ಗೋಕಾಕ ತಾಲೂಕಿನ ವಿವಿಧೆಡೆಗೆ ಬೇಟಿ, ಇಲಾಖಾ ಕಾರ್ಯಗತಿಯ ಪರಿಶೀಲನೆ..
ಅಸ್ವಚ್ಛತೆಯ ಶಾಲಾ ವಾತಾವರಣದ ಶಿಕ್ಷಕರಿಗೆ ಸ್ವಚ್ಚತಾ ಪಾಠ..
ವ್ಯವಸ್ಥಿತ ಆಡಳಿತಕ್ಕಾಗಿ ಕೆಲ ಸಲಹೆ ಸೂಚನೆ ನೀಡಿದ ಜಿಪಂ ಮುಖ್ಯ ಲೆಕ್ಕಾಧಿಕಾರಿಗಳು..
ಬೆಳಗಾವಿ : ಬುಧವಾರ ದಿನಾಂಕ 04/08/2024ರಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ, ಗೋಕಾಕ ತಾಲೂಕಿನ ವಿವಿಧ ಪಂಚಾಯತಿ ಕಚೇರಿಗಳಿಗೆ ಬೇಟಿ ನೀಡಿ, ಇಲಾಖೆಯ ಕಾರ್ಯಗಳನ್ನು ಪರಿಶೀಲನೆ ಮಾಡಿದ್ದಾರೆ..

ಮೊದಲಿಗೆ ಗೋಕಾಕ ತಾಲೂಕು ಪಂಚಾಯತಿಗೆ ಬೇಟಿ ನೀಡಿ, ಅಲ್ಲಿನ ವಿವಿಧ ಕಾಮಗಾರಿಗಳ ಕಡತಗಳನ್ನು ಹಾಗೂ ಲೆಕ್ಕಪತ್ರ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಯಾವ ಕಾಮಗಾರಿ ಪೂರ್ಣವಾಗಿದೆ, ಯಾವುದು ಅಪೂರ್ಣವಾಗಿದೆ, ಅದಕ್ಕೆ ಕಾರಣವೇನು? ಬಳಕೆಯಾದ, ಬಳಕೆಯಾಗದ ಅನುದಾನ ಬಗ್ಗೆ ಹಾಗೂ ಲೆಕ್ಕಪತ್ರಗಳನ್ನು ಯಾವ ಪ್ರಕಾರದಲ್ಲಿ ನಿರ್ವಹಿಸಲಾಗಿದೆ ಎಂಬುದನ್ನು ಪರೀಕ್ಷಿಸಿ, ಲೆಕ್ಕಪತ್ರದ ನಿರ್ವಹಣೆಗಾಗಿ ತಾಲೂಕು ಪಂಚಾಯತಿಯ ಸಿಬ್ಬಂದಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ..
ಈ ವೇಳೆ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಗಸ್ತಿ ಅವರು, ತಮ್ಮ ಕಚೇರಿಯಿಂದ ಕೈಗೊಂಡಿರುವ ವಿವಿಧ ಕಾರ್ಯಗಳ ಹಾಗೂ ಯೋಜನೆಗಳು ಸದುಪಯೋಗ ಆಗಿರುವ ಬಗ್ಗೆ ಕೆಲ ನಿದರ್ಶನಗಳನ್ನು ಅಧಿಕಾರಿಗಳಿಗೆ ನೀಡಿದ್ದು, ಮುಂದೆ ಇನ್ನು ಹಲವಾರು ಜನಪರವಾದ ಕಾರ್ಯಗಳನ್ನು ಕಚೇರಿಯಿಂದ ಕೈಗೊಳುತ್ತೇವೆಂಬ ಭರವಸೆ ನೀಡಿದ್ದು, ಇದೇ ವೇಳೆ ತಾಲೂಕು ಪಂಚಾಯತಿಯ ಸಿಬ್ಬಂದಿಗಳಾದ ಲಕ್ಷ್ಮಿ ಭಂಡಾರಿ ಹಾಗೂ ಇತರರು ಇದ್ದರು..

