ಗಣೇಶ ಹಬ್ಬದ ಆಚರಣೆಯ ಸಕಲ ಸಿದ್ಧತೆ ಪರಿಶೀಲಿಸಿದ ಅಧಿಕಾರಿಗಳು..
ಬೆಳಗಾವಿ : ಮಂಗಳವಾರ ಬೆಳಿಗ್ಗೆಯಿಂದಲೇ ನಗರದ ಪ್ರಮುಖ ಸ್ಥಳಗಳಲ್ಲಿ ಅಂದರೆ, ಗಣೇಶ ಕೂರಿಸುವ ಹಾಗೂ ಸಂಚರಿಸಿ, ವಿಸರ್ಜನೆಗೊಳ್ಳುವ ಮಾರ್ಗದುದ್ದಕ್ಕೂ ಸಂಚರಿಸಿ, ಈಗ ಆಗಿರುವ ಹಾಗೂ ಮುಂದೆ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಪರಿಶೀಲನೆ ನಡೆಸಿದ್ದಾರೆ..

ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಸಮಾದೇವಿ ಗಲ್ಲಿ, ಕಪಿಲೇಶ್ವರ ದೇವಸ್ಥಾನದ ಬ್ರಿಡ್ಜ್ ಮೇಲೆ, ಕೆಳಗೆ, ಫೋರ್ಟ್ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಅಲ್ಲಿ ಆಗಿರುವ ವ್ಯವಸ್ಥೆಗಳ ಬಗ್ಗೆ ಸಂಭಂದಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ಇನ್ನೂ ಆಗಬೇಕಾದ ಕೆಲಸದ ಬಗ್ಗೆ ಸೂಚನೆ ನೀಡಿದ್ದಾರೆ..
ನಂತರ ಗಣೇಶನ ವಿಸರ್ಜನೆಯ ಸ್ಥಳವಾದ ಕಪಿಲೇಶ್ವರ ದೇವಸ್ಥಾನದ ಹೊಂಡದ ಹತ್ತಿರ ಬಂದು ಪರಿಶೀಲಿಸಿದ ಅಧಿಕಾರಿಗಳು, ಕ್ರೇನ್ ವಾಹನ ನಿಂತು ಕೆಲಸಮಾಡಲು ಹಾಗೂ ಜನರು ಸುರಕ್ಷಿತವಾಗಿ ವಿಸರ್ಜನೆ ವೀಕ್ಷಣೆ ಮಾಡಲು ಸ್ಥಳ ನಿಗದಿಯ ಕುರಿತಾಗಿ, ದೊಡ್ಡ ಗಾತ್ರದ ಗಣೇಶನ ಸಾಗಣೆ ಮತ್ತು ವಿಸರ್ಜನೆಯ ಬಗ್ಗೆ, ಚರ್ಚೆಗಳು ನಡೆದು, ಎಲ್ಲವೂ ಸುರಕ್ಷಿತವಾಗಿ ಯೋಜಿಸಿ, ಸಿದ್ಧತೆ ನಡೆಯಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ..

ಜಿಲ್ಲಾಧಿಕಾರಿಗಳ ಜೊತೆಯಾಗಿ, ನಗರ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು, ಗಣೇಶ ಉತ್ಸವ ಮಂಡಳಿಯ ಪದಾಧಿಕಾರಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ…