ಜನತಾ ಸಮಸ್ಯಗೆ ಶಾಸಕ ಆಶಿಫ್ ಸೇಠ್ ಅವರ ಸೂಕ್ತ ಮಾರ್ಗ..
ಜನತಾ ದರ್ಬಾರ್ ಅಭಿಯಾನದಡಿ ಜನರ ಮನೆ ಬಾಗಿಲಿಗೆ ಶಾಸಕರು..
ಬೆಳಗಾವಿ : ಉತ್ತರ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಶನಿವಾರ ದಿನಾಂಕ 09/03/2024 ರಂದು, ಸುಭಾಷ್ ನಗರ ಪ್ರದೇಶದಲ್ಲಿ ಸುತ್ತಾಡುವ ಮೂಲಕ ಜನತಾ ದರ್ಬಾರ ಎಂಬ ಕಾರ್ಯಕ್ರಮ ನಡೆಸಿದರು.
ಈ ಕಾರ್ಯದಲ್ಲಿ ಸ್ಥಳೀಯ ಕಾರ್ಪೋರೇಟರ್ ಶಾಹಿದ್ ಪಠಾಣ ಮತ್ತು ಇತರ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದು, ಶಾಸಕ ಸೇಟ್ ಅವರು ಈ ಪ್ರದೇಶದ ನಿವಾಸಿಗಳೊಂದಿಗೆ ಮಾತನಾಡಿ, ನಿವಾಸಿಗಳ ಕುಂದುಕೊರತೆ ಮತ್ತು ಸಮಸ್ಯೆಗಳನ್ನು ಆಲಿಸಿದರು.

ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಸಮಾಲೋಚಿಸಿ, ಅವುಗಳಿಗೆ ಸೂಕ್ತ ಪರಿಹಾರಗಳನ್ನು ನೀಡಿ ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂಬ ಭರವಸೆ ನೀಡಿದರು.
ಶಾಸಕ ಸೇಟ್ ಅವರು ನಗರದಾದ್ಯಂತ ಪ್ರತಿ ವಾರ್ಡಿನಲ್ಲಿಯೂ ಜನತಾ ದರ್ಬಾರ್ ನಡೆಸುತ್ತಿದ್ದು, ತಮ್ಮ ಭೇಟಿಯ ಸಂದರ್ಭದಲ್ಲಿ “ಜನರ ವಿವಿಧ ಸಮಸ್ಯೆಗಳನ್ನು ತಿಳಿಯಲು, ಅವುಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸಲು ಅನುಕೂಲವಾಗಿದೆ..

ಬೆಳಗಾವಿ ನಗರವನ್ನು ಸುಧಾರಿಸುವುದು ನನ್ನ ಗುರಿಯಾಗಿದೆ, ಅದಕ್ಕಾಗಿ ನಗರದ ಸ್ಥಳೀಯ ನಿವಾಸಿಗಳಿಗಿಂತ ಯಾರೂ ನನಗೆ ಉತ್ತಮ ತಿಳುವಳಿಕೆಯನ್ನು ನೀಡಲು ಸಾಧ್ಯವಿಲ್ಲ ಎಂದರು.
ಈ ಜನತಾ ದರ್ಬಾರ್‌ಗಳು ಬೆಳಗಾವಿ ನಗರದಲ್ಲಿ ಎಲ್ಲಾ ಕಡೆಗೂ ಮುಂದುವರಿಯುತ್ತಿದ್ದು ಎಲ್ಲಾ ನಾಗರಿಕರು ಮತ್ತು ಪ್ರದೇಶಗಳು ಸಂವಾದ ನಡೆಸಲು ಮತ್ತು ತಮ್ಮ ಸಮಸ್ಯೆಗಳನ್ನು ನೇರವಾಗಿ ನನ್ನ ಮುಂದಿಡಲು ಅವಕಾಶವಿದೆ. ಈ ಮೂಲಕ ಬೆಳಗಾವಿಯನ್ನು ಉತ್ತಮ ಸ್ಥಳವನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಶಾಸಕ (ರಾಜು) ಆಶಿಫ ಸೇಠ್ ಅವರು ತಮ್ಮ ಅಭಿಪ್ರಾಯ ಹಂಚಿಕೊಡಿದ್ದಾರೆ..
ವರದಿ ಪ್ರಕಾಶ ಕುರಗುಂದ..