ನಂತರ ಗೋಕಾಕ ತಾಲೂಕಿನ ಗ್ರಾಮ ಪಂಚಾಯತಿಗಳಾದ ಕುಂದರಗಿ, ತವಗ ಹಾಗೂ ಕೊಣ್ಣೂರ ಪಂಚಾಯತಿಗಳಿಗೆ ಬೇಟಿ ನೀಡಿ, ಅಲ್ಲಿಯ ಕಡತಗಳನ್ನು ಪರಿಶೀಲನೆ ಮಾಡಿದ್ದು, ಸರ್ಕಾರದ ಯೋಜನೆಗಳು ಸರಿಯಾದ ಪಲಾನುಭವಿಗಳಿಗೆ ತಲುಪಬೇಕು, ತಮ್ಮ ಕ್ರಿಯಾಯೋಜನೆಯಂತೆಯೇ ಕಾರ್ಯ ನಡೆಯಬೇಕು, ಎಸ್ಸಿಪಿ ಟಿಎಸ್ಪಿ ಅನುದಾನ ಸರಿಯಾಗಿ ಸದ್ಬಳಕೆ ಆಗಬೇಕು ಎಂದರು..
ಹೊರಗುತ್ತಿಗೆ ಸಿಬ್ಬಂದಿಗಳು ಎಷ್ಟು ಇರುವರು, ಯಾರು ಯಾರು ಯಾವ ಕಾರ್ಯ ಮಾಡುತ್ತಿದ್ದಾರೆ, ಅವರಿಗೆ ಸಂದಾಯ ಆಗುತ್ತಿರುವ ವೇತನವೇಷ್ಟು ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದು, ಹೊರಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡಿದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಇನ್ನು ಈ ಗ್ರಾಮಪಂಚಾಯತಿಗಳ ಅಡಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳ ಪರಿಶೀಲನೆ ಮಾಡಿದ್ದು, ಗುಣಮಟ್ಟದ ಕಾಮಗಾರಿ ಆಗಬೇಕು ಎಂಬ ಸಲಹೆ ನೀಡಿದ್ದಾರೆ..
ನಂತರ ಗೊಡಚಿನಮಲ್ಕಿ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಗೆ ಬೇಟಿ ನೀಡಿದ ಅಧಿಕಾರಿಗಳ ತಂಡ, ಅಲ್ಲಿನ ಕುಡಿಯುವ ನೀರಿನ ಟ್ಯಾಂಕರ್ ಸುತ್ತಲಿನ ಅಸ್ವಚ್ಛತೆಯ ಬಗ್ಗೆ ಅಸಮಾಧಾನಗೊಂಡ ಅಧಿಕಾರಿಗಳು ಅಲ್ಲಿರುವ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು, ಇನ್ನೆರಡು. ದಿನಗಳಲ್ಲಿ, ಅಲ್ಲಿರುವ ಅಶುದ್ಧ ನೀರು ಸಂಗ್ರಹ, ಕಸ, ಕಲ್ಲುಗಳನ್ನು ಸ್ವಚ್ಛ ಮಾಡಿ, ಮಕ್ಕಳು ಸುರಕ್ಷಿತವಾಗಿ ನಡೆದಾಡುವಂತೆ ಮಾಡಬೇಕೆಂದು ಸೂಚನೆ ನೀಡಿದರು..

ಇನ್ನು ತಾಲೂಕಿನ ಕನಸಿಗೇರಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಬೇಟಿ ನೀಡಿದ ಅಧಿಕಾರಿಗಳು, ಅಲ್ಲಿನ ಮಕ್ಕಳೊಂದಿಗೆ ಮಾತನಾಡಿ, ಅಲ್ಲಿ ನೀಡುವ ಬಿಸಿ ಊಟದ ಬಗ್ಗೆ ವಿಚಾರಿಸಿದರು, ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗುವಂತೆ ನೋಡಿಕೊಳ್ಳಬೇಕು, ಮಕ್ಕಳಿಗೆ ನೀಡುವ ಮೊದಲು, ತಾವು ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಆ ಆಹಾರವನ್ನು ಸೇವಿಸಿ, ಸರಿಯೇನಿಸಿದ ನಂತರ ಮಕ್ಕಳಿಗೆ ನೀಡಬೇಕು ಎಂದರು..

ಈ ತಾಲೂಕಾ ಬೇಟಿಯ ವೇಳೆ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರ ಜೊತೆಯಲ್ಲಿ ಸಿಬ್ಬಂದಿಗಳಾದ ಶಶಿಧರ ನೇಸರಗಿ, ಸುವರ್ಣ ಮಹೆಂದ್ರಕರ ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..