ಜನರಿಗೆ ಇಷ್ಟವಾಗಿರುವ ಬಿಗ್ ಬಾಸನ ಪಾಸಿಟಿವ್ ಪರ್ಸನಾಲಿಟಿ ಗೌತಮಿ ಜಾಧವ..
ಗೌತಮಿ ಅವರ ಮುಂದಿನ ನಡೆಯ ನಿರೀಕ್ಷೆಯಲ್ಲಿರುವ ಅವರ ಅಭಿಮಾನಿಗಳು..
ಬೆಳಗಾವಿ : ಕನ್ನಡದ ಬಿಗ್ ಬಾಸ್ ಸೀಸನ್ 11ರಲ್ಲಿ ಪಾಸಿಟಿವ್ ಥಿಂಕಿಂಗ್ ಎನ್ನುತ್ತಲೆ ತಮ್ಮ ನಡುವಳಿಕೆ ಹಾಗೂ ವ್ಯಕ್ತಿತ್ವದಿಂದ ಜನರ ಪ್ರೀತಿಗೆ ಪಾತ್ರವಾಗಿರುವ ಗೌತಮಿ ಜಾಧವ ಅವರು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಮೊದಲು ಕನ್ನಡ ಸಿನಿಮಾಗಳಲ್ಲಿ ನಟಿಸಿ ನಂತರ ಜಿ ಕನ್ನಡದ ಸತ್ಯ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದ ಬೆನ್ನಲ್ಲೇ ಕನ್ನಡದ ಸಂಚಿಕೆ ಹನ್ನೊಂದರ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಭಾಗಿಯಾದ ಗೌತಮಿ ಜಾಧವ ಅವರು ಮೂಲತಃ ಬೆಳಗಾವಿಯವರು ಎಂಬ ಮಾಹಿತಿಯಿದೆ.
ಬಿಗ್ ಬಾಸ್ ಮುಗಿದ ಮೇಲೆ ಗೌತಮಿ ಜಾಧವ ಅವರು ಏನು ಮಾಡುತ್ತಾರೆ? ಸಿನಿಮಾ ಮಾಡುತ್ತಾರಾ? ಧಾರಾವಾಹಿಗಳನ್ನು ಮಾಡುತ್ತಾರಾ? ಮತ್ತೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆಗಳು ಅವರ ನಿರೀಕ್ಷೆಯಲ್ಲಿ ಕಾಯುತ್ತಿರುವ ಅವರ ಅಭಿಮಾನಿಗಳದ್ದಾಗಿವೆ, ಇತ್ತ ಅನೇಕ ಹೊಸ ಆಫರಗಳು ಗೌತಮಿ ಅವರನ್ನು ಹುಡುಕಿಕೊಂಡು ಬಂದರೂ ಎಲ್ಲವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ ಎಂಬ ಸುದ್ದಿಯಿದೆ.

ಬಿಗ್ ಬಾಸ್ ಶೋ ಮುಗಿದ ನಂತರ ಗೌತಮಿ ಅವರು ತಮ್ಮ ಆರಾಧ್ಯ ದೇವತೆ ವನದುರ್ಗಿ ದೇವಿಯ ದರ್ಶನ ಮಾಡಿ, ದೇವಿಯ ಆಶೀರ್ವಾದ ಪಡೆದಿದ್ದಾರೆ, ತದನಂತರ ತಮ್ಮ ಪತಿಯ ಜೊತೆ ಹಲವಾರು ಕಡೆಗೆ ಸುತ್ತಾಡಿಕೊಂಡು ಬಂದಿದ್ದಾರೆ, ಬಿಗ್ ಬಾಸ್ ಗೆಳೆಯ ಉಗ್ರಂ ಮಂಜು ಅವರ ಜೊತೆಗೂಡಿ ಮೊನ್ನೆ ಮಜಾ ಟಾಕೀಸ್ ಎಂಬ ರಿಯಾಲಿಟಿ ಶೋ ಅಲ್ಲಿ ಭಾಗಿಯಾಗಿದ್ದು, ಮುಂದೆ ತಮ್ಮ ಅಭಿಮಾನಿಗಳ ಎದುರು ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..