ಗ್ರಹಲಕ್ಷ್ಮಿ ಅರ್ಜಿ ಅಕ್ರಮ ನೋಂದಣಿ..!!!

ಗ್ರಹಲಕ್ಷ್ಮಿ ಅರ್ಜಿ ಅಕ್ರಮ ನೋಂದಣಿ..

ಖಾಸಗಿ ಆನ್ಲೈನ್ ಸೆಂಟರಿಗೆ ಬೀಗ ಜಡಿದ ಅಧಿಕಾರಿಗಳು..

ಬೆಳಗಾವಿ : ಜಿಲ್ಲೆಯ ಸಮೀಪ ಇರುವ ಮುತಗಾ ಗ್ರಾಮದ ಗ್ರಾಮ ಒನ್ ಐಡಿ ಬಳಸಿ, ಬೆಳಗಾವಿಯ ಖಾಸಗಿ ಆನಲೈನ್ ಸೆಂಟರ್ ನಿಂದ ಗೃಹಲಕ್ಷ್ಮೀ ಅರ್ಜಿಗಳನ್ನು ಅಕ್ರಮವಾಗಿ ತುಂಬುತ್ತಿದ್ದರು..

ಫಲಾನುಭವಿಗಳ ನೋಂದಣಿಗಾಗಿ ಪ್ರತಿ ಅರ್ಜಿಗೆ
ಫಲಾನುಭವಿಗಳಿಂದ 250 ರೂಪಾಯಿ ವಸೂಲಿ ಮಾಡುತ್ತಿದ್ದರು..

ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿರ್ದೇಶಕರಾದ ನಾಗರಾಜ್ ಆರ್, ಹಾಗೂ ಬೆಳಗಾವಿ ತಹಶೀಲ್ದಾರ್ ಅವರಾದ ಸಿದ್ರಾಯಿ ಬೋಸಗಿ ಹಾಗೂ ಸಿಬ್ಬಂದಿಯವರು ಖಾಸಗಿ ಆನ್ ಲೈನ್ ಸೆಂಟರಿಗೆ ದಾಳಿ ಮಾಡಿ, ಬೀಗ‌ ಜಡಿದು ಕ್ರಮ ಜರುಗಿಸಿದ್ದಾರೆ..

ವರದಿ ಪ್ರಕಾಶ ಕುರಗುಂದ..