“ಚಲೋ ದಿಲ್ಲಿ” ಪತ್ತಿನ ಸಂಘಗಳ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗಿಯಾಗಿ..
ಡಾ ಸಂಜಯ ಹೊಸಮಠ, ನಿರ್ದೇಶಕರು ಹಾಗೂ ರಾಷ್ಟ್ರೀಯ ಸಂಯೋಜಕರು..
ಬೆಳಗಾವಿ : ಶುಕ್ರವಾರ ದಿನಾಂಕ 27/10/2023ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಇದೇ ಡಿಸೆಂಬರ್ ದಿನಾಂಕ 2 ಮತ್ತು 3 ರಂದು, ನವದೆಹಲಿಯಲ್ಲಿ ನಡೆಯುವ ಬ್ರಹತ್ ಪತ್ತಿನ ಸಹಕಾರಿ ಸಂಘಗಳ ರಾಷ್ಟ್ರೀಯ ಅಧಿವೇಶನದಲ್ಲಿ, ರಾಜ್ಯದ ಸಹಕಾರಿ ಸಂಘಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಎಂದು ಸಹಕಾರಿ ಸಂಘಗಳ ನಿರ್ದೇಶಕ ಹಾಗೂ ರಾಷ್ಟ್ರೀಯ ಸಂಯೋಜಕರಾದ ಡಾ ಸಂಜಯ ಹೊಸಮಠ ಕರೆ ನೀಡಿದ್ದಾರೆ..

ಈ ಅಧಿವೇಶನದಲ್ಲಿ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ಮತ್ತು ಪರಿಹಾರದ ಬಗ್ಗೆ ಮಾತುಕತೆ ಆಗುತ್ತಿದ್ದು, ದೇಶದಲ್ಲಿ ಒಟ್ಟು ಹತ್ತು ಸಾವಿರ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ನೀಡಿದರು, ಈ ರಾಷ್ಟ್ರೀಯ ಅಧಿವೇಶನವನ್ನು ಸಹಕಾರ ಭಾರತಿ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿ ನಿ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಬೆಂಗಳೂರು ಇವುಗಳ ನೇತೃತ್ವ ಮತ್ತು ಸಹಯೋಗದಲ್ಲಿ ಈ “ಚಲೋ ದಿಲ್ಲಿ” ಅಭಿಯಾನ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ..
ಕೇಂದ್ರದ ಗೃಹ ಹಾಗೂ ಸಹಕಾರ ಮಂತ್ರಿಯಾದ ಅಮಿತ್ ಷಾ ಅವರು ಈ ಅಧಿವೇಶನದಲ್ಲಿ ಉಪನ್ಯಾಸ ಹಾಗೂ ಮಾರ್ಗದರ್ಶನ ನಿಡುವರಿದ್ದು, ಎಲ್ಲಾ ಸಂಘಗಳ ಪದಾಧಿಕಾರಿಗಳು ಇದರಲ್ಲಿ ಭಾಗಿಯಾಗಿ ತಮ್ಮ ಸಂಘಗಳ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ..
ಈ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಜಗದೀಶ ಕವಟಗಿಮಠ, ತಮ್ಮಣ್ಣ ಬಾಳಪ್ಪ ಕೆಂಚರಡ್ಡಿ, ಸುಧಾಕರ ಮಹಿಂದ್ರಕರ, ಇನ್ನು ಹಲವರು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ..