ಗ್ರಾಮ ಪಂಚಾಯತಿಗಳ ಲೆಕ್ಕಪರಿಶೋಧನಾ ವರದಿಗಳಿಗೆ ಆಕ್ಷೇಪಣೆ..

ಗ್ರಾಮ ಪಂಚಾಯತಿಗಳ ಲೆಕ್ಕಪರಿಶೋಧನಾ ವರದಿಗಳಿಗೆ ಆಕ್ಷೇಪಣೆ..

ಆಕ್ಷೇಪಣೆಗೆ ಉತ್ತರದ ವಿವರಣೆ ನೀಡುವಲ್ಲಿ ವಿಳಂಬತೆ.

ಸವದತ್ತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳೇ ಯಾಕೀ ವಿಳಂಬ?

ಬೆಳಗಾವಿ : ಸವದತ್ತಿ ತಾಲೂಕಿನ ರುದ್ರಾಪೂರ, ಹಂಚಿನಾಳ ಹಾಗೂ ಮರಕುಂಬಿ ಗ್ರಾಮ ಪಂಚಾಯತಿಗಳ 2020 – 21ನೆ ಸಾಲಿನ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಕಚೇರಿಯ ಲೆಕ್ಕಪರಿಶೋಧನಾ ವರದಿಯಲ್ಲಿ ಕೆಲ ಗೊಂದಲಗಳಿವೆ ಎಂದು ಡಾ ಬಿ, ಆರ್, ಅಂಬೇಡ್ಕರ ಶಕ್ತಿ ಸಂಘ ಬೆಳಗಾವಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ದಶರಥ ಕೋಲಕಾರ ಅವರು 22/10/2024ರಂದು ಜಿಲ್ಲಾ ಪಂಚಾಯತಿ ಕಚೇರಿಗೆ ತಮ್ಮ ಆಕ್ಷೇಪಣಾ ಅರ್ಜಿ ನೀಡಿದ್ದರು.

ದೂರು ಅರ್ಜಿ ನೀಡಿ ಸುಮಾರು ಮೂರೂವರೆ ತಿಂಗಳು ಕಳೆದರೂ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಸವದತ್ತಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿಯಾದ ಆನಂದ ಬಡಕುಂದ್ರಿ ಅವರು ವಿಷಯವನ್ನು ಪರಿಶೀಲನೆ ಮಾಡಿ, ಇಲ್ಲಿಯವರೆಗೂ ಯಾವುದೇ ವರದಿಯನ್ನು ನೀಡದೇ ಆ ಸಮಸ್ಯೆ, ಈ ಸಮಸ್ಯೆ ಎಂದು ಕಾಲಹರಣ ಮಾಡುತ್ತಿದ್ದಾರೆ.

ಇದೇ ವಿಷಯವನ್ನು ದೂರುದಾರರಾದ ಲಕ್ಷ್ಮಣ ಕೋಲಕಾರ ಅವರು ಸರ್ಕಾರದ ಅಧೀನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಇವರ ಗಮನಕ್ಕೂ ತಂದಿದ್ದು, ಇಲಾಖೆಯ ಅಧೀನ ಕಾರ್ಯದರ್ಶಿಗಳು ಕೂಡಾ ದಿನಾಂಕ 16/12/2024ರಂದು ಈ ದೂರಿನ ವಿಷಯವನ್ನು ಪರಿಶೀಲಿಸಿ ವರದಿಯನ್ನು ನೀಡುವಂತೆ ಕೇಳಿ ಪತ್ರ ಬರೆದಿದ್ದರು.

ಇಷ್ಟಾಗಿಯೂ ಸಂಬಂಧಪಟ್ಟ ಸವದತ್ತಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಆನಂದ ಬಡಕುಂದ್ರಿ ಅವರು ವರದಿ ನೀಡುವಲ್ಲಿ ತಡ ಮಾಡಿದ್ದರಿಂದ ದಿನಾಂಕ 01/02/2025ರಂದು ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ, ಸವದತ್ತಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಈ ವಿಷಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆಯನ್ನು ದಾಖಲೆಗಳ ಸಮೇತ 05/02/2025ರ ಒಳಗೆ ವರದಿ ನೀಡುವಂತೆ ಪತ್ರದ ಮುಖೇನ ಸೂಚಿಸಿದ್ದರು.

ಆದರೆ ಇಂದು ದಿನಾಂಕ 9 ಆದರೂ ಇನ್ನು ಈ ವಿಷಯದ ಕುರಿತಾಗಿ ಯಾವುದೇ ಬೆಳವಣಿಗೆಗಳು ಆಗಿಲ್ಲವೆಂದು, ಸರ್ಕಾರದ ಹಣದ ವಿಚಾರದಲ್ಲಿ ಅಧಿಕಾರಿಗಳು ಯಾಕೆ ಇಷ್ಟು ವಿಳಂಬ ಮಾಡುತ್ತಿದ್ದಾರೆ ಎಂದು ದೂರುದಾರ ಲಕ್ಷ್ಮಣ ಕೋಲಕಾರ ಅವರು ಸುದ್ದಿಗಾರರ ಮುಂದೆ ತಮ್ಮ ಅಸಮಾಧಾನ ಹೇಳಿಕೊಂಡಿದ್ದು, ಯಾವುದೇ ಕಾರಣಕ್ಕೂ ಸರ್ಕಾರದ ಹಾಗೂ ಸಾರ್ವಜನಿಕರ ತೆರಿಗೆ ಹಣ ಅನ್ಯಾಯದ ಮಾರ್ಗದಲ್ಲಿ ದುರ್ಬಳಕೆ ಆಗಲು ನಮ್ಮ “ಅಂಬೇಡ್ಕರ ಶಕ್ತಿ ಸಂಘಟನೆ” ಯಾವತ್ತೂ ಬಿಡುವದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..