ಚರಂಡಿ ಮತ್ತು ರಸ್ತೆಗಳಲ್ಲಿ ಎಲ್ಲಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ : ಜಿಪಂ ಸಿಇಓ ರಾಹುಲ್ ಶಿಂಧೆ.

ಚರಂಡಿ ಮತ್ತು ರಸ್ತೆಗಳಲ್ಲಿ ಎಲ್ಲಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ : ಜಿಪಂ ಸಿಇಓ ರಾಹುಲ್ ಶಿಂಧೆ

ಬೆಳಗಾವಿ: ಮಾನ್ಸೂನ್ ಪ್ರಾರಂಭವಾಗಿರುವದರಿಂದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ, ಪಂಚಾಯತಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವುದು, 15-20 ದಿನಗಳಲ್ಲಿ ವಾಟರ ಟ್ಯಾಂಕಗಳ ಸ್ವಚ್ಛತೆ ಕಾಪಾಡುವುದು, ನಿರಂತರವಾಗಿ ನೀರಿನ ಮಾದರಿ ಪರಿಶೀಲನೆ ಮಾಡುವುದು ಹಾಗೂ ಚರಂಡಿ ಮತ್ತು ರಸ್ತೆಗಳಲ್ಲಿ ಎಲ್ಲಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕೆಂದು ಎಲ್ಲ ತಾಲೂಕಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ (ಜೂ.12) ತಾಲ್ಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಸ್ತಿ ಸಮೀಕ್ಷೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಬಾಕಿ ಆಸ್ತಿ ಸಮೀಕ್ಷೆ ಡಾಟಾಗಳನ್ನು p2 ರಡಿಯಲ್ಲಿ ಒಂದು ವಾರದಲ್ಲಿ update ಮಾಡಲು ಸೂಚಿಸಿದರು. ಈ ಸಾಲಿನ ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು 100% ಸಾಧಿಸಲು ಎಲ್ಲ EO/PDO ರವರು ಕ್ರಮ ಜರುಗಿಸಲು ಸೂಚಿಸಿದರು.”ಸಕಾಲ ಯೋಜನೆ” ಯಡಿ ಕಾಲಮಿತಿ ಮೀರಿ ಬಾಕಿ ಉಳಿದ ಆರ್ಜಿಗಳನ್ನು ಮುಂದಿನ 2 ದಿನದಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗವಹಿಸಲು ತಿಳಿಸಿದರು, ಇಲ್ಲವಾದಲ್ಲಿ ಕ್ರಮ ಜರುಗಿಸುವುದಾಗಿ ಸೂಚಿಸಿದರು. ಅದೇ ರೀತಿ PDI (Panchayat Development Index) ಪ್ರಕ್ರಿಯೆಯನ್ನು ಮುಂದಿನ 02 ದಿನದಲ್ಲಿ ಪೂರ್ಣಗೋಳಿಸಲು ನಿರ್ದೇಶನ ನೀಡಿದರು.

ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಜನರಿಗೆ ಕೆಲಸ ನೀಡಿ ತಾಲ್ಲೂಕಾವಾರು ನೀಡಿರುವ ಗುರಿಗನುಗುಣವಾಗಿ ಪ್ರಗತಿ ಸಾಧಿಸುವುದು, ಸನ್ 2023-24 ನೇ ಸಾಲಿನಡಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೇ ಉಳಿದುಕೊಂಡಿವೆ. ಅಂತಹ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪೂರ್ಣಗೊಳಿಸಬೇಕು ಅದೇ ರೀತಿ 2024-25ನೇ ಸಾಲಿನ ನರೇಗಾ ಯೋಜನೆಯಡಿ ಆದ್ಯತೆ ಕಾಮಗಾರಿಗಳಾದ ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ಅಡುಗೆ ಕೋಣೆ, ಎಸ್.ಡಬ್ಲ್ಯೂ.ಎಮ್ ಕಟ್ಟಡ ಹಾಗೂ ಗ್ರಾಮ ಪಂಚಾಯತ ಕಟ್ಟಡಗಳನ್ನು ಆದ್ಯತೆ ಮೇರಗೆ ಕೈಗೊಳ್ಳುವಂತೆ ಸೂಚಿಸಿದರು. ಓಂಬಡ್ಸಮೆನ್ ವಸೂಲಾತಿ ಮೇಲೆ ಬಾಕಿ ಇರುವ ಮೊತ್ತವನ್ನು ಆದಷ್ಟು ಬೇಗ ವಸೂಲಾತಿ ಮಾಡಿ ಜಿಲ್ಲಾ ಪಂಚಾಯತಗೆ ವರದಿ ಸಲ್ಲಿಸಲು ಸೂಚಿಸಿದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ.