ಗಣೇಶ ವಿಸರ್ಜನೆಯ ಯಶಸ್ಸಿನ ನಂತರ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪಾಲಿಕೆ ಆಯುಕ್ತರು..
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಎಂದ ಪಾಲಿಕೆ ಸಿಬ್ಬಂದಿಗಳು..
ಬೆಳಗಾವಿ : ಎರಡು ದಿನಗಳ ಕಾಲ ನಡೆದ ಬೆಳಗಾವಿ ನಗರದ ಗಣೇಶ ವಿಸರ್ಜನೆಯ ಕಾರ್ಯವನ್ನು ಅತೀ ಯಶಸ್ವಿಯಾಗಿ ಪೂರ್ಣಗೊಳಿಸಿದ ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿಗಳು ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಎಂಬ ಕನ್ನಡ ಹಾಡಿಗೆ ಹೆಜ್ಜೆ ಹಾಕಿ, ತಮ್ಮ ಸಂತೋಷವನ್ನು ಸಂಭ್ರಮಿಸಿದ್ದಾರೆ.
ಪ್ರತಿವರ್ಷದ ವಾಡಿಕೆಯಂತೆ ಪಾಲಿಕೆಯ ಗಣಪತಿ, ನಗರದ ಕೊನೆಯ ಗಣಪತಿಯಾಗಿ ವಿಸರ್ಜನೆ ಆಗುತ್ತಿದ್ದು, ಪಾಲಿಕೆಯ ಗಣಪತಿ ವಿಸರ್ಜಿಸುವ ವೇಳೆ, ತಮಗೆ ಒದಗಿ ಬಂದ ಮಹತ್ವದ ಜವಾಬ್ದಾರಿಯನ್ನು ಅತೀ ಯಶಸ್ವಿಯಾಗಿ ಪೂರ್ಣಗೊಳಿಸಿದ ಆನಂದದಲ್ಲಿ ಪಾಲಿಕೆಯ ಆಯುಕ್ತ ಶುಭ ಬಿ ಅವರ ಜೊತೆಯಾಗಿ ಇತರ ಸಿಬ್ಬಂದಿಗಳು ಭಾಗಿಯಾಗಿ ಜನಪ್ರಿಯ ಕನ್ನಡ ಗೀತೆಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..