ಜನಪರವಾದ ಬ್ರಹತ್ ಹೋರಾಟಗಳಿಗೆ ಯುವಕರು ಸಿದ್ದರಾಗಿ..
ಯುವಶಕ್ತಿಯನ್ನು ತಡೆಯಲು ಯಾರಿಂದಲೂ ಆಗುವದಿಲ್ಲ..
ಸ್ಫೂರ್ತಿದಾಯಕ ಮಾತಿನಿಂದ ಹುಕ್ಕೇರಿ ಯುವಕರಿಗೆ ಕರೆ ನೀಡಿದ ರಾಜ್ಯಾದ್ಯಕ್ಷ ಮಹೇಶ್ ಎಸ್ ಶೀಗಿಹಳ್ಳಿ..
ಬೆಳಗಾವಿ : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ದ ಸಂಘಟನೆಯ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನಲ್ಲಿ ಸಂಘಟನೆ ಉದ್ಘಾಟನೆ ಮಾಡಿ ನೂತನ ಪದಾದಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು..
ಸಂಘಟನೆಯ ಮುಖ್ಯ ಉದ್ದೇಶ, ಆದರ್ಶ ಹಾಗೂ ತತ್ವ ಸಿದ್ಧಾಂತಗಳ ಬಗ್ಗೆ ತಿಳಿಸಲಾಯಿತು ಜೊತೆಗೆ ಯುವಕರಿಗೆ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕೆಲವು ಮುಖ್ಯ ಅಂಶಗಳನ್ನು ಅವರೊಂದಿಗೆ ಚರ್ಚಿಸಿ, ಸಮಾಜದ ಅಭಿವೃದ್ಧಿಯ ದೃಷ್ಟಿಯಲ್ಲಿ ಮುಂದಿನ ಬೃಹತ್ ಹೋರಾಟಗಳಿಗೆ ಕರೆ ನೀಡಲಾಯಿತು.
ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಸರಕಾರಗಳಿಗೆ ಬುದ್ಧಿ ಕಲಿಸಲು ಹಾಗೂ ನ್ಯಾಯ ಪಡೆದುಕೊಳ್ಳಲು ಯುವಕರು ಒಂದಾಗಬೇಕು, ಯುವಕರಲ್ಲಿ ಇರುವ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಯುವಕರಿಗೆ ಮತ್ತೊಮ್ಮೆ ಮಗದೊಮ್ಮೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿ
ನೂತನ ಪದಾದಿಕಾರಿಗಳಿಗೆ ಅಭಿನಂದನೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿಯ ಪದಾದಿಕಾರಿಗಳು ಜಿಲ್ಲಾ ಮಟ್ಟದ ಪದಾದಿಕಾರಿಗಳು ತಾಲೂಕು ಪದಾದಿಕಾರಿಗಳು ಉಪಸ್ಥಿತರಿದ್ದರು.