ಚುನಾವಣಾ ಅಕ್ರಮಗಳನ್ನು ಜನರ ಮುಂದೆ ತೆರೆದಿಟ್ಟಿದ್ದು ರಾಹುಲ್ ಗಾಂಧಿ..
ಅವರ ಮೇಲಿನ ಆಪಾದನೆಯನ್ನು ಕಾಂಗ್ರೆಸ್ಸಿಗರಾದ ನಾವು ಖಂಡಿಸುತ್ತೇವೆ.
ವಿನಯ ನಾವಲಗಟ್ಟಿ, ಅಧ್ಯಕ್ಷರು ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕ ಬೆಳಗಾವಿ..
ಬೆಳಗಾವಿ : ಚುನಾವಣೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಜನತೆಯ ಮುಂದೆ ತೆರೆದಿಟ್ಟಿರುವ ರಾಹುಲ ಗಾಂಧಿ ಅವರ ಮೇಲೆ ಆಪಾದನೆಗಳನ್ನು ಹೊರಸುತ್ತಿರುವುದನ್ನು ಕಾಂಗ್ರಸ್ ಪಕ್ಷದವರಾದ ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.
ಬೆಳಗಾವಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ದೇಶದ ಜನತೆಗೆ ತಿಳಿದಿರುವಂತೆ ಚುನಾವಣೆಯಲ್ಲಿ ಅಕ್ರಮವಾಗುತ್ತಿವೆ ಎಂದು ದೆಹಲಿ ಮತ್ತು ಬೆಂಗಳೂರಿನ ಮುಖಂಡರು ಹೇಳುತ್ತಾ ಬಂದಿದ್ದಾರೆ. ಆದರೆ ಯಾರೂ ಸಹ ಅಷ್ಟು ಗಮನಕ್ಕೆ ತೆಗೆದುಕೊಂಡಿರಲ್ಲಿಲ್ಲ. ಇತ್ತಿಚೆಗೆ ರಾಷ್ಟ್ರೀಯ ನಾಯಕ ರಾಹುಲ ಗಾಂಧಿ ಅವರು ಯಾವ ರೀತಿ ಅಕ್ರಮ ನಡೆಯುತ್ತದೆ ಎಂಬುದನ್ನು ಸ್ಪಷ್ಠವಾಗಿ ಮಾಧ್ಯಮಗಳ ಹಾಗೂ ಜನತೆಯ ಮುಂದೆ ತೆರೆದಿಟ್ಟಿದ್ದಾರೆ.
ಇದಕ್ಕೆಲ್ಲ ಚುನಾವಣೆ ಆಯೋಗ ಉತ್ತರ ನೀಡಬೇಕು. ಸಾಮಾನ್ಯ ಜನರು ಪ್ರಶ್ನೆ ಮಾಡಿದರೂ ವೈಜ್ಞಾನಿಕ ಹಾಗೂ ಸಮಾಧಾನಕರ ಉತ್ತರವನ್ನು ಕೇಂದ್ರ ಸರ್ಕಾರ ನೀಡಬೇಕು. ಆದರೆ ಹಾರಿಕೆ ಉತ್ತರ ನೀಡುತ್ತಾ ರಾಹುಲ ಗಾಂಧಿ ಅವರ ಮೇಲೆ ಆಪಾದನೆಗಳನ್ನು ಹೊರಸುತ್ತಿರುವುದನ್ನು ನಾವು ಕಾಂಗ್ರಸ್ ಪಕ್ಷದವರು ಖಂಡಿಸುತ್ತೇವೆ ಎಂದು ಹೇಳಿದರು.
ಸಲೀಮ್ ಖತೀಬ್, ಸಲೀಮ್ ಕಾಶಿಮನ್ನವರ್, ಮೊಹಮ್ಮದ್ ರಾಹುಲ್ ಪೀರಜಾದೆ, ಮಲ್ಲೇಶ ಚೌಗಲಾ, ಕೈಮುಲ್ಲಾ ಮುಲ್ಲಾ, ಅಡಿವೇಶ್, ಪರಶುರಾಮ ವಗ್ಗನ್ನವರ, ವೈಶಾಲಿ ಸುತಾರ್, ಶಕೀಲ್ ಮುಲ್ಲಾ, ನಗರಸೇವಕಿ ಖುರ್ಷಿದ್ ಮುಲ್ಲಾ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.