾಗ್ರತೆ ಕ್ರಮಕ್ಕಾಗಿ ಕೆಲ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಈ ಹಿಂದೆ, ಈ ವಿಷಯದ ಕುರಿತಾಗಿ ನಿಗಮದ ಸಭೆ ಕರೆದು, ಸಚಿವರು ಹಾಗೂ ಶಾಸಕ ರಾಜು ಶೆಟ್ ಸಲಹೆ ನೀಡಿದ್ದರ ಪ್ರಕಾರ ಸಾರ್ವಜನಿಕರ ಸುರಕ್ಷಾ ದೃಷ್ಟಿಯಿಂದ ನಗರದ ಹಲವು ಭಾಗಗಳಲ್ಲಿ ವಿಧ್ಯುತ್ ಜಾಲವನ್ನು ಸರಿಪಡಿಸಲು ಇಂದು ಚಾಲನೆ ನೀಡಲಾಗಿದೆ..

ಇದೇ ಸಂದರ್ಭದಲ್ಲಿ ಕೆಇಬಿ ನಿಗಮದ ಸಿಬ್ಬಂದಿಗಳು ವಾಸಿಸುವ ವಸತಿ ನಿಲಯಗಳಲ್ಲಿ ಬಹು ದಿನಗಳಿಂದ ಹಲವು ಮೂಲಭೂತ ಸಮಸ್ಯೆಗಳು ಇದ್ದಿದ್ದು, ಅದಕ್ಕೆ ಸಂಭಂದಿಸಿದ ನಗರ ಸೇವಕರು, ಪಾಲಿಕೆ ಅಧಿಕಾರಿಗಳು ಯಾರೂ ಗಮನ ನೀಡುತ್ತಿಲ್ಲ, ಸರ್ಕಾರಕ್ಕೆ ನಾವು ತೇರಿಗೆ ನೀಡುತ್ತಿದ್ದರು ನಮ್ಮ ಸಮಸ್ಯೆಗೆ ಸ್ಪಂದನೆ ನೀಡುತ್ತಿಲ್ಲ ಎಂದು ಸಚಿವರಿಗೆ ತಮ್ಮ ಮನವಿ ಹೇಳಿಕೊಂಡರು…

ಸುಮಾರು 150 ರಿಂದ 200 ಕುಟುಂಬಗಳು ಇರುವ ಈ ವಸತಿ ನಿಲಯಗಳಲ್ಲಿ, ಸರಿಯಾಗಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವವರು ಬರುವದಿಲ್ಲ, ಸಮಯಕ್ಕೆ ಸರಿಯಾಗಿ ನೀರು ಬರುವದಿಲ್ಲ, ರಸ್ತೆಯ ಸುಧಾರಣೆಗಳು ಆಗಿಲ್ಲ, ಬಿದೀ ದ್ವೀಪಗಳಿಗೆ ಸರಿಯಾದ ಲೈಟಗಳಿಲ್ಲ ಎಂಬ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು..

ಈ ಸಂಧರ್ಭದಲ್ಲಿ ಸಚಿವರ ಜೊತೆಯಲ್ಲಿ, ಬೆಳಗಾವಿ ಉತ್ತರದ ಶಾಸಕರಾದ ರಾಜು ಶೇಟ್, ಕೆಲ ನಗರ ಸೇವಕರು, ಪಕ್ಷದ ಪದಾಧಿಕಾರಿಗಳು, ಕೆಇಬಿ ನಿಗಮದ ಅಧಿಕಾರಿಗಳಾದ ಅಶ್ವಿನ್ ಶಿಂದೆ, ಪವನ್ ಕುಮಾರ್, ಸಂಜೀವ್ ಹಮ್ಮಣ್ಣವರ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..