ಗುಣಮಟ್ಟದ ಕೊರತೆಗೆ, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವರು..

ಗುಣಮಟ್ಟದ ಕೊರತೆಗೆ, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವರು..

ಕಳಪೆ ಕಾಮಗಾರಿ ಮಾಡುವ ಅಧಿಕಾರಿ-ಗುತ್ತಿಗೆದಾರರ ಮೇಲೆ ಕ್ರಮ..

ಅಂಕಲಗಿ-ಪಾಶ್ಚಾಪುರ ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಸಚಿವ ಜಾರಕಿಹೊಳಿ…

ಗೋಕಾಕ : ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಳಪೆ ಮಟ್ಟದ ಕಾಮಗಾರಿ ಮಾಡಿದ್ದು ಕಂಡು ಬಂದರೆ ಅಂತಹ ಅಧಿಕಾರಿ ಹಾಗೂ ಗುತ್ತಿಗೆದಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಮಂಗಳವಾರ ಗೋಕಾಕ, ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಂಕಲಗಿ ಪಾಶ್ಚಾಪುರ ರಸ್ತೆ ಕಾಮಗಾರಿ ಪರಿಶೀಲಿಸಿ, ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸಿದರು.

ರಸ್ತೆ ಅಗೆದು ಕಾಮಗಾರಿ ಗುಣಮಟ್ಟ ಪರಿಶೀಲನೆ

ಪಾಶ್ಚಾಪುರ-ಅಂಕಲಗಿ ರಸ್ತೆ ಕಾಮಗಾರಿ ಕುರಿತು ಸ್ವತಃ ಸಚಿವ್‌ ಸತೀಶ ಜಾರಕಿಹೊಳಿ ಅವರು ಪಿಡ್ಬ್ಲೂಡಿ ಅಧಿಕಾರಿಗಳಿಂದ ರಸ್ತೆ ಬದಿಯಲ್ಲಿ ಅಗೆದು ಕಾಮಗಾರಿ ಗುಣಮಟ್ಟದ ಬಗ್ಗೆ ಪರೀಕ್ಷಿಸಿದರು.

ನಂತರ ಮಾತನಾಡಿದ ಅವರು,ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಿಸಬೇಕು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಗೆ ಆಸ್ಪದವಿಲ್ಲ. ರಸ್ತೆ ಕಾಮಗಾರಿಯಲ್ಲಿ ಕಳಪೆ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಕ್ಸೆಕ್ಯುಟಿವ ಇಂಜಿನಿಯರ್‌ ಎಸ್. ಎನ್.‌ ಬಳೊಲ್‌, ಎಡಬ್ಲೂಇ ಶಿಂಗೆ, ಜೆ.ಇ. ನಾಗಾಭರಣ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಕೆಪಿಸಿಸಿ ಸದಸ್ಯ ಹಾಗೂ ಶಾಸಕರ ಆಪ್ತ ಸಹಾಯಕ ಮಲಗೌಡ ಪಾಟೀಲ್‌ ಸ್ಥಳದಲ್ಲಿದ್ದರು.

ವರದಿ: ಸಂತೋಷ ಮೇತ್ರಿ, ಸಮಾಜಮುಖಿ ಸುದ್ದಿ…