ಗ್ರಾಮೀಣ ಬಡ ವಿಧ್ಯಾರ್ಥಿಗಳ ಅಧ್ಯಯನಕ್ಕೆ ಬೆಳಕಾದ ಎಜುಕೇಷನ್ ಇಂಡಿಯಾ ಸಂಸ್ಥೆ..

ವಿದ್ಯಾರ್ಥಿಗಳ ಅಧ್ಯಯನಕ್ಕೆ ಬೆಳಕಾದ ಎಜುಕೇಷನ್ ಇಂಡಿಯಾ ಸಂಸ್ಥೆ..

ಬೆಳಗಾವಿ : ಗುರುವಾರ ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಬೆಳಗಾವಿಯ ಎಜುಕೇಷನ್ ಇಂಡಿಯಾ ಸಂಸ್ಥೆಯ ಸದಸ್ಯರು ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತಹ ಕಾರ್ಯಕ್ಕೆ ಸಹಾಯ ಮಾಡಿದ್ದು ನಮ್ಮ ಸಂಸ್ಥೆಗೆ ಹೆಮ್ಮೆ ಎನಿಸಿದೆ ಎಂದಿದ್ದಾರೆ..

ಬೆಳಗಾವಿಯ ಎಜುಕೇಷನ್ ಇಂಡಿಯಾ ಸಂಸ್ಥೆಯ ಸದಸ್ಯರಾದ ಕ್ವಾಂಜಿ ರೊಡ್ರಿಕ್ಸ್ ಅವರು ಮಾತನಾಡಿ, ನಮ್ಮ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಆದ ಡಾ ಮಂಜಿತ್ ಜೈನ್ ಅವರು ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಆವಿಷ್ಕಾರ ಕಾರ್ಯಕ್ಕೆ ಸಹಕಾರ ಮಾಡುವದರ ಮೂಲಕ ಬಡ ಹಾಗೂ ಗ್ರಾಮೀಣ ವಿಧ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗುವ ಕಾರ್ಯ ಮಾಡಿದ್ದಾರೆ ಎಂದಿದ್ದಾರೆ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ, 9ನೆಯ ತರಗತಿಯ ವಿಧ್ಯಾರ್ಥಿಗಳು ಆವಿಷ್ಕಾರ ಮಾಡಿದ ಲೈಟ್ ಸ್ಟಾರ್ ಗ್ರೂಪನ ಪೆನ್ನಿಗೆ ಪ್ರೋತ್ಸಾಹ ನೀಡಿದ್ದು, ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡುವ, ಬಡ ಗ್ರಾಮೀಣ ವಿಧ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಅಭ್ಯಾಸ ಮಾಡುವಾಗ ವಿದ್ಯುತ್ ಸಮಸ್ಯ ಎದುರಿಸುತ್ತಲೇ ಇರುತ್ತಾರೆ,

ಅಂತಹ ವಿಧ್ಯಾರ್ಥಿಗಳಿಗೆ ಸಮಸ್ಯ ಆಗಬಾರದೆಂದು ಒಂದು ವಿಶೇಷವಾದ ಪೆನ್ನು ತಯಾರಿಸಿ ಆ ಪೆನ್ನಿನಲ್ಲಿಯೇ ಲೈಟ್ ಫಿಕ್ಸ್ ಮಾಡಲಾಗಿದ್ದು, ಆ ಲೈಟಿನ ಸಹಾಯದಿಂದ ಕತ್ತಲೆಯಲ್ಲಿಯೂ ಅಭ್ಯಾಸ ಮಾಡಬಹುದು ಎಂದು ತಮ್ಮ ಆವಿಷ್ಕಾರದಿಂದ ತೋರಿಸಿಕೊಟ್ಟಿದ್ದಾರೆ..

ಗ್ರಾಮೀಣ ಪ್ರದೇಶದಲ್ಲಿ ಪದೇ ಪದೇ ವಿದ್ಯುತ್ ಸಮಸ್ಯ ಆಗುವುದರಿಂದ ವಿಧ್ಯಾರ್ಥಿಗಳ ಅಧ್ಯಯನಕ್ಕೆ ಸಮಸ್ಯ ಆಗಬಾರದೆಂದು, ಅದಕ್ಕೆ ಪರ್ಯಾಯವಾಗಿ ಈ ಲೈಟ್ ಪೆನ್ನನ್ನು ತಯಾರಿಸಿ, ತಮ್ಮ ಸಹಪಾಠಿ ಹಾಗೂ ಇತರ ವಿಧ್ಯಾರ್ಥಿಗಳಿಗೆ ಸಹಕಾರಿಯಾಗಿದ್ದಾರೆ..

9ನೆಯ ತರಗತಿಯ ಲೈಟ್ ಸ್ಟಾರ್ ಗ್ರೂಪಿನ ಈ ವಿಧ್ಯಾರ್ಥಿಗಳ ವಿಶೇಷವಾದ ಪೆನ್ನಿನ ಆವಿಷ್ಕಾರಕ್ಕೆ ಬೆಂಬಲ ನೀಡಿ ಹಾಗೂ ಕನ್ನಡ ಮಾಧ್ಯಮದ ಶಾಲೆಗಳ ಉದಯೋನ್ಮುಖ ಉದ್ದಿಮೀಗಳನ್ನು ಬೆಂಬಲಿಸುವ ಹಾಗೂ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮಹತ್ವವಾದ ಕಾರ್ಯವನ್ನು ಎಜುಕೇಷನ್ ಇಂಡಿಯಾ ಮಾಡಿದ್ದು ಹೆಮ್ಮೆ ಎನಿಸಿದೆ ಎಂದಿದ್ದಾರೆ..

ಎಜುಕೇಷನ್ ಇಂಡಿಯಾದ ಸಂಸ್ಥಾಪಕರಾದ ಡಾ ಮಂಜಿತ ಜೈನ್ ಅವರು ಇಂತಹ ಯುವ ವಿಧ್ಯಾರ್ಥಿ ಉದ್ದಿಮೆದಾರರನ್ನು ಪ್ರೋತ್ಸಾಹಿಸುತ್ತಾ, ಪ್ರಾರಂಭದಲ್ಲಿ , 20 ಲಕ್ಷಗಳನ್ನು ಹೂಡಿಕೆ ಮಾಡಿ, ವಿಧ್ಯಾರ್ಥಿಗಳಿಗೆ 10 ಸಾವಿರ ಪೆನ್ನುಗಳ ಆರ್ಡರ್ ನೀಡಿದ್ದು ಪ್ರಶಂಸನೀಯ ಕಾರ್ಯವಾಗಿದೆ ಎಂದಿದ್ದಾರೆ..

ಈ ಸುದ್ದಿಗೋಷ್ಟಿಯಲ್ಲಿ ಎಜುಕೇಷನ್ ಇಂಡಿಯಾದ ಸದಸ್ಯರಾದ ಕ್ವಾಂಜೀ ರೋಡ್ರಿಕ್ಸ್, ಅಲೆಕ್ಸಾಂಡರ್ ಪಿ, ಕಾಶಿನಾಥ ಕೊಪ್ಪದ, ಸಾಗರ ಬೇಳಗುಂದ್ಕರ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..