ಚುನಾವಣಾ ಗೆಲುವಿಗಾಗಿ ಕೇಸರಿ ಹಿಡಿದ ಕಾಂಗ್ರೆಸ್..

ಚುನಾವಣಾ ಗೆಲುವಿಗಾಗಿ ಕೇಸರಿ ಹಿಡಿದ ಕಾಂಗ್ರೆಸ್…

ಮತಕ್ಕಾಗಿ ಮರಾಠಿ ಮಂತ್ರ ಜಪಿಸಿದ ಕಾಂಗ್ರೆಸ್ಸಿನ ಮೃಣಾಲ್ ಹೆಬ್ಬಾಳ್ಕರ್..

ಬೆಳಗಾವಿ : ರವಿವಾರ ಮುಂಜಾನೆ ಎಂಟರಿಂದಲೇ ನಗರದ ವಿವಿಧ ಭಾಗಗಳಲ್ಲಿ ಬೆಳಗಾವಿ ಲೋಕಸಭಾ ಕಾಂಗ್ರೆಸ್ಸಿನ ಸಂಭವನೀಯ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರು ತಮ್ಮ ತಾಯಿ, ಮಾವ ಹಾಗೂ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ತೊಡಗಿದ್ದರು..

ನಗರದ ವಿವಿಧ ದೇವಸ್ಥಾನ, ಮಹಾಪುರುಷರ ಪುತ್ತಳಿಗಳು, ಪ್ರಮುಖ ಸ್ಥಳಗಳು ಹಾಗೂ ಬೀದಿಗಳಲ್ಲಿ ತಮ್ಮ ಸಾವಿರಾರು ಕಾರ್ಯಕರ್ತರ ಬೈಕ್ ರ್ಯಾಲಿ ಮೂಲಕ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದರು.

ವಿಶೇಷವಾಗಿ ಈ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಭಾವುಟಕ್ಕಿಂತ ಹೆಚ್ಚು ಕೇಸರಿ ಬಾವುಟಗಳು ಎದ್ದು ಕಾಣುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಈ ಬೆಳಗಾವಿಯ ಚುನಾವಣೆ ಗೆಲ್ಲಲು ಕೇಸರಿ ಬಾವುಟ ಹಿಡಿಯುವುದು ಅನಿವಾರ್ಯವಾಯಿತೆ ಎಂಬ ಪ್ರಶ್ನೆ ಕಾಡುವಂತಿತ್ತು..

ಈ ಹಿಂದೆ ಕಾಂಗ್ರೆಸ್ಸಿನ ಯಾವುದೇ ಚುನಾವಣಾ ಕಾರ್ಯಕ್ರಮದಲ್ಲಿ ಬಹುಶಃ ಇಷ್ಟೊಂದು ಕೇಸರಿಮಯ ಇರಲಿಲ್ಲವೇನೋ, ಆದರೆ ಬೆಳಗಾವಿ ಲೋಕಸಭಾ ಕಾಂಗ್ರೆಸ್ಸಿನ ಪ್ರಚಾರದಲ್ಲಿ ಕೇಸರಿ ಕಲರವ ಕಂಗೊಳಿಸಿದ..

ಇನ್ನು ಬೆಳಗಾವಿಯ ಮರಾಠಿ ಸಮುದಾಯದ ಮತ ಸೆಳೆಯಲು ಮರಾಠಿ ಭಾಷಿಕ ಘೋಷಣೆಗಳು, ಮರಾಠಿ ಮಹಾಪುರುಷರಿಗೆ ಜೈಕಾರಗಳು ಮೊಳಗುತ್ತಿದ್ದು, ಕೇಸರಿ ಭಾವುಟಗಳಲ್ಲಿ ಮರಾಠಿ ಮಹಾಪುರುಷರ ಭಾವಚಿತ್ರ ರಾರಾಜಿಸುತ್ತಿದ್ದು, ಕನ್ನಡಿಗರು ತಾಳ್ಮೆಯಿಂದ ನೋಡುತ್ತಿದ್ದರು..

ಏನೇ ಇದ್ದರೂ ಗಡಿನಾಡಿನಲ್ಲಿ ಲೋಕಸಭಾ ಚುನಾವಣಾ ಚಟುವಟಿಕೆ ಬಿರುಬಿಸಿಲಿನಲ್ಲಿ ಬಿರುಸಿನಿಂದ ಶುರುವಾಗಿದ್ದು, ಬಿಜೆಪಿ ಕೂಡಾ ಯಾವರೀತಿಯಲ್ಲಿ ಮತ್ತು ತನ್ನ ಭದ್ರ ಕೋಟೆಯಾದ ಬೆಳಗಾವಿಯನ್ನು ಉಳಿಸಿಕೊಳ್ಳಲು ಪ್ರಚಾರ ಕಾರ್ಯ ಮಾಡುವುದೆಂದು ಕಾದು ನೋಡಬೇಕು..

ವರದಿ ಪ್ರಕಾಶ್ ಕುರಗುಂದ